/newsfirstlive-kannada/media/post_attachments/wp-content/uploads/2024/06/BAN-VS-IND-1.jpg)
ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನ ಹೈವೋಲ್ಟೇಜ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮುಖಾಮುಖಿ ಆಗಲಿದ್ದು, ಮ್ಯಾಚ್​​ಗೆ ಮಳೆ ಅಡ್ಡಿಯಾಗಲಿದೆ ಎಂದು ತಿಳಿದು ಬಂದಿದೆ.
ಸದ್ಯ ವೆಸ್ಟ್​​ ಇಂಡೀಸ್​ನಲ್ಲಿ ಭಾರೀ ಮಳೆಯಾಗುತ್ತಿದೆ. ಗಯಾನಾದಲ್ಲೂ ಸುಮಾರು 89 ಪ್ರತಿಶತದಷ್ಟು ಮಳೆ ಆಗುತ್ತಿದೆ. ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್‌ಗೆ ಮೀಸಲು ದಿನ ಇರಿಸಲಾಗಿತ್ತು. ಆದರೆ ಎರಡನೇ ಸೆಮಿ ಫೈನಲ್​​ಗೆ ಯಾವುದೇ ಮೀಸಲು ದಿನ ಇಲ್ಲ. ಹಾಗಾಗಿ ಸದ್ಯ ಭಾರೀ ಮಳೆ ಬೀಳುತ್ತಿದ್ದು, ಪಂದ್ಯ ರದ್ದಾಗಲಿದೆ. ಒಂದು ವೇಳೆ ಮ್ಯಾಚ್​ ಸ್ಥಗಿತಗೊಂಡರೆ ಟೀಮ್ ಇಂಡಿಯಾ ನೇರ ಫೈನಲ್ ಪ್ರವೇಶ ಮಾಡಲಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್​ ಸ್ಟೇಜ್​​​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್​, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us