/newsfirstlive-kannada/media/post_attachments/wp-content/uploads/2023/06/Toby.jpg)
‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಸಕ್ಸಸ್ ಬಳಿಕ ರಾಜ್ ಬಿ ಶೆಟ್ಟಿ ಏನು ಮಾಡ್ತಾ ಇದ್ದಾರಪ್ಪಾ ಎಂಬ ಟಾಕ್ ಜೋರಾಗಿತ್ತು. ಆದರೀಗ ಶೆಟ್ರು ಮಾರಿಗೆ ದಾರಿ ಹುಡುಕುವ ಕೆಲಸ ಮಾಡಿದ್ದಾರೆ. ‘ಟೋಬಿ’ ಎಂಬ ಹೊಸ ಗ್ಯಾಂಗ್ಸ್ಟರ್ ಸಿನಿಮಾದ ಮೂಲಕ ಬಣ್ಣ ಹಚ್ಚಿ ಮತ್ತೆ ಸೌಂಡ್ ಮಾಡಲು ಮುಂದಾಗಿದ್ದಾರೆ. ಅಂದಹಾಗೆಯೇ ಈ ಸಿನಿಮಾ ರಿಲೀಸ್ಗೆ ಮಹೂರ್ತ ಫಿಕ್ಸ್ ಆಗಿದ್ದು, ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಟೋಬಿ
ಇದೇ ವರ್ಷ ಆಗಸ್ಟ್ 25ಕ್ಕೆ ಟೋಬಿ ಅವತಾರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಟಾಕ್ ಹೆಚ್ಚಿಸಲು ಶೆಟ್ರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟೋಬಿ ಸಿನಿಮಾದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಸದ್ಯ ಹರಿದಾಡುತ್ತಿರುವ ಪೋಸ್ಟರ್ನಲ್ಲಿ ಬಿಜಿಎಮ್ ಸೌಂಡ್ ಮಾತ್ರ ಎಲ್ಲರಿಗು ಕುತೂಹಲ ಕೆರಳಿಸಿದ್ದು, ಶೆಟ್ರು ಯಾವ ಅವತಾರವೆತ್ತಿ ಬರಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಂದಹಾಗೆಯೇ ಟೋಬಿ ಸಿನಿಮಾ ಲೈಟರ್ ಬುದ್ಧ ಫಿಲ್ಮ್ಸ್ ಪ್ರೊಡಕ್ಷನ್, ಅಗಸ್ತ್ಯ ಫಿಲ್ಮ್ಸ್ ಕಳಸ ಅಡಿಯಲ್ಲಿ ಮೂಡಿಬರುತ್ತಿದೆ.
ಮಾರಿ.. ಮಾರಿ.. ಮಾರಿಗೆ ದಾರಿ!
‘ಟೋಬಿ’ ಆಗಸ್ಟ್ 25ರಂದು ನಿಮ್ಮ ಮುಂದೆ 😊
Make way for Maari 💥
The beast that got the best out of us! Presenting to you, #TOBY
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 #TobyOnAug25@rajbshettyOMK#BasilALChalakkal@Chaithra_Achar_@samyuktahornadpic.twitter.com/YGSOBNW80t— Raj B Shetty (@RajbShettyOMK) June 13, 2023
ಸ್ವಾತಿ ಮುತ್ತಿನ ಮಳೆ ಹನಿಯೆ
ರಮ್ಯಾ ಪ್ರೊಡಕ್ಷನ್ ನಡಿ ಈಗಾಗಲೇ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಸಿನಿಮಾದ ಮೇಲೂ ಕನ್ನಡಿಗರ ನಿರೀಕ್ಷೆ ಮುಗಿಲು ಮುಟ್ಟಿದೆ. ಅದರ ಜೊತೆಗೆ ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾದ ಮೂಲಕ ಸೌಂಡ್ ಮಾಡಲು ಆಗಸ್ಟ್ 25ಕ್ಕೆ ಬರುತ್ತಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ