/newsfirstlive-kannada/media/post_attachments/wp-content/uploads/2024/10/RAIN-4-1.jpg)
ಬೆಂಗಳೂರಿನಲ್ಲಿ ವರುಣನ ಆಟಕ್ಕೆ ಇಡೀ ಜನಜೀವನ ತತ್ತರಿಸಿದೆ. ಮೊನ್ನೆ ರಾತ್ರಿ ಆರಂಭವಾದ ಜಿಟಿ ಜಿಟಿ ಮಳೆ, ಇವತ್ತು ಮುಂದುವರಿದಿದೆ. ಇತ್ತ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡ ಭಾಗದಲ್ಲೂ ಮಳೆಗೆ ವಿರಾಮವೇ ಬಿದ್ದಿಲ್ಲ.. ಈ ಮಳೆಯಿಂದ ಕೆಲ ಅಹಿತಕರ ಘಟನೆಗಳು ನಡೆದಿವೆ.
ಮೂರು ದಿನಗಳಿಂದ ಮಳೆ, ಮೈಕೊರೆಯುತ್ತಿದೆ ಚಳಿ
ಕೋಲಾರ ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಮಳೆ ಸುರಿಯುತ್ತಲೇ ಇದೆ. ಮೊನ್ನೆಯಿಂದ ಚಳಿ ಚಳಿ ತಾಳೆನೂ ಈ ಚಳಿಯಾ ಅನ್ನೊಂಗಾಗಿದೆ. ಜಿಲ್ಲೆಯ ಕೆಲವೆಡೆ ತುಂತುರು ಮಳೆ, ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಗೆ ಯೆಲ್ಲೋ ಅಲರ್ಟ್​​​ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ, ಜಾರ್ಖಂಡ್, ವಯನಾಡು ಚುನಾವಣೆಗೆ ದಿನಾಂಕ ಘೋಷಣೆ; ಮತ್ತೊಂದು ಅಗ್ನಿಪರೀಕ್ಷೆಯ ಪಟ್ಟಿ ಇಲ್ಲಿದೆ!
/newsfirstlive-kannada/media/post_attachments/wp-content/uploads/2024/10/rain-1.jpg)
ಮಳೆಗೆ ಸರಿದ ಬಂಡೆ, ಮೂವರು ಸಾವು
ಲಿಂಗಸುಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಘೋರ ದುರಂತ ನಡೆದಿದೆ. ಶಾಲೆಗಳ ರಜೆ ಕಾರಣ ಮಕ್ಕಳು ಜಮೀನಿಗೆ ತೆರಳಿದ್ದರು. ಜಿಟಿ ಜಿಟಿ ಮಳೆಯಿಂದ ಕಲ್ಲು ಬಂಡೆ ಬಳಿ ಕುಳಿತಿದ್ದರು. ಈ ವೇಳೆ, ಮಣ್ಣು ಜರಿದು ಮಕ್ಕಳ ಮೇಲೆ ಬಂಡೆ ಉರುಳಿದೆ ಅಂತ ಗೊತ್ತಾಗಿದೆ. ಘಟನೆಯಲ್ಲಿ ಮಂಜುನಾಥ, ವೈಶಾಲಿ, ರಘು ಎಂಬ ಮೂವರು ಸಾವನ್ನಪ್ಪಿದ್ದಾರೆ.
ಮಳೆ ನಡುವೆ ಬೀಚ್​ನಲ್ಲಿ ಪ್ರವಾಸಿಗರ ಮೋಜು
ಇನ್ನು, ಉಡುಪಿಯಲ್ಲಿ ನಿರಂತರ ಮಳೆಯಾಗ್ತಿದೆ. ಮಕ್ಕಳಿಗೆ ಮಧ್ಯಾವಧಿ ರಜೆ ಕಾರಣ ಪ್ರವಾಸಿಗರು ನವರಾತ್ರಿ ಮುಗಿದರೂ ದಂಡುದಂಡಾಗಿ ಕರಾವಳಿಗೆ ಲಗ್ಗೆ ಇಡ್ತಿದ್ದಾರೆ. ಗಾಳಿ, ಮಳೆ ನಡುವೆ ಪ್ರವಾಸಿಗರು ನೀರಿನಲ್ಲಿ ಆಟವಾಡ್ತಿದ್ದು, ಅಲೆಗಳ ಎಚ್ಚರಿಕೆ ನೀಡಲಾಗ್ತಿದೆ..
ನಾಲ್ಕು ದಿನಗಳ ಕಾಲ ಜಡಿ ಮಳೆಯ ಕಾಟ!
ಅಂದ್ಹಾಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ರಾಜ್ಯದ ಹಲವೆಡೆ 4 ದಿನ ಮಳೆ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಿಗೆ ಆರೆಂಜ್​ ಮತ್ತು ಯೆಲ್ಲೂ ಅಲರ್ಟ್​ ಜಾರಿ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/10/death.jpg)
ಯಾವ ಜಿಲ್ಲೆಗೆ ಆರೆಂಜ್​​ ಅಲರ್ಟ್​​
- ಬೆಂಗಳೂರು, ಕೋಲಾರ, ಶಿವಮೊಗ್ಗ
- ಮಂಡ್ಯ, ರಾಮನಗರ, ಹಾಸನ, ಮೈಸೂರು
- ಚಾಮರಾಜನಗರ ತುಮಕೂರು, ಕೊಡಗು
- ಉಡುಪಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ
ಯಾವ ಜಿಲ್ಲೆಗೆ ಯೆಲ್ಲೋ ಅಲರ್ಟ್​​
ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನಲೆ ಯಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಇತ್ತ, ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಇನ್ನೂ 4 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us