Advertisment

ಎಲ್ಲೆಲ್ಲೂ ತಂಪೆರೆದ ಮಳೆರಾಯ.. ರಾಜ್ಯದೆಲ್ಲೆಡೆ ಮಳೆ, ಮಳೆ.. ಎಲ್ಲಿ ಏನೆಲ್ಲ ಆಯ್ತು..

author-image
Ganesh
Updated On
ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್?
Advertisment
  • ಕರುನಾಡಿನಲ್ಲಿ ಮುಂದುವರೆದ ಮಳೆರಾಯನ ಆರ್ಭಟ
  • ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣದೇವ
  • ಬಿರುಸುಗೊಂಡ ಕೃಷಿ ಚಟುವಟಿಕೆಗಳು, ರೈತರ ಮೊಗದಲ್ಲಿ ಸಂತಸ

ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ನಿಧಾನವಾಗಿ ಜೋರಾಗುತ್ತಿದೆ. ವಿಜಯನಗರದಲ್ಲಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣದೇವ ಕೃಪೆ ತೋರಿದ್ದಾನೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

Advertisment

ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆಯಾಗಿರೋದ್ರಿಂದ ರಸ್ತೆ ಮೇಲೆ ಹಳ್ಳದಂತೆ ನೀರು ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು, ಜನರು ರಸ್ತೆ ದಾಟೋದಕ್ಕೂ ಹರಸಾಹಸ ಪಡುವಂತಾಯಿತು. ಹೂವಿನ ಅಂಗಡಿ, ಮನೆಗಳಿಗೆ ನೀರು ನುಗ್ಗಿರೋದ್ರಿಂದ ಜನರು ಹಾಗೂ ವ್ಯಾಪರಸ್ಥರು ಹೈರಾಣಗಿದ್ದಾರೆ.

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

publive-image

ಕಳೆದ ಒಂದು ವಾರದಿಂದ ಬಿಸಿಲಿನ ಬೇಗೆಯಿಂದ ಬೆಂದಿದ್ದ ಬೆಣ್ಣೆ ನಗರಿ ದಾವಣಗೆರೆ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾರದ ನಂತರ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Advertisment

ಚಿಕ್ಕಮಗಳೂರಿನಲ್ಲಿಯೂ ಮಳೆ ಆರ್ಭಟ ಮುಂದುವರೆದಿದೆ. ಬಾಳೆಹೊನ್ನೂರು, ಮೂಡಿಗೆರೆ ರಿದಂತೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಹಲ್ಗೋಡು ಸೇತುವೆಯ ಮೇಲೆ ನೀರು ಹರಿದ್ರಿಂದ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಬಾಳೆಹೊನ್ನೂರು ಕಳಸ ಹೊರನಾಡು ಮಂಗಳೂರಿಗೆ ತೆರಳುವ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಚಾರ್ಮಾಡಿ ಘಾಟ್, ಬಣಕಲ್ ಬಾಳೂರು ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗಿದ್ದು ವಾಹನ ಸವಾರರು ಪರದಾಡುವಂತಾಯಿತು.

ಇದನ್ನೂ ಓದಿ:RCBಗೆ ದುಬಾರಿ ಆಟಗಾರ.. ವಿಶ್ವಕಪ್​​ನಲ್ಲಿ 4 ಮೇಡಿನ್ ಓವರ್​ ಮಾಡಿದ ಸ್ಟಾರ್..!

publive-image

ಚಿಕ್ಕೋಡಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆ ಆಗುತ್ತಿರೋದ್ರಿಂದ ಮಂಗಾರು ಬಿತ್ತನೆಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಈ ಬಾರಿ ವಾಡಿಕೆಯಂತೆ ಜೂನ್ ತಿಂಗಳ‌ ಮೊದಲ ವಾರದಲ್ಲೇ ಮಳೆ ಆರಂಭವಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಮಳೆ ಆರಂಭವಾಗುತ್ತಿದ್ದಂತೆ ಬಿತ್ತನೆ ಕಾರ್ಯದಲ್ಲಿ ರೈತರು ಮಗ್ನರಾಗಿದ್ದು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

Advertisment

publive-image

ನಿನ್ನೆ ಸಂಜೆಯಾಗ್ತಿದ್ದಂತೆ ಬೆಂಗಳೂರಿನಲ್ಲಿಯೂ ತುಂತುರು ಮಳೆಯಾಗಿದೆ. ರಾಜ್ಯದಲ್ಲಿ ಇನ್ನು ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆ ಇದೆ. ಒಟ್ನಲ್ಲಿ.. ರಾಜ್ಯದಲ್ಲಿ ಒಂದ್ಕಡೆ ಮಳೆಯಿಂದ ಅವಾಂತರ ಸೃಷ್ಟಿಯಾದ್ರೆ ಮತ್ತೊಂದೆಡೆ ಮಳೆಯಿಂದಾಗಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ಸ್ಟೇಷನ್‌ನಲ್ಲಿ ದರ್ಶನ್‌ ನಡೆ ನುಡಿ ಹೇಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment