/newsfirstlive-kannada/media/post_attachments/wp-content/uploads/2025/06/KARNATAKA-RAIN-15.jpg)
ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಅದ್ರಲ್ಲೂ ಚಿಕ್ಕಮಗಳೂರು, ಮಲೆನಾಡು ಭಾಗದಲ್ಲಂತೂ ಕೇಳೋದೇ ಬೇಡ.. ನದಿಗಳು ಉಕ್ಕಿ ಹರಿಯುತ್ತಿದ್ರೆ, ನದಿ ಪಾತ್ರದ ಜನ್ರಿಗೆ ಎಚ್ಚರ ಎಚ್ಚರ ಅನ್ನೋ ಸಂದೇಶ ಬಂದಿದೆ.
ಮಲೆನಾಡಲ್ಲಿ ಮಳೆ ಅಬ್ಬರ.. ಧರೆಗುರುಳಿದ ಮರ!
ಮಲೆನಾಡು ಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಕಂಚಿನಕಲ್ ದುರ್ಗದಲ್ಲಿ ವಿದ್ಯುತ್ ಕಂಬಗಳು ಹಾಗೂ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬೃಹತ್ ಮರ ಧರೆಗುರುಳಿದೆ. ಮರ ಬಿದ್ದ ಹಿನ್ನಲೆ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಗ್ರಾಮಸ್ಥರು ಪರದಾಡುವಂತಾಯ್ತು.. ಬಳಿಕ ಬೇರೆ ದಾರಿ ಕಾಣದೇ ಸ್ಥಳೀಯರೇ ಮರ ತೆರವು ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ: ಲವರ್​ ಬಾಯ್ ಆಗಿ ಬದಲಾದ ರಕ್ಷಕ್ ಬುಲೆಟ್​; ರಮೋಲ ಜೊತೆ ಪ್ರೀತಿಯಲ್ಲಿ ಬಿದ್ದೇ ಬಿಟ್ನಾ..?
ವರುಣಾರ್ಭಟ.. ಉಕ್ಕಿ ಹರಿಯುತ್ತಿರುವ ಹೇಮಾವತಿ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಾದ್ಯಂತ ಮಳೆ ಅಬ್ಬರ ಜೋರಾಗಿದೆ. ಜಿಲ್ಲೆಯ ತೊರೆ ನದಿಗಳಲ್ಲಿ ನೀರಿನ ಪ್ರಮಾಣ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗ್ತಿದೆ. ಹೇಮಾವತಿ ನದಿ ನೀರಿನ ಹರಿವಿನಲ್ಲೂ ಹೆಚ್ಚಳವಾಗಿದ್ದು, ಹೇಮಾವತಿ ನದಿ ಪಾತ್ರದ ಅನೇಕ ಗ್ರಾಮಗಳು ಅಪಾಯದಲ್ಲಿವೆ. ಹೀಗಾಗಿ, ನದಿ ಪ್ರಾತ್ರದ ಜನರಿಗೆ ಸುರಕ್ಷೀತವಾಗಿರುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ಭಾರೀ ಮಳೆ.. ತುಂಬಿದ ಕೃಷ್ಣೆ.. ಸೇತುವೆಗಳು ಜಲಾವೃತ
ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಆಗ್ತಿರುವ ಹಿನ್ನೆಲೆ ಕೃಷ್ಣಾ ಹಾಗೂ ಉಪನದಿಗಳ ಆರು ಸೇತುವೆಗಳು ಜಲಾವೃತಗೊಂಡಿವೆ. ಈ ಬಾರಿ ಮಳೆ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ.. ಇದುವರೆಗೂ 163 ಮಂದಿ ಗುರುತು ಪತ್ತೆ; ಇಂದು ಕುಟುಂಬಸ್ಥರಿಗೆ ಹಸ್ತಾಂತರ
ತುಂಬಿದ ಬೆಣ್ಣಿ ಮತ್ತು ತುಪ್ರಿ ಹಳ್ಳ.. ಪರಿಹಾರಕ್ಕಾಗಿ ಆಗ್ರಹ
ಮಳೆಗಾಲ ಬಂತೂ ಅಂದ್ರೆ ಸಾಕು.. ಧಾರವಾಡ ಜಿಲ್ಲೆಯಲ್ಲಿರೋ ಬೆಣ್ಣಿ ಮತ್ತು ತುಪ್ರಿ ಹಳ್ಳ ಅತ್ಯಂತ ಅಪಾಯ ಮಟ್ಟ ಮೀರಿ ಹರಿಯುತ್ತವೆ. ಅಲ್ಲದೇ, ಅಪಾರ ಪ್ರಮಾಣದ ಹಾನಿ ಕೂಡ ಮಾಡ್ತಿದೆ. ಈ ಬೆಣ್ಣಿ ಹಳ್ಳಕ್ಕೆ ತುಪ್ರಿ ಹಳ್ಳ ಸೇರಿ 56 ಹಳ್ಳಗಳು ಬಂದು ಸೇರುತ್ವೆ. ಇದರಿಂದ 140 ಕಿಲೋಮೀಟರ್ ಉದ್ದದ ಈ ಬೆಣ್ಣಿ ಹಳ್ಳಕ್ಕೆ ಪ್ರತಿ ವರ್ಷ ಪ್ರವಾಹ ಸಂಕಷ್ಟ ಎದುರಾಗೋದು ಫಿಕ್ಸ್. ಹೀಗಾಗಿ ಯಾವಾಗ ಇದಕ್ಕೆ ಶಾಶ್ವತ ಪರಿಹಾರ ಬೇಕೇ ಬೇಕು ಅಂತ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗಂಗಕ್ಕಾ; ಫೋಟೋಸ್​ ಇಲ್ಲಿವೆ!
ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್​.. ರೋಗಿಗಳು ಪರದಾಟ..!
ಶಿವಮೊಗ್ಗ ಜಿಲ್ಲೆಯಲ್ಲೂ ವರುಣ ಅಬ್ಬರ ಏನ್ ಕಮ್ಮಿಯಿಲ್ಲ. ಮಳೆಯ ರಭಸಕ್ಕೆ ಆಗುಂಬೆ ಘಾಟ್​ನಲ್ಲಿ ಬೃಹತ್ ಮರ ನೆಲಕಪ್ಪಳಿಸಿತ್ತು. ಆಗುಂಬೆ ಚೆಕ್ ಪೋಸ್ಟ್ ಸಮೀಪದಲ್ಲೇ ಮರ ಬಿದ್ದಿದ್ರಿಂದ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆ್ಯಂಬುಲೆನ್ಸ್​ ಕೂಡ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡಿದ್ದು, ರೋಗಿಗಳು ಪರದಾಡುವಂತಾಯ್ತು. ಒಟ್ಟಾರೆ.. ಕರ್ನಾಟಕದಲ್ಲಿ ಮಳೆರಾಯ ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ