/newsfirstlive-kannada/media/post_attachments/wp-content/uploads/2024/05/Team-India_m.jpg)
ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಈಗಾಗಲೇ ಶುರುವಾಗಿದೆ. ಇಂದು ನ್ಯೂಯಾರ್ಕ್​​ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್​ ಇಂಡಿಯಾ, ಐರ್ಲೆಂಡ್ ತಂಡಗಳು ಮುಖಾಮುಖಿ ಆಗಲಿವೆ.
ಇನ್ನು, ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯ ರೋಚಕವಾಗಿರಲಿದೆ. ಆದರೆ, ರೋಚಕ ಪಂದ್ಯಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ ಇದೆ. ವರುಣ ದೇವ ಕೃಪೆ ತೋರದಿದ್ರೆ ಪಂದ್ಯವೇ ರದ್ದಾಗಲಿದೆ ಎಂದು ವರದಿಯಾಗಿದೆ.
ಟೀಮ್​ ಇಂಡಿಯಾದ ಗೆಲುವನ್ನು ಕಣ್ತುಂಬಿಸಿಕೊಳ್ಳಲು ಕ್ರೀಡಾ ಪ್ರೇಮಿಗಳು ಸಿದ್ಧರಾಗಿದ್ದಾರೆ. ಇತ್ತೀಚಿನ ಹವಾಮಾನ ವರದಿಗಳ ಪ್ರಕಾರ ನ್ಯೂಯಾರ್ಕ್ ಕ್ರಿಕೆಟ್‌ಗೆ ಹೆಚ್ಚಾಗಿ ಅನುಕೂಲಕರ ಆಗಿದ್ರೂ ಸ್ವಲ್ಪ ಮಳೆ ಎಚ್ಚರಿಕೆ ಇದೆ.
ಸದ್ಯ ನ್ಯೂಯಾರ್ಕ್​ನಲ್ಲಿ ಮೋಡ ಕವಿದ ವಾತಾವರಣ ಇದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸುಮಾರು ಗಂಟೆಗೆ 16 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಓಪನಿಂಗ್.. ಹೇಗಿರುತ್ತೆ ಗೊತ್ತಾ ಇವತ್ತಿನ ಪ್ಲೇಯಿಂಗ್-11?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us