ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ.. ಎಲ್ಲೆಲ್ಲಿ, ಎಷ್ಟು ದಿನ ಭರ್ಜರಿ ಮಳೆ..?

author-image
Ganesh
Updated On
ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ.. ಎಲ್ಲೆಲ್ಲಿ, ಎಷ್ಟು ದಿನ ಭರ್ಜರಿ ಮಳೆ..?
Advertisment
  • ಮಳೆ ಎಫೆಕ್ಟ್ ಧರೆಗುರುಳಿದ ಭಾರೀ ಗಾತ್ರದ ಮರ
  • ಬಿರುಗಾಳಿ ಸಹಿತ ಭಾರೀ ಮಳೆಗೆ ಕಂಗಾಲದ ಜನ
  • ಗಾಳಿ ಮಳೆಗೆ ನೆಲಕ್ಕುರುಳಿದ ಮನೆಯ ಮುಂದಿನ ಚಪ್ಪರ

ಮಳೆಗಾಲ ಆರಂಭಕ್ಕೂ ಮೊದಲೇ ರಾಜ್ಯದಲ್ಲಿ ಮಳೆ ಹಂಗಾಮ ಶುರುವಾಗಿದೆ. ಮಳೆಯಿಂದ ಹಾನಿಗೊಳಗಾದವರ ಮೊಗದಲ್ಲಿ ಕಣ್ಣೀರಿದ್ರೆ, ರೈತಾಪಿವರ್ಗದ ಮೊಗದಲ್ಲಿ ಮಂದಹಾಸ ಇಣುಕಿದೆ.

ಮಳೆ ಎಫೆಕ್ಟ್ ಧರೆಗುರುಳಿದ ಭಾರೀ ಗಾತ್ರದ ಮರ

ಸಣ್ಣ ಮಳೆಗೂ ಬೆಂಗಳೂರಿಗೆ ತಡ್ಕೊಳ್ಳೋ ಶಕ್ತಿ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಸಂಜೆ ವೇಳೆಗೆ ಆರಂಭವಾದ ಮಳೆ, ವೈಟ್​ಫೀಲ್ಡ್, ಜಯನಗರ, ಕೆಂಗೇರಿಯಲ್ಲಿ ಸೇರಿ ಹಲವೆಡೆ ಸುರಿದಿದೆ. ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ಮಳೆಗೆ ಭಾರೀ ಗಾತ್ರದ ಮರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗದೆ ಅನಾಹುತ ತಪ್ಪಿದೆ..

ಇದನ್ನೂ ಓದಿ: ಮೋದಿ, ಅಮಿತ್ ಶಾ ಸೇರಿ ಸರ್ಕಾರ ಬೀಳಿಸಲು ಪ್ಲಾನ್ -ಸಿದ್ದರಾಮಯ್ಯ, ಡಿಕೆಶಿಗೆ ಖರ್ಗೆ ಎಚ್ಚರಿಕೆ

publive-image

ಬಿರುಗಾಳಿ ಸಹಿತ ಭಾರೀ ಮಳೆಗೆ ಕಂಗಾಲದ ಜನ

ಹಾವೇರಿ ನಗರದಲ್ಲಿ ಮಳೆ ಆರ್ಭಟ ಜೋರಾಗಿದೆ. ಮೊನ್ನೆ ಸುರಿದ ಮಳೆಗೆ ಅಲ್ಲಿನ ಜನರು ಇನ್ನೂ ಚೇತರಿಸಿಕೊಂಡಿಲ್ಲ. ನಗರದಲ್ಲಿ ಸುಮಾರು 20ಕ್ಕೂ ಅಧಿಕ ಲೈಟ್‌ ಕಂಬಗಳು ಮಗುಚಿ ಬಿದ್ದಿವೆ.. ಗುಡುಗು-ಸಿಡಿಲಿಗೆ ಗಾಳಿಯೂ ಸಾಥ್​​​ ನೀಡಿದ್ದು, ಅವಾಂತರ ಸೃಷ್ಟಿಯಾಗಿವೆ. ಶಿವಾಜಿ ನಗರ, ಅಶ್ವಿನಿ ನಗರ, ಬಸವೇಶ್ವರ ನಗರ ಸೇರಿ ಹಲವಾರು ಕಡೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ.. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಜನ ಕತ್ತಲಲ್ಲಿ ಕಾಲಕಳೆಯುವಂತಾಯ್ತು.

ಗಾಳಿ ಮಳೆಗೆ ನೆಲಕ್ಕುರುಳಿದ ಮನೆಯ ಮುಂದಿನ ಚಪ್ಪರ

ಚಿತ್ರದುರ್ಗ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಗಿದೆ.. ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸುರಿದ ಗಾಳಿ ಮಳೆಯ ಅಬ್ಬರಕ್ಕೆ ಮರಗಳು ಮತ್ತು ಮನೆಯ ಮುಂದೆ ಹಾಕಿದ್ದ ಚಪ್ಪರಗಳು ಚಿಪಾಟಿ ಆಗಿವೆ.. ಗೌರಸಮುದ್ರ ದೇವಾಲಯದ ಮುಂಭಾಗದಲ್ಲಿದ್ದ ಬೇವಿನ ಮರ ಧರೆಗುರುಳಿ ಪಕ್ಕದ ಮೂರು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ..

ಇದನ್ನೂ ಓದಿ: ವ್ಯವಹಾರದ ದೃಷ್ಟಿಯಿಂದ ಈ ದಿನ ಚೆನ್ನಾಗಿಲ್ಲ, ಮಾನಸಿಕ ಬೇಸರ ಹೆಚ್ಚು ಕಾಡುತ್ತೆ; ಇಲ್ಲಿದೆ ಇಂದಿನ ಭವಿಷ್ಯ!

publive-image

3 ದಿನ ಮಳೆಯಾಗುವ ಮುನ್ಸೂಚನೆ ‌ನೀಡಿದ IMD

ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಹಾವೇರಿಗೆ ಯೆಲ್ಲೋ ಅಲರ್ಟ್​​ ನೀಡಲಾಗಿದೆ.

ಇದನ್ನೂ ಓದಿ: ಅಮೃತಧಾರೆ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​; ಭೂಮಿಕಾ ಮುಂದೆ ಶಕುಂತಲಾ ಅಸಲಿ ಮುಖ ಬಯಲು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment