newsfirstkannada.com

ಅಯ್ಯಯ್ಯೋ ಎಂಥಾ ಕಾಲ.. ಧಾರಾಕಾರವಾಗಿ ಸುರಿದ ಮೀನಿನ ಮಳೆ.. ಫಿಶ್​ಗಳನ್ನ ಕ್ಯಾಚ್ ಹಿಡಿದ ಜನ!

Share :

Published May 7, 2024 at 7:30am

Update May 7, 2024 at 7:40am

    ನಗರದಲ್ಲಿ ಅಪರೂಪದ ವಿದ್ಯಮಾನ, ಮೀನಿನ ಮಳೆಯಾಗಿದೆ

    ಕಾರು, ಮನೆ, ಹೋಟೆಲ್, ಸವಾರರ ಮೇಲೆ ಬಿದ್ದ ಮೀನುಗಳು

    ಆಕಾಶದಿಂದ ಮೀನಿನ ಮಳೆ ಆಗಿರುವುದು ಯಾವ ಪ್ರದೇಶದಲ್ಲಿ?

ಆಕಾಶದಿಂದ ಬೇರೆ ಯಾವುದೋ ಒಂದು ರೀತಿಯ ಪ್ರಾಣಿ ಕಾಣಿಸಿಕೊಂಡು ಮತ್ತೆ ಮಾಯವಾಗಿ ಹೋಗಿದೆ ಎನ್ನುವ ಸುದ್ದಿಗಳನ್ನು ಆಗಾಗ ಕೇಳಿರುತ್ತೇವೆ. ಆಗಸದಿಂದ ಮಳೆ ಬೀಳುತ್ತಿದೆ ಎಂದರೆ ಮೀನುಗಳು ಯಾಕೆ ಬೀಳುವುದಿಲ್ಲ ಎಂದು ಕೆಲವೊಮ್ಮೆ ಪುಟಾಣಿ ಮಕ್ಕಳು ಪ್ರಶ್ನಿಸಿರುವುದನ್ನು ಗಮನಿಸಿರುತ್ತಾವೆ. ಸದ್ಯ ಮಕ್ಕಳ ಇಂಥಹ ಪ್ರಶ್ನೆಗೆ ಸದ್ಯಕ್ಕೆ ಮಾತ್ರ ಉತ್ತರ ಸಿಕ್ಕಿದೆ ಎನ್ನಬಹುದು. ಏಕೆಂದರೆ ಧಾರಾಕಾರ ಮಳೆ ಜೊತೆ ಜೊತೆಗೆ ಮೀನುಗಳು ಆಗಸದಿಂದ ಭೂಮಿಗೆ ಬಿದ್ದಿವೆ.

ಇರಾನ್‌ನ ಯಸುಜ್ ನಗರದಲ್ಲಿ ಅಪರೂಪದ ವಿದ್ಯಮಾನವೊಂದು ನಡೆದಿದ್ದು ಮೀನುಗಳ ಮಳೆಯಾಗಿದೆ. ಸದ್ಯ ಎಲ್ಲೆಡೆ ಮಳೆ ಸುರಿಯುತ್ತಿರುವುದು ಸಾಮಾನ್ಯವಗಿದೆ. ಆದರೆ ಯಸುಜ್ ನಗರದಲ್ಲಿ ಮಾತ್ರ ಭರ್ಜರಿ ವರುಣರಾಯ ಬಿರುಗಾಳಿ ಸಮೇತ ಆರ್ಭಟಿಸಿದ್ದಾನೆ. ಈ ವೇಳೆ ಆಗಸದಿಂದ ಮೀನುಗಳು ನಗರದ ಎಲ್ಲೆಂದರಲ್ಲಿ ಬಿದ್ದಿವೆ. ಅಲ್ಲಿನ ಜನರು ಇವುಗಳನ್ನು ನೋಡಿ ಆಶ್ಚರ್ಯವಾಗಿದ್ದು ಕೆಲವರಂತೂ ಮೇಲಿಂದ ಬೀಳುವ ಮೀನುಗಳನ್ನು ಕ್ಯಾಚ್ ಹಿಡಿದುಕೊಂಡಿದ್ದಾರೆ. ಕೆಲವೊಂದು ಮೇಲಿಂದ ಬಿದ್ದ ರಭಸಕ್ಕೆ ರಸ್ತೆಯಲ್ಲೇ ಉಸಿರು ಚೆಲ್ಲಿವೆ ಎಂದು ಹೇಳಲಾಗಿದೆ.

ಸದ್ಯ ಆಗಸದಿಂದ ಮೀನುಗಳು ಮನೆ, ಕಾರು, ಛಾವಣಿ, ಹೋಟೆಲ್​ಗಳ ಮೇಲೆ ಬಿದ್ದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಯಾವುದೇ ಜೀವಿಯಾದರೂ ಆಗಸದಿಂದ ಬೀಳುವುದಿಲ್ಲ. ಸಮುದ್ರದಲ್ಲಿ ಸುಳಿಗಾಳಿಯಿಂದ ಮೀನುಗಳು ತೀವ್ರ ಮೇಲಕ್ಕೆ ಹೋಗಿ ಈ ರೀತಿ ಅಲ್ಲಾಲ್ಲಿ ಬೀಳುತ್ತಾವೆ. ಈ ರೀತಿ ಆಗಾಗ ಅಲ್ಲಾಲ್ಲಿ ಮಳೆಗಾಲದಲ್ಲಿ ನಡೆಯುತ್ತಿರುತ್ತಾವೆ ಎಂದು ಹೇಳಲಾಗುತ್ತಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯಯ್ಯೋ ಎಂಥಾ ಕಾಲ.. ಧಾರಾಕಾರವಾಗಿ ಸುರಿದ ಮೀನಿನ ಮಳೆ.. ಫಿಶ್​ಗಳನ್ನ ಕ್ಯಾಚ್ ಹಿಡಿದ ಜನ!

https://newsfirstlive.com/wp-content/uploads/2024/05/FISH_RAINGIN_NEW.jpg

Load More