/newsfirstlive-kannada/media/post_attachments/wp-content/uploads/2024/08/Raj-B-Shetty.jpg)
ಈ ವರ್ಷ ಟರ್ಬೋ, ಏಕಂ, ರೂಪಾಂತರ ಸಿನಿಮಾದ ಬಳಿಕ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಆ ಮೂಲಕ ಕನ್ನಡಿಗರಿಗೆ ಸಿಹಿ ಸಿದ್ದಿ ಕೊಟ್ಟಿದ್ದಾರೆ.
ರಾಜ್ ಶೆಟ್ರು ರಕ್ಕಸಪುರದೋಳ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದು, ಡಾ. ಕೆ. ರವಿ ವರ್ಮ ನಿರ್ಮಾಣ ಮಾಡುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ ರಕ್ಕಸಪುರದೋಳ್ ಸಿನಿಮಾ ಕನ್ನಡ ಮಾತ್ರವಲ್ಲ, ಮಲಯಾಳಂನಲ್ಲೂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿಗೆ ರಾಕಿಂಗ್ ಸ್ಟಾರ್, ಜ್ಯೂನಿಯರ್ NTR ಕಡೆಯಿಂದ ಬಂತು ಹೀಗೊಂದು ವಿಶ್.. ಏನಂದ್ರು?
ಅಂದಹಾಗೆಯೇ ರಾಜ್ ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಇಂದು ಅನೌನ್ಸ್ ಆಗಿದ್ದು, ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿಕ ವರಸಿದ್ಧಿ ನಾಯಕ ದೇವಸ್ಥಾನದಲ್ಲಿ ಟೈಟಲ್ ಲಾಂಚ್ ಮಾಡಲಾಯಿತು.
View this post on Instagram
ಇದನ್ನೂ ಓದಿ: ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ಅಪ್ಪುವನ್ನು ನೆನೆದ ರಿಷಬ್ ಶೆಟ್ಟಿ! ಏನಂದ್ರು ಗೊತ್ತಾ?
ಟೈಟಲ್ ನೋಡಿದ ತಕ್ಷಣ ರಾಜ್ ಶೆಟ್ಟಿ ಪೊಲೀಸ್ ಅವತಾರದಲ್ಲಿ ನಟಿಸುತ್ತಿರುವ ಸಿನಿಮಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ವಿಭಿನ್ನ ಅವತಾರದಲ್ಲಿ ನಟಿಸುತ್ತಿದ್ದಾರೆ ಎಂಬಂತಿದೆ. ಆದರೆ ಸಿನಿಮಾ ಬಿಡುಗಡೆಗೊಂಡ ಬಳಿಕವಷ್ಟೇ ನಟನ ಪಾತ್ರದ ಬಗ್ಗೆ ತಿಳಿದುಬರಬೇಕಿದೆ.
ಇನ್ನು ರಕ್ಕಸಪುರದೋಳ್ ಸಿನಿಮಾದಲ್ಲಿ ಮಿಲಿಯಂ ಡೇವಿಡ್, ಅರ್ಜುನ್ ಜನ್ಯ, ಮೋಹನ್ ಬಿ ಕರೆ, ಕೆ.ಎಂ ಪ್ರಕಾಶ್, ನರಸಿಂಹ ಜಾಲಹಳ್ಳಿ, ಕ್ರಾಂತಿ ಕುಮಾರ್, ಮಂಜುನಾಥ್ ಚಿತ್ರತಂಡದಲ್ಲಿದ್ದಾರೆ. ಅಂದಹಾಗೆಯೇ ಈ ಸಿನಿಮಾದ ಕುರಿತು ಭಾರೀ ನಿರೀಕ್ಷೆ ಹುಟ್ಟಿಕೊಂಡಿದ್ದು, ಎಲ್ಲರೂ ರಾಜ್ ನಟನೆಗಾಗಿ ಕಾದು ಕುಳಿತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ