ಮಳೆ ಬಂದಾಗ ಲಂಡನ್​​ನಂಥ ನಗರಗಳು ನೀರನ್ನು ಹೇಗೆ ಹೀರಿಕೊಳ್ತವೆ.. ಬೆಂಗಳೂರಲ್ಲಿ ಯಾಕೆ ಅನಾಹುತ ಆಗುತ್ತಿದೆ?

author-image
Ganesh
Updated On
ಮಳೆ ಬಂದಾಗ ಲಂಡನ್​​ನಂಥ ನಗರಗಳು ನೀರನ್ನು ಹೇಗೆ ಹೀರಿಕೊಳ್ತವೆ.. ಬೆಂಗಳೂರಲ್ಲಿ ಯಾಕೆ ಅನಾಹುತ ಆಗುತ್ತಿದೆ?
Advertisment
  • ರಾತ್ರಿ ಸುರಿದ ಭಾರೀ ಮಳೆಗೆ ಇಡೀ ಬೆಂಗಳೂರು ಸುಸ್ತು
  • ಬೆಂಗಳೂರಲ್ಲಿ ಮಳೆಯಿಂದ ಏನೆಲ್ಲ ಸಮಸ್ಯೆ ಆಗುತ್ತಿದೆ..?
  • ಮಳೆ ನೀರಿನ ಸಮಸ್ಯೆ ನಿವಾರಣೆಗೆ ಪರಿಹಾರವೇ ಇಲ್ಲವೇ?

ಬೆಂಗಳೂರಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಇಡೀ ಸಿಲಿಕಾನ್ ಸಿಟಿಯ ಜೀವನ ತತ್ತರಿಸಿ ಹೋಗಿದೆ. ಬೆಳಗಿನ ಜಾವ 3 ಗಂಟೆಯಿಂದ ಸತತ ಎರಡು ಗಂಟೆಗಳ ಕಾಲ ಜಡಿದ ಮಳೆಗೆ ನಗರದ ಪ್ರಮುಖ ಭಾಗಗಳು ಮುಳುಗಡೆ ಪೀಡಿತ ಪ್ರದೇಶಗಳಂತೆ ಭಾಸವಾಗುತ್ತಿವೆ. ರಸ್ತೆಯ ಹೊಂಡಗಳಲ್ಲಿ ಕಾರುಗಳು ಸಿಲುಕಿಕೊಂಡಿವೆ, ಬೈಕ್​​ಗಳು ನಿಯಂತ್ರಣ ತಪ್ಪಿ ಬಿದ್ದಿವೆ. ಮೆಟ್ರೋ ನಿಲ್ದಾಣದ ರಸ್ತೆಗಳು ಜಲಾವೃತಗೊಂಡಿವೆ. ಬಹುತೇಕ ರಸ್ತೆಗಳಲ್ಲಿ ಕೆಸರು ಎದ್ದಿದೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡೋಕೂ ಕಷ್ಟವಾಗಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಿಲೋ ಮೀಟರ್​ ದೂರ ಟ್ರಾಫಿಕ್ ಜಾಮ್ ಆಗಿದೆ. ಪರಿಣಾಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಆಗಿದೆ. ಪರಿಣಾಮ ಬಿಬಿಎಂಪಿ, ಸಂಬಂಧಿಸಿದ ಅಧಿಕಾರಿಗಳು, ರಾಜಕಾರಣಿಗಳು ಜನರ ಬಾಯಿಂದ ಹಿಡಿ ಶಾಪ ಹಾಕಿಸಿಕೊಳ್ಳುತ್ತಿದ್ದಾರೆ. ಇದು ಬ್ರಾಂಡ್ ಬೆಂಗಳೂರಿನ ಅಸಲಿ ಕತೆ!

ಅಂದ್ಹಾಗೆ ಇದು ಕೇವಲ ಬೆಂಗಳೂರಿನ ಕತೆ ಮಾತ್ರವಲ್ಲ. ದೇಶದ ಬಹುತೇಕ ಮಹಾನಗರಗಳ ಸಮಸ್ಯೆ ಇದೇ ಆಗಿದೆ. ಮಹಾರಾಷ್ಟ್ರ, ಚೆನ್ನೈ, ದೆಹಲಿಯಲ್ಲೂ ಇದೇ ಕತೆ. ಆದರೆ ಇಂಗ್ಲೆಂಡ್, ಅಮೆರಿಕದಂಥ ದೇಶಗಳಲ್ಲಿರುವ ದೊಡ್ಡ ದೊಡ್ಡ ನಗರಗಳಲ್ಲಿ ಯಾಕೆ ಇದು ಸಂಭವಿಸಲ್ಲ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಕಾರಣ ಕೂಡ ಇದೆ. ಮೊದಲು ಬೆಂಗಳೂರಿನಂಥ ನಗರಗಳ ಸಮಸ್ಯೆ ಏನು ಅನ್ನೋ ವಿವರ ಇಲ್ಲಿದೆ.

publive-image

ಸಮಸ್ಯೆ ಏನು..?
ಅಸಮರ್ಪಕ ಮೂಲ ಸೌಕರ್ಯ: ಬೆಂಗಳೂರು ಅಸಮರ್ಪಕ ಮೂಲ ಸೌಕರ್ಯದಿಂದ ಬಳಲುತ್ತಿದೆ. ಅತ್ಯಂತ ಪುರಾತನ ಹಾಗೂ ಅಸಮರ್ಪಕ ಒಳಚಂಡಿ ವ್ಯಸವ್ಥೆ ಹೊಂದಿದೆ. ಇಲ್ಲಿರುವ ಒಳಚರಂಡಿ ವ್ಯವಸ್ಥೆ ಮಳೆಯ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ಸಣ್ಣ ಮಳೆ ಬಂದರೂ ಕೆಲವು ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದು ಬರುತ್ತದೆ.

ಮಳೆ ನೀರು ಕೊಯ್ಲು ಕೊರತೆ: ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಮಳೆ ನೀರಿನ ಕೊಯ್ಲಿನ ಕೆಲಸಗಳು ಪ್ರಾರಂಭ ಆಗಿವೆ. ಆದರೆ ಇದು ನಿರೀಕ್ಷೆಯ ಪ್ರಮಾಣದಲ್ಲಿ ಇಲ್ಲ. ಈ ವ್ಯವಸ್ಥೆಯನ್ನು ನಗರ ಯೋಜನೆಯೊಂದಿಗೆ ಜೋಡಿಸಿಲ್ಲ. ಆದರೆ ಲಂಡನ್​​ನಂಥ ನಗರಗಳಲ್ಲಿ ಈ ವ್ಯವಸ್ಥೆ ಮೊದಲಿನಿಂದಲೂ ಇದೆ. ಇದು ಕಾರ್ಯರೂಪಕ್ಕೆ ಬಂದರೆ ನಗರವು ಸರಿಯಾದ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಬಹುದು.

ಇದನ್ನೂ ಓದಿ:ಆಸ್ಪತ್ರೆಗೆ ಹೋಗುವ ಮುನ್ನ ಒಮ್ಮೆ ವಿಚಾರಿಸಿ.. ಇವತ್ತು ಡಾಕ್ಟರ್​ ಸಿಗೋದೇ ಡೌಟ್​, ಯಾಕೆಂದರೆ..

publive-image

ನಗರೀಕರಣ ಮತ್ತು ಹವಾಮಾನ ಬದಲಾವಣೆ: ಇನ್ನು ಬೆಂಗಳೂರು ದಿನದಿಂದ ದಿನಕ್ಕೆ ಕ್ಷಿಪ್ರ ರೀತಿಯಲ್ಲಿ ಬೆಳವಣಿಗೆ ಆಗುತ್ತಿದೆ. ಕ್ಷಿಪ್ರ ನಗರೀಕರಣದಿಂದಾಗಿ ನೀರನ್ನು ಹೀರಿಕೊಳ್ಳುವ ಪ್ರದೇಶಗಳು ಕಡಿಮೆ ಆಗಿವೆ. ಜೌಗು ಪ್ರದೇಶಗಳು, ಹಸಿರುವ ಪ್ರದೇಶಗಳು ಮಾಯವಾಗಿವೆ. ಹವಾಮಾನ ಬದಲಾವಣೆಯಿಂದಾಗಿ ಆಗಾಗ ಯಾವುದೇ ಸೂಚನೆ ಇಲ್ಲದೇ, ಯಾವುದೇ ಸಮಯದಲ್ಲೂ ಮಳೆ ಬೀಳುತ್ತಿರುತ್ತದೆ. ಇದರಿಂದಾಗಿ ಒಳಚರಂಡಿ ವ್ಯಸಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬಿಳುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.

ಸರ್ಕಾರದ ಸೀಮಿತ ಬೆಂಬಲ: ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂಥ ವಿಚಾರಗಳಿಗೆ ಪ್ಲಾನ್​ಗಳು ತುಂಬಾನೇ ಕಡಿಮೆ. ಮಳೆ ನೀರು ಕೊಯ್ಲಿನ ಬಗ್ಗೆ ಪಠ್ಯ-ಪುಸ್ತಕಗಳಲ್ಲಿ ಇವೆಯೇ ಹೊರತು, ಅಂದುಕೊಂಡಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಯಾನಗಳು ನಡೆಯುತ್ತಿಲ್ಲ, ಕಾರ್ಯರೂಪಕ್ಕೂ ಬರುತ್ತಿಲ್ಲ. ನೀರಿನ ಕೊಯ್ಲು ಮಾಡೋರಿಗೆ ಪ್ರೋತ್ಸಾಹ ಕೂಡ ಸರ್ಕಾರದಿಂದ ಸಿಗುತ್ತದೆ. ಈ ವ್ಯವಸ್ಥೆಗಳನ್ನು ಕಟ್ಟಡಗಳಲ್ಲಿ ಅಳವಡಿಸುವುದರಿಂದ ನಗರದಲ್ಲಿ ನೀರಿನ ನಿರ್ವಹಣೆ ಸುಲಭವಾಗಲಿದೆ.

publive-image

ಲಂಡನ್ ವ್ಯವಸ್ಥೆ ಹೇಗಿದೆ..?
ಲಂಡನ್​ನ ಹೆಚ್ಚಿನ ಸ್ಥಳಗಳಲ್ಲಿ ಮಳೆ ನೀರು ಕೊಯ್ಲಿಗೆ ಸಂಪೂರ್ಣ ಗಮನ ನೀಡಲಾಗಿದೆ. ಈ ವ್ಯವಸ್ಥೆ ಕಟ್ಟಡಗಳ ಮೇಲೆ ಇದೆ. ಮಳೆ ನೀರು ಶೇಖರಿಸಿ ಮರುಬಳಕೆ ಮಾಡಲಾಗುತ್ತದೆ. ಉದಾಹರಣೆಗೆ ಲಂಡನ್ ಮ್ಯೂಸಿಯಮ್ ತೆಗೆದುಕೊಂಡರೆ, ಅಲ್ಲಿ 850 ಚದರ್ ಮೀಟರ್ ಟೆರೇಸ್ ಇದೆ. ಇಲ್ಲಿ ಮಳೆಗಾಲದಲ್ಲಿ ಬರೋಬ್ಬರಿ 25 ಸಾವಿರ ಲೀಟರ್ ನೀರು ಸಂಗ್ರಹ ಮಾಡಲಾಗುತ್ತದೆ. ಆ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಟಾಯ್ಲೆಟ್ ಫ್ಲಶಿಂಗ್, ಗಿಡಮರಗಳು, ಪಾರ್ಕ್​​ಗಳಿಗೆ ಸೇರಿದಂತೆ ಹಲವು ಕೆಲಸಗಳಿಗೆ ಈ ನೀರನ್ನು ಬಳಸಲಾಗುತ್ತದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಭಾರೀ ಮಳೆ.. ರಸ್ತೆಗಳೆಲ್ಲ ಮುಳುಗಡೆ.. ಬೆಳ್ಳಂಬೆಳಗ್ಗೆ ಅನಾಹುತದ ಆತಂಕ..

publive-image

ಸುಸ್ಥಿರ ಒಳಚರಂಡಿ ವ್ಯವಸ್ಥೆ: ಲಂಡನ್​ನಲ್ಲಿ ಮಳೆ ನೀರಿನ ನಿರ್ವಹಣೆಯ ತಂತ್ರಗಳು ಉತ್ತಮವಾಗಿರೋದ್ರಿಂದ ಒಳಚರಂಡಿ ವ್ಯವಸ್ಥೆಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಮಳೆ ನೀರನ್ನು ಸಕಾಲಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಅನಗತ್ಯವಾಗಿ ಮಳೆ ನೀರು ಚರಂಡಿ ಸೇರೋದಿಲ್ಲ. ಬಳಕೆ ಮಾಡಲು ಸಾಧ್ಯವಾಗದ ನೀರು ಮಾತ್ರ ಚರಂಡಿ ಸೇರುತ್ತದೆ. ಇನ್ನೊಂದು ವಿಶೇಷ ಅಂದರೆ ನೀರು ಸಂಗ್ರಹಿಸಲು ಸಾಧ್ಯವಾಗದ ಕಡೆಗಳಲ್ಲಿ ಮರುಬಳಕೆ ಮಾಡಬಹುದಾದ ಶುದ್ಧ ನೀರು ಚರಂಡಿ ಬದಲಾಗಿ ಬೇರೆ ಮೂಲಗಳಲ್ಲಿಯೇ ಹರಿಯುವ ವ್ಯವಸ್ಥೆಗಳಿವೆ.

ಕಾನೂನು ಮತ್ತು ಪ್ರೋತ್ಸಾಹ: ಲಂಡನ್ ಸರ್ಕಾರವು ಮಳೆ ನೀರು ಕೊಯ್ಲನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಅದಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಪ್ರತಿ ಹೊಸ ಕಟ್ಟಡದಲ್ಲೂ ಇದನ್ನು ಅಳವಡಿಸಿಕೊಂಡಿರಬೇಕು. ಇಂತಹ ನಿಯಮಗಳು ಬೆಂಗಳೂರಲ್ಲೂ ಇದ್ದರೆ ಮಳೆ ನೀರಿನ ಅದ್ವಾನಗಳಿಗೆ, ಅವಾಂತರಗಳಿಗೆ ಮುಕ್ತಿ ಸಿಗಲಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬೆಂಗಳೂರು ಮಂದಿಗೆ ಬಿಗ್ ಶಾಕ್; ನೀರಲ್ಲಿ ಮುಳುಗಿದ ಕಾರು.. ಕೆಟ್ಟು ನಿಂತ ಆ್ಯಂಬುಲೆನ್ಸ್​.. ಏನೆಲ್ಲ ಆಗ್ತಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment