Advertisment

ರಾಜ್ಯದಲ್ಲಿ ಧಾರಾಕಾರ ಮಳೆಗೆ ಹಲವು ಅನಾಹುತ.. ಬೆಂಗಳೂರಲ್ಲೂ ಮತ್ತೆ ವರುಣಾರ್ಭಟ!

author-image
admin
Updated On
ರಾಜ್ಯದಲ್ಲಿ ಧಾರಾಕಾರ ಮಳೆಗೆ ಹಲವು ಅನಾಹುತ.. ಬೆಂಗಳೂರಲ್ಲೂ ಮತ್ತೆ ವರುಣಾರ್ಭಟ!
Advertisment
  • ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಅಸ್ತವ್ಯಸ್ತ
  • ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಬೆಂಗಳೂರು: 16 ವರ್ಷದ ಬಳಿಕ ರಾಜ್ಯದಲ್ಲಿ ಅವಧಿ ಪೂರ್ವ ಮುಂಗಾರು ಮಳೆ ಶುರುವಾಗಿದೆ. ವಾಡಿಕೆಗಿಂತ ಮೊದಲೇ ಮುಂಗಾರು ಆಗಮಿಸುವುದರ ಜೊತೆಗೆ ಕರಾವಳಿ, ಮಲೆನಾಡು ಭಾಗದಲ್ಲಿ ನಿನ್ನೆಯಿಂದಲೇ ವರುಣಾರ್ಭಟ ಜೋರಾಗಿದೆ.

Advertisment

ಸಂಜೆಯಾಗುತ್ತಿದ್ದಂತೆ ಬೆಂಗಳೂರು ನಗರದಲ್ಲಿ ಮತ್ತೆ ಮಳೆ ಆರಂಭವಾಗಿದೆ. ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿದ್ದು ಸದ್ಯ ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ ಸುರಿದಿದೆ.

publive-image

ಟೌನ್ ಹಾಲ್, ಜೆ.ಸಿ ರಸ್ತೆ, ಕೆ.ಆರ್ ಮಾರುಕಟ್ಟೆ, ಕಾರ್ಪೋರೇಷನ್, ಲಾಲ್ ಭಾಗ್, ಶಾಂತಿನಗರ, ಕೆ.ಜಿ ರೋಡ್ ಸುತ್ತಾಮುತ್ತಾ ಮಳೆಯಾಗಿದೆ. ಹವಾಮಾನ ಇಲಾಖೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಎಚ್ಚರಿಕೆ ನೀಡಿದೆ.

publive-image

ಕಾಫಿನಾಡಿನಲ್ಲಿ ಭಾರೀ ಗಾಳಿ, ಮಳೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಳಿ, ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ತರುವೆ, ಬಿನ್ನಡಿ ಭಾಗದಲ್ಲಿ ಭಾರೀ ಮಳೆಯಾಗಿದೆ.

Advertisment

publive-image

ಕೊಟ್ಟಿಗೆಹಾರದಲ್ಲಿ ಹಳ್ಳದಂತೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಮಳೆ ಜೊತೆ ಬೀಸ್ತಿರೋ ಭಾರೀ ಗಾಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಮರ, ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ.
ಮೂಡಿಗೆರೆ ತಾಲೂಕು ರಾಷ್ಟ್ರೀಯ ಹೆದ್ದಾರಿ 173ರ ಬಣಕಲ್ ಬಳಿ ನಿಯಂತ್ರಣ ತಪ್ಪಿ ಕಾರು ಹೇಮಾವತಿ ಉಪನದಿ ಕಾಲುವೆಗೆ ಬಿದ್ದಿದೆ. ಭಾರೀ ಮಳೆಯಾದರೆ ರಾ.ಹೆದ್ದಾರಿ ರಸ್ತೆ ಮಧ್ಯೆ ನೀರು ನಿಲ್ಲುತ್ತದೆ. ಮಳೆ ನೀರಿನ ಮೇಲೆ ಹೋಗುತ್ತಿದ್ದಂತೆ ವಾಹನಗಳು ಆಫ್​ ಆಗುತ್ತವೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

publive-image

ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ಮತ್ತೊಂದು ಪ್ರವಾಸಿಗರ ಕಾರು ಪಲ್ಟಿಯಾಗಿದೆ. ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಸಮಾಜ ಸೇವಕ ಆರೀಫ್ ಅವರು ಸೊಂಟಕ್ಕೆ ಹಗ್ಗ ಕಟ್ಟಿ ಹಳ್ಳದಲ್ಲಿದ್ದ ಪ್ರವಾಸಿಗರ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ಜಾಮೀನು ಸಿಕ್ಕಿದ್ದೇ ತಡ 30 ಕಿ.ಮೀ ರೋಡ್‌ ಶೋ; ಹಾನಗಲ್ ಗ್ಯಾಂಗ್‌ ಮತ್ತೆ ಜೈಲು ಪಾಲು 

Advertisment

ಉಡುಪಿಗೆ ರೆಡ್ ಅಲರ್ಟ್‌
ಪೂರ್ವ ಮುಂಗಾರು ಮಳೆಗೆ ಉಡುಪಿ ಜಿಲ್ಲೆಯಲ್ಲಿ ಆತಂಕವನ್ನೇ ಸೃಷ್ಟಿಸಿದೆ. ಬೆಳಗ್ಗೆಯಿಂದಲೇ ನಿರಂತರ ಮಳೆ, ದಟ್ಟ ಮೋಡ ಕವಿದ ವಾತಾವರಣವಿದ್ದು, ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
ಉಡುಪಿಯಲ್ಲಿ ಇಂದಿನಿಂದ 4 ದಿನ ರೆಡ್ ಅಲರ್ಟ್ ಇದ್ದು, ಕಡಲ ತೀರ ಪ್ರದೇಶದಲ್ಲೂ ಹೆಚ್ಚಿದ ಅಲೆಗಳ ಅಬ್ಬರ ಇದೆ. ಹಲವೆಡೆ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

publive-image

ಪಂಪ್​ವೆಲ್​​​ ರಸ್ತೆ ಜಲಾವೃತ
ಭಾರೀ ಮಳೆಗೆ ಮಂಗಳೂರಿನ ರಸ್ತೆಗಳು ಕೆರೆಯಂತಾಗಿದೆ. ಮಳೆಗೆ ರಸ್ತೆಯ ಮೇಲೆ ರಾಜಕಾಲುವೆಯ ನೀರು ಹರಿದಿದೆ. ಮಂಗಳೂರಿನ ಪಂಪ್​ವೆಲ್​​​ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಪಂಪ್​ವೆಲ್ ಫ್ಲೈ ಓವರ್ ಕೆಳಗೆ ಮಳೆ ನೀರು ನಿಂತಿದ್ದು, ರಸ್ತೆಯಲ್ಲಿ ಬೈಕ್​​ ಸವಾರರು ಪರದಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment