/newsfirstlive-kannada/media/post_attachments/wp-content/uploads/2025/05/BNG_RAIN-4.jpg)
ಬೆಂಗಳೂರು: ಸಿಲಿಕಾನ್ ಸಿಟಿ ಈಗ ರೈನ್ ಸಿಟಿಯಾಗಿ ಬದಲಾವಣೆ ಆಗಿದೆ ಅನ್ನುವಂತೆ ಮಳೆ ಸುರುಯುತ್ತಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಇಂದು ಕೂಡ ಮುಂದುವರೆದಿದೆ. ಈಗಾಗಲೇ ಬೆಂಗಳೂರಿನ ಹಲವೆಡೆ ಜಿಟಿ ಜಿಟಿ ವರ್ಷಧಾರೆ ಆರಂಭವಾಗಿದೆ. ಇದರಿಂದ ನಗರವಾಸಿಗಳು ಬೇಸತ್ತು ಹೋಗಿದ್ದಾರೆ.
ರಾತ್ರಿಯಿಂದಲೂ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ನಲ್ಲಿ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇಂದು ಕೂಡಾ ಎಲ್ಲೋ ಅಲರ್ಟ್ ಇದ್ದು, ಜೋರು ಮಳೆ ಆರ್ಭಟ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:300 ವರ್ಷಗಳ ಬಳಿಕ ತಿರುಪತಿ ತಿಮ್ಮಪ್ಪನಿಗೆ ಮೈಸೂರು ರಾಜವಂಶಸ್ಥರ ಉಡುಗೊರೆ; ಏನಿದರ ವಿಶೇಷ?
ಉದ್ಯಾನ ನಗರಿಯ ಯಶವಂತಪುರ, ಮಾರ್ಕೆಟ್ ,ರಾಜಾಜಿನಗರ, ಆನಂದ್ ರಾವ್ ಸರ್ಕಲ್, ಟೌನ್ ಹಾಲ್, ಶಾಂತಿ ನಗರ, ಸುಧಾಮನಗರ, ಕಾರ್ಪೋರೇಷನ್, ಮೇಖ್ರಿ ಸರ್ಕಲ್, ಕಲಾಸಿಪಾಳ್ಯ ಸೇರಿಂದಂತೆ ನಗರದ ಸಾಕಷ್ಟು ಕಡೆಗಳಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಬೆಳಗ್ಗೆಯೇ ಎದ್ದು ಕೆಲಸಕ್ಕೆ ಹೋಗುವ ಜನರಿಗೆ ಸಮಸ್ಯೆ ಆಗಿದೆ.
ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿರುವ ಜನರು ಹಾಗೂ ಕೆಲ ಅಪಾರ್ಟ್ಮೆಂಟ್ಗಳ ವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಬೆಳ್ಳಂ ಬೆಳಗ್ಗೆ ವರುಣ ಜಿನುಗುಟ್ಟುತ್ತಿದ್ದು ಆರ್.ಆರ್ ನಗರದ ಬಿಇಎಂಎಲ್ 3ನೇ ಹಂತದ ಬಾಲಕೃಷ್ಣ ರಂಗ ಮಂದಿರ ಜನರಿಗೆ ಸಮಸ್ಯೆಗಳು ಎದುರಾಗಿವೆ. ನಿರಂತರ ಮಳೆಯಿಂದ ಮನೆ ಮುಂದಿರುವ ರಸ್ತೆಗಳಲ್ಲಿ ನೀರು ನಿಂತು ತೊಂದರೆಯಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ