newsfirstkannada.com

ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆ.. ನಿಮ್ಮೂರಲ್ಲೂ ಮಳೆ ಬರುತ್ತಾ..? ಇಲ್ಲಿದೆ ಡಿಟೇಲ್ಸ್​..!

Share :

Published May 3, 2024 at 11:58am

Update May 3, 2024 at 12:50pm

    ಮೇ 6, 7 ರಂದು ಭಾರೀ ಮಳೆಯಾಗುವ ಸೂಚನೆ ಇದೆ

    ಬೆಂಗಳೂರಲ್ಲಿ ಮಳೆಯ ಆರ್ಭಟ ಹೇಗಿರಲಿದ್ಯಂತೆ ಗೊತ್ತಾ?

    9 ಜಿಲ್ಲೆಗಳು ಬಿಸಿಗಾಳಿ ಎದುರಿಸಲು ಸಿದ್ಧರಿರಿ ಎಂದ ಹವಾಮಾನ ಇಲಾಖೆ

ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅಲ್ಪಾವಧಿಯ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

​ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳಲಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರ ಮಳೆ ಬೀಳಲಿದೆ.

ಅದರಲ್ಲೂ ಬೆಂಗಳೂರಲ್ಲಿ ಗುಡುಗು, ಮಿಂಚಿನ ಜೊತೆಗೆ ಅಲ್ಲಲ್ಲಿ ಚದುರಿದ ಮಳೆ ಬೀಳಲಿದೆ. ಮುಂದಿನ ನಾಲ್ಕು ದಿನಗಳಕಾಲ ಅಲ್ಪಾವಧಿಯ ಮಳೆ ಬರುವ ನಿರೀಕ್ಷೆ ಇದೆ. ಅಲ್ಲದೇ 6 ಮತ್ತು 7 ರಂದು ಸಾಧಾರಣ ಅಥವಾ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಿಸಿಗಾಳಿ ಮುಂದುವರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆ.. ನಿಮ್ಮೂರಲ್ಲೂ ಮಳೆ ಬರುತ್ತಾ..? ಇಲ್ಲಿದೆ ಡಿಟೇಲ್ಸ್​..!

https://newsfirstlive.com/wp-content/uploads/2024/05/Kolar-Rain.jpg

Load More