/newsfirstlive-kannada/media/post_attachments/wp-content/uploads/2024/12/RAIN-UP-HARIYANA.jpg)
ಡಿಸೆಂಬರ್ ಬಂದ್ರೆ ಅದು ಉತ್ತರ ಭಾರತಕ್ಕೆ ಕೊರೆಯುವ ಚಳಿಯನ್ನು ಹೊತ್ತುಕೊಂಡು ಬರುತ್ತದೆ. ಆದ್ರೆ ಈ ಬಾರಿ ಕೊರೆಯುವ ಚಳಿಯ ಜೊತೆ ಮಳೆಯೂ ಕೂಡ ಹಾಜರಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಪ್ರಮುಖವಾಗಿ ಉತ್ತರ ಪ್ರದೇಶ, ಹರಿಯಾಣದಲ್ಲಿ ಮಳೆಯ ಆರ್ಭಟ ಜೋರಾಗಿದೆ.
ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಸುರಿಯುತ್ತಿರೋ ಧಾರಕಾರ ಮಳೆ ಹಾಗೂ ಕೊರೆವ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ, ಉತ್ತರ ಭಾರತ ಮತ್ತು ಹರಿಯಾಣದಲ್ಲಿ ಬಿಟ್ಟು ಬಿಡದೇ ಧಾರಕಾರವಾಗಿ ಮಳೆ ಸುರಿಯುತ್ತಿದೆ.ಇದರಿಂದಾಗಿ ವಾತವಾರಣ ಬದಲಾಗಿ ಕೊರೆವ ಚಳಿಯಲ್ಲಿಯೇ ಜನರು ತತ್ತರಿಸಿ ಹೋಗಿದ್ದಾರೆ.ಈ ಹಿನ್ನಲೆ ಹರಿಯಾಣದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಜನವರಿ 1ರಿಂದ 15ವರೆಗೆ ಖಾಸಗಿ, ಸರ್ಕಾರಿ ಶಾಲೆಗಳಿಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ಹಣವಿಲ್ಲದೇ 290 km ರೈಲಿನಲ್ಲಿ ಪ್ರಯಾಣ ಮಾಡಿದ ಯುವಕ; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ!
/newsfirstlive-kannada/media/post_attachments/wp-content/uploads/2024/12/DELHI-ROAD-COLLAPSE.jpg)
ಇನ್ನು, ಭಾರೀ ಮಳೆಯಿಂದಾಗಿ ದೆಹಲಿಯ ಆರ್ ಕೆ ಪುರಂ ಪ್ರದೇಶದಲ್ಲಿ ರಸ್ತೆಯ ಒಂದು ಭಾಗ ಕುಸಿದಿದೆ .ಎಡಬಿಡದೇ ಸುರಿದ ಮಳೆ ಹಾಗೂ ಭಾರೀ ಗಾಳಿಗೆ ​ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ.ಇದ್ರಿಂದಾಗಿ ರಸ್ತೆಯ ಒಂದು ಭಾಗವೇ ಕುಸಿದು ಗುಂಡಿಯಾಗಿದೆ. ಸದ್ಯ ಭಾರೀ ಮಳೆಗೆ ಜನರು ತತ್ತರಿಸಿ ಹೋಗಿದ್ದು, ಹವಮಾನ ಇಲಾಖೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us