Advertisment

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ

author-image
Bheemappa
Updated On
ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ವರುಣಾರ್ಭಟ.. ಭಾರೀ ಮಳೆಗೆ ವಿಶ್ವಮಾನವ ಟ್ರೈನ್ ಮೇಲೆ ಬಿದ್ದ ಮರ
Advertisment
  • ಉದ್ಯಾನನಗರಿಯಲ್ಲೂ ಮುಂದುವರಿದ ಮಳೆ, ಎಲ್ಲೆಲ್ಲಿ ಏನೇನು ಆಗಿದೆ?
  • ಮಳೆಯಲ್ಲಿ ಸಂಚರಿಸುವಾಗ ಜವಾಬ್ದಾರಿಯುತವಾಗಿ ಚಾಲನೆ ಮಾಡಿ.!
  • ಅಂಡರ್​ಪಾಸ್, ರಸ್ತೆಗಳಲ್ಲಿ ಮಳೆನೀರು ನುಗ್ಗಿ ಜನರಿಗೆ ಭಾರೀ ಸಂಕಷ್ಟ

ಒಂದಿನ ಮಳೆ.. ಒಂದಿನ ಬಿಸಿಲು.. ಮತ್ತೆ ಮಳೆ.. ಮತ್ತೆ ಬಿಸಿಲು.. ಹೀಗೆ ಮಳೆರಾಯ ಮತ್ತು ಸೂರ್ಯ ದೇವ ಶಿಫ್ಟ್ ಹಾಕ್ಕೊಂಡಿದ್ದಾರೆ ಅನಿಸುತ್ತದೆ. ಒಂದು ದಿನ ಮಳೆ ಅಬ್ಬರಿಸಿದ್ರೆ.. ಮತ್ತೊಂದು ದಿನ ಸೂರ್ಯ ದೇವರು ತನ್ನ ಬಿಸಿಲ ಶಾಖ ತೋರಿಸುತ್ತಿದ್ದಾನೆ. ಆದ್ರೂ ಸುರಿಯುತ್ತಿರೋ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗ್ತಿವೆ.

Advertisment

ಧರೆಗುರುಳಿದ ಮರಗಳು, ಮಳೆ ನೀರು ನುಗ್ಗಿ ಜನರು ಹೈರಾಣು

ಬೆಂಗಳೂರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿದು ಹಲವು ಅವಾಂತರಗಳು ಸೃಷ್ಟಿಯಾಗ್ತಿದೆ. ಒಂದೆಡೆ ಮಳೆಗೆ ಮರಗಳು ಬಿದ್ದು ಸಮಸ್ಯೆಯಾದ್ರೆ ಮತ್ತೊಂದೆಡೆ ಅಂಡರ್​ಪಾಸ್, ರಸ್ತೆ ಒಂದಷ್ಟು ಕಡೆ ಮಳೆನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದ್ದಾರೆ. ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಹೆಚ್ಚು ಮಳೆಯಾಗಿದ್ದು, ಇದುವರೆಗೆ ಸುಮಾರು 150 ಕಡೆ ನೀರು ನಿಂತು ಸಮಸ್ಯೆಯಾಗಿದೆ.

publive-image

ಬೆಂಗಳೂರಿನ ಹಲವು ಏರಿಯಾಗಳಲ್ಲಿ ಆರ್ಭಟಿಸಿ ವರುಣ ದೇವ

ಬೆಂಗಳೂರಲ್ಲಿ ಮತ್ತೆ ವರುಣ ದೇವ ಅಬ್ಬರಿಸಿದ್ದಾನೆ. ಸಂಜೆವರೆಗೆ ಸಾಮಾನ್ಯವಾಗಿದ್ದ ಬೆಂಗಳೂರಿನ ವಾತಾವರಣ ರಾತ್ರಿ ಸಂಪೂರ್ಣ ಬದಲಾಗಿದೆ. ನಗರದ ಬಹುತೇಕ ಭಾಗದಲ್ಲಿ ಮಳೆ ಅಬ್ಬರಿಸಿದೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿ, ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ನೃಪತುಂಗ ರಸ್ತೆಯಲ್ಲಿ ಧರೆಗುರುಳಿದ ಮರದ ಕೊಂಬೆ, ಟ್ರಾಫಿಕ್ ಜಾಮ್

ನೃಪತುಂಗ ರಸ್ತೆಯಲ್ಲಿ ಸುಮಾರು ರಾತ್ರಿ 11:45ಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದೆ ಬೃಹತ್ ಮರದ ಕೊಂಬೆ ಧರೆಗುರುಳಿದೆ. ಪರಿಣಾಮ ಕೆಆರ್ ವೃತ್ತದಿಂದ ಸುಮಾರು 5 ಕಿಲೋ ಮೀಟರ್ ವರೆಗೂ ಟ್ರಾಫಿಕ್​ ಜಾಮ್ ಆಗಿ ವಾಹನ ಸವಾರರ ಪರದಾಡಿದ್ದಾರೆ. ಇನ್ನೂ ಟ್ರಾಫಿಕ್​ನಲ್ಲಿ ಸಿಲುಕಿದ ಆಂಬ್ಯುಲೆನ್ಸ್ ಸುಮಾರು 30 ನಿಮಿಷಗಳ ಕಾಲ ನಿಂತಲ್ಲಿ ನಿಂತಿತ್ತು.. ಆಂಬ್ಯುಲೆನ್ಸ್​ನಲ್ಲಿದ್ದ ರೋಗಿ ಕೂಡ ಪರದಾಡಿದ್ರು. ಎಷ್ಟೊತ್ತು ಕಾದ್ರೂ ಬಿಬಿಎಂಪಿ ಸಿಬ್ಬಂದಿ ಮರ ತೆರವಿಗಾಗಿ ಬಾರದ ಕಾರಣ, ಪೊಲೀಸ್ ಪೇದೆಗಳ ಮುಂದೆ ಬಂದು, ಸಾರ್ವಜನಿಕರ ಸಹಾಯ ಕೇಳಿ ಬೃಹತ್ ಕೊಂಬೆ ತೆರವು ಗೊಳಿಸಿದ್ದಾರೆ.

Advertisment

ಬಿರುಗಾಳಿ ಸಹಿತ ಮಳೆಗೆ ಚಲಿಸುತ್ತಿದ್ದ ಟ್ರೈನ್ ಮೇಲೆ ಬಿದ್ದ ಮರ

ಮಂಡ್ಯ
ಬಿರುಗಾಳಿ ಸಹಿತ ಬಂದ ಭಾರೀ ಮಳೆಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಿಶ್ವಮಾನವ ಟ್ರೈನ್ ಮೇಲೆ ಮರ ಬಿದ್ದಿದೆ. ಇನ್ನೂ ಮರ ಬಿದ್ದ ಪರಿಣಾಮ ರೈಲಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿದ್ದು, ರೈಲು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು, ಚಾಲಕನಿಗೆ ಗಾಯಗಳಾಗಿದ್ದರೂ ಟ್ರೈನ್ ಅನ್ನ ಮಂಡ್ಯ ರೈಲ್ವೆ ನಿಲ್ದಾಣದವರೆಗೂ ತಂದಿದ್ದಾನೆ. ಗಾಯಾಳು ಚಾಲಕನಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ:ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

publive-image

ಕೋಟೆ ನಾಡಿನಲ್ಲಿ ಭಾರೀ ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ

ಚಿತ್ರದುರ್ಗ
ಬರಗಾಲದಿಂದ ಕಂಗೆಟ್ಟಿದ್ದ ಕೋಟೆ ನಾಡು ಚಿತ್ರದುರ್ಗದಲ್ಲಿ ಸುಮಾರು 3 ದಿನಗಳಿಂದ ಮಳೆಯಾಗುತ್ತಿದ್ದು, ಚಿತ್ರದುರ್ಗ ತಾಲೂಕಿನ ದೇವರಮರುಕುಂಟೆ ಗ್ರಾಮದಲ್ಲಿ ಪ್ರಭಾಕರ್ ಎನ್ನುವ ರೈತ 5 ಎಕರೆ ಬಾಳೆ ಬೆಳೆದಿದ್ದು ರಾತ್ರಿ ಸುರಿದ ಗಾಳಿ ಮಳೆಗೆ ಫಸಲಿಗೆ ಬಂದಿದ್ದ ಬಾಳೆ ಸಂಪೂರ್ಣ ನೆಲಕಚ್ಚಿದೆ‌. ಬರಗಾಲದಲ್ಲಿ ಒಡೆತದ ಜೊತೆ ರೈತ ಬೆಳದಿದ್ದ ಬೆಳ ನಾಶವಾಗಿ ಮತ್ತೆ ಸಂಕಷ್ಟಕ್ಕೀಡಾಗಿದ್ದಾನೆ.

ಇನ್ನೂ 5 ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದೆ. ಹವಾಮಾನ ಇಲಾಖೆ ಬಿರುಗಾಳಿ ಸಹಿತ ಮಳೆಯಾರ್ಭಟದ ಮುನ್ಸೂಚನೆ ನೀಡಿದೆ. ಮಳೆಯಲ್ಲಿ ಸಂಚರಿಸುವಾಗ ಜವಾಬ್ದಾರಿಯುತವಾಗಿ ಚಾಲನೆ ಮಾಡಿ ಅನ್ನೋದೆ ನಮ್ಮ ಕಳಕಳಿ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment