ಪಾಕಿಸ್ತಾನಿ ಪ್ರಜೆಗೆ ಭಾರತದಲ್ಲಿ ಯಾವುದೇ ಸ್ಥಾನ ಸಿಗಬಾರದು!
ಎ ಟೈಲರ್ ಮರ್ಡರ್ ಮಿಸ್ಟ್ರಿಯಲ್ಲಿ ಸೀಮಾ Raw ಏಜೆಂಟ್
ಬಾಲಿವುಡ್ನಲ್ಲಿ ಸಿನಿಮಾ ಮಾಡದಂತೆ ಖಡಕ್ ವಾರ್ನಿಂಗ್!
ಮುಂಬೈ: ಕೆಲ ತಿಂಗಳ ಹಿಂದೆ ಪಬ್ಜಿ ಪ್ರಿಯಕರನ ಪ್ರೀತಿಗೆ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದ ಸೀಮಾ ಹೈದರ್ ಬಗ್ಗೆ ಸದಾ ಒಂದಲ್ಲಾ ಒಂದು ಸುದ್ದಿ ವೈರಲ್ ಆಗುತ್ತಿದೆ. ಮೊನ್ನೆಯಷ್ಟೇ ಸೀಮಾ ಸೀರೆ ಉಟ್ಟು ಡ್ಯಾನ್ಸ್ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು.
ಪಬ್ಜಿ ಪ್ರೇಮಿಗಾಗಿ ಪಾಕಿಸ್ತಾನದಿಂದ ಓಡಿ ಬಂದ ಸೀಮಾ ಹೈದರ್‌ಗೆ ಕೊನೆಗೂ ಬಿಗ್ ಆಫರ್ ಕೂಡ ಬಂದಿತ್ತು. ಗಡಿ ದಾಟಿ ಬಂದ ಸೀಮಾಳನ್ನು ಬಾಲಿವುಡ್ ನಿರ್ದೇಶಕ ಜಯಂತ್ ಸಿಂಗ್, ಭರತ್ ಸಿಂಗ್ ಅವರು ಭೇಟಿ ಮಾಡಿ, ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಂಡಿದ್ದರು. ಬಳಿಕ ಖುಷಿಯಲ್ಲಿ ನಿರ್ದೇಶಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವ ಸೀಮಾ ಹೈದರ್ ಧನ್ಯವಾದ ತಿಳಿಸಿದ್ದರು. ಸೀಮಾ ಹೈದರ್ ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಆಗಿದ್ದವು.
ಇದೀಗ ಸೀಮಾ ಹೈದರ್ ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಬಾರದು ಎಂದು ರಾಜ್ ಠಾಕ್ರೆ ಪಕ್ಷದಿಂದ ಎಚ್ಚರಿಕೆ ಬಂದಿದೆ. ಈ ಕುರಿತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷರು ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋದ ಅಂಜುಗೆ ಉಡುಗೊರೆಗಳ ಮಹಾಪೂರ; ಮನೆ, ಭೂಮಿ, ದುಡ್ಡು ಏನೆಲ್ಲಾ ಸಿಕ್ತು?
ಭಾರತೀಯ ಚಲನಚಿತ್ರೋದ್ಯಮದಲ್ಲಿ ಪಾಕಿಸ್ತಾನಿ ಪ್ರಜೆಗೆ ಯಾವುದೇ ಸ್ಥಾನ ಸಿಗಬಾರದು ಎಂಬ ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದೇವೆ. ಸೀಮಾ ಹೈದರ್ ಪ್ರಸ್ತುತ ಭಾರತದಲ್ಲಿರುವ ಪಾಕಿಸ್ತಾನಿ ಮಹಿಳೆ. ಆಕೆ ಐಎಸ್‌ಐ ಏಜೆಂಟ್ ಎಂಬ ವರದಿಗಳೂ ಬಂದಿದ್ದವು. ಅದೇ ಸೀಮಾ ಹೈದರ್ ಅವರನ್ನು ನಮ್ಮ ಇಂಡಸ್ಟ್ರಿಯಲ್ಲಿನ ಕೆಲವರು ಅವರ ಖ್ಯಾತಿಗಾಗಿ ನಟಿಯಾಗಿ ಮಾಡುತ್ತಿದ್ದಾರೆ. ದೇಶದ್ರೋಹಿ ನಿರ್ಮಾಪಕರು ಏಕೆ ನಾಚಿಕೆಪಡುವುದಿಲ್ಲ? ಕೂಡಲೇ ನಾಟಕವನ್ನು ನಿಲ್ಲಿಸಬೇಕು ನಿಲ್ಲಿಸಿ, ಇಲ್ಲದಿದ್ದರೆ ಎಂಎನ್‌ಎಸ್ ಮುಷ್ಕರಕ್ಕೆ ಸಿದ್ಧರಾಗಿ ಎಂದು ಸಾರ್ವಜನಿಕ ಎಚ್ಚರಿಕೆ ನೀಡುತ್ತಿದ್ದೇವೆ.
– ಅಮಿ ಖೋಪ್ಕರ್
ಇತ್ತೀಚೆಗೆ, ಸೀಮಾ ಅವರು ‘ಕರಾಚಿ ಟು ನೋಯ್ಡಾ’ ಚಿತ್ರಕ್ಕೆ ಆಡಿಷನ್ ಮಾಡಿರೋ ವೀಡಿಯೊ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈಗ ಸೀಮಾ ಹೈದರ್ ‘ಕರಾಚಿ ಟು ನೋಯ್ಡಾ’ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.
पाकिस्तानी नागरिकाला भारतीय चित्रपटसृष्टीत कोणतंही स्थान असता कामा नये, या आमच्या भूमिकेवर आम्ही ठाम आहोत. सीमा हैदर ही पाकिस्तानी महिला सध्या भारतात आहे. ती ISI एजंट आहे अशा बातम्याही पसरल्या होत्या. आमच्या इंडस्ट्रीमधील काही उपटसुंभ प्रसिद्धीसाठी त्याच सीमा हैदरला अभिनेत्री…
— Ameya Khopkar (@MNSAmeyaKhopkar) August 12, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ