/newsfirstlive-kannada/media/post_attachments/wp-content/uploads/2024/05/CHINNASWAMY_GROUD.jpg)
ಇಂದು ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ರಣರೋಚಕ ಪಂದ್ಯ ನಡೆಯಲಿದೆ. ಈಗಾಗಲೇ ಎರಡು ಕಡೆಯ ಆಟಗಾರರು ಚಿನ್ನಸ್ವಾಮಿಯಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಎಂದಿನಂತೆ ಮ್ಯಾಚ್ ಕೂಡ ಸಂಜೆ 7:30ಕ್ಕೆ ಆರಂಭವಾಗಲಿದೆ. ಆದ್ರೆ ಪ್ಲೇ ಆಫ್ನ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತದೆ ಎಂದು ಹೇಳಲಾಗುತ್ತಿದೆ.
ಚೆನ್ನೈ ಹಾಗೂ ಬೆಂಗಳೂರಿನ ರಣರಂಗಕ್ಕೆ ಫ್ಯಾನ್ಸ್ ಅಂತೂ ಕಾತುರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳಿಗೆ ಆರ್ಸಿಬಿ ತಂಡ ಪ್ಲೇ ಆಫ್ ಹಾದಿ ಹಿಡಿಯಲಿ ಎಂಬುದು ಆಸೆ ಇದೆ. ಆದರೆ ತಾಪಮಾನವು 22-30 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ನಗರದಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 87 ರಷ್ಟು ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ಇದೆ.
ಇದನ್ನೂ ಓದಿ:RCB vs CSK ಫ್ಯಾನ್ಸ್ಗೆ ಭಾರೀ ನಿರಾಸೆ.. ಶಾಕಿಂಗ್ ನ್ಯೂಸ್ ಕೊಟ್ಟ ಭಾರತದ ಹವಾಮಾನ ಇಲಾಖೆ
ಧಾರಾಕಾರವಾಗಿ ಮಳೆ ಸುರಿಯುವುದರಿಂದ ಪ್ಲೇ ಆಫ್ ಪಂದ್ಯ ನಡೆಯುತ್ತದೆಯೋ, ಇಲ್ವೋ ಎಂಬುದು ಎಲ್ಲರಲ್ಲೂ ಅನುಮಾನ ಮೂಡಿದೆ. ಇದು ಅಲ್ಲದೇ ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಜೆ ಸಮಯದಲ್ಲಿ ಗುಡುಗು ಸಹಿತ ಮಳೆಯ ನಂತರ ಮತ್ತೆ ತುಂತುರು ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಆರ್ಸಿಬಿ ಹಾಗೂ ಚೆನ್ನೈ ಮ್ಯಾಚ್ ನಡೆಯುವ ಸಮಯದಲ್ಲಿ ಮಳೆ ಸುರಿಯುವುದರಿಂದ ಕ್ರಿಕೆಟ್ ಫ್ಯಾನ್ಸ್ಗೆ ದೊಡ್ಡ ನಿರಾಸೆಯಾಗುತ್ತದೆ ಎಂದು ಹೇಳಲಾಗ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ