ಕೊನೆಗೂ ತಂಪೆರದ ಮಳೆರಾಯ.. ಬೆಂಗಳೂರಿನ ಹಲವೆಡೆ ವರ್ಷದ ಮೊದಲ ಮಳೆ; ಜನ ಫುಲ್ ಖುಷ್‌!

author-image
admin
Updated On
Rain Alert: ಕರ್ನಾಟಕದಲ್ಲಿ ಒಂದು ವಾರ ಮಳೆ.. 11 ಜಿಲ್ಲೆಗಳಿಗೆ ಎಚ್ಚರಿಕೆ..!
Advertisment
  • ಅಂತೂ ಇಂತೂ ಬೆಂಗಳೂರಿಗೆ ತಂಪೆರದ ಮಳೆರಾಯ
  • ನಗರದ ಕೆಲ ಭಾಗಗಳಲ್ಲಿ ವರ್ಷದ ಮೊದಲ ಮಳೆಯ ಸಿಂಚನ
  • ಮಾರ್ಚ್‌ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆ

ಕೆಂಡದಂಥಾ ಬಿಸಿಲಿಗೆ ಬಸವಳಿದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ನಗರದ ಕೆಲ ಭಾಗಗಳಲ್ಲಿ ಇಂದು ಸಣ್ಣ ಪ್ರಮಾಣದ ಮಳೆಯಾಗಿದ್ದು, ವರ್ಷದ ಮೊದಲ ಮಳೆ ಕಂಡು ಬೆಂಗಳೂರಿಗರು ಫುಲ್ ಖುಷ್ ಆಗಿದ್ದಾರೆ.

publive-image

ಬೆಂಗಳೂರಿನ HAL, ಮಾರತ್ ಹಳ್ಳಿ, ವೈಟ್‌ಫೀಲ್ಡ್‌, ಲಾಲ್‌ಬಾಗ್, ರಿಚ್ ಮಂಡ್ ಸರ್ಕಲ್, ಸುತ್ತಾ ಸಣ್ಣ ಪ್ರಮಾಣದ ಮಳೆಯಾಗಿದೆ. ಮೊದಲ‌ ಮಳೆ ಕಂಡ ಬೆಂಗಳೂರಿಗರ ಸಂತೋಷಕ್ಕೆ ಪಾರವೇ ಇಲ್ಲ.

ಇದನ್ನೂ ಓದಿ: ಸಂತಾನ ಭಾಗ್ಯಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದ್ರಾ ಕತ್ರಿನಾ ಕೈಫ್? ಏನಿದು ದೋಷ ಪರಿಹಾರ? 

ರಾಜ್ಯದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್‌ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ.

publive-image

ಮಾರ್ಚ್ 10ರಿಂದ ಪೂರ್ವ ಮುಂಗಾರು ಮಾರುತ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಮಾರ್ಚ್14ರವರೆಗೆ ಮಳೆಯಾಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment