/newsfirstlive-kannada/media/post_attachments/wp-content/uploads/2025/06/esi-hospital-Doctors-negligence.jpg)
ಒಂದು ಮಗು ಮನೆಗೆ ಬರುತ್ತೆ ಅಂದ್ರೆ ಅದೆಷ್ಟು ಖುಷಿ ಇರುತ್ತೆ ಅಲ್ವಾ? ಇದೇ ಖುಷಿಯಲ್ಲಿತ್ತು ಇಲ್ಲೊಂದು ಕುಟುಂಬ. ಆ ಮಹಾತಾಯಿ ನವಮಾಸ ತನ್ನ ಭವಿಷ್ಯವನ್ನ ಜೋಪಾನ ಮಾಡಿದ್ದಳು. ಸಾವು ಬದುಕಿನ ನಡುವೆ ಹೋರಾಡಿ ಜನ್ಮ ನೀಡಿದ್ದಳು. ಆದ್ರೆ, ನಾಲ್ಕು ದಿನ ಐಸಿಯುನಲ್ಲಿ ಒದ್ದಾಡಿದ್ದ ಮಗು ಶಾಶ್ವತವಾಗಿ ಕಣ್ಮುಚ್ಚಿದೆ. ಕಾರಣ ವೈದ್ಯರ ನಿರ್ಲಕ್ಷ್ಯ ಅನ್ನೋದು ಪೋಷಕರ ಮಾತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ.. ಗೋವಿನ ಕೆಚ್ಚಲು ಕೊಯ್ದು ವಿಕೃತಿ..
ಕಮಲಾ ನಗರದ ಸಂಗೀತಂ ಜೋಸ್ನಾ ಹಾಗೂ ಸುನೀಲ್ ದಂಪತಿಯ ಮಗುವಿನ ನಿರೀಕ್ಷೆಯಲ್ಲಿದ್ದರು. ಹೆರಿಗೆ ನೋವಿನಿಂದ ಭಾನುವಾರ ಇಎಸ್ಐ ಆಸ್ಪತ್ರೆಗೆ ದಾಖಲಾದ್ರು. ಸೋಮವಾರ ನೋವು ಕಾಣಿಸಿಕೊಂಡ್ರು ವೈದ್ಯರು ಹೆರಿಗೆ ಮಾಡಿಸ್ಲಿಲ್ಲವಂತೆ. ಡೆಲಿವರಿ ನೋವು ಬಂದು ಗರ್ಭಿಣಿಗೆ ವಿಪರೀತ ವಾಟರ್ ಡಿಸ್ಚಾರ್ಜ್ ಆಗಿದೆ. ಇನ್ನು, ಮಂಗಳವಾರ ಬೆಳಗ್ಗೆ ಸಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ರಂತೆ. ಆದ್ರೆ, ಮಗು ಸ್ಯಾನಿಟರಿ ನೀರು ಕುಡಿದಿದೆ ಎಂದು ಐಸಿಯುನಲ್ಲಿ ಇಟ್ಟಿದ್ದಾರೆ. ನಾಲ್ಕು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದ ಕಂದಮ್ಮ ನಿನ್ನೆ ರಾತ್ರಿ ಉಸಿರು ನಿಲ್ಲಿಸಿದೆ.
ಇನ್ನು, ಆಕ್ರೋಶಗೊಂಡ ಕುಟುಂಬಸ್ಥರು, ESI ಡೆಲಿವರಿ ವಾರ್ಡ್ ಬಳಿ ಪ್ರತಿಭಟನೆ ಮಾಡಿದ್ದರು. ಸ್ಥಳಕ್ಕೆ ವೈದ್ಯರನ್ನು ಕರೆಸುವಂತೆ ಪಟ್ಟು ಹಿಡಿದ್ರು. ಹೆರಿಗೆ ಮಾಡಿ ಅಂದ್ರೆ ರೀಲ್ಸ್ ನೋಡ್ತಾರೆ ಅಂತ ಆಕ್ರೋಶ ಹೊರಹಾಕಿದ್ರು. ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಒಂದು ವೇಳೆ ವೈದ್ಯರು ಸರಿಯಾದ ಸಮಯಕ್ಕೆ ಹೆರಿಗೆ ಮಾಡಿಸಿದಿದ್ರೆ ಮಗು ಉಳೀತಿತ್ತೋ ಏನೋ? ವಿಪರ್ಯಾಸ ನೋಡಿ ಒಂದು ಕುಟುಂಬದ ಕರುಳ ಕುಡಿಯೇ ಕಣ್ಮರೆಯಾಗಿದೆ. ಇದರಲ್ಲಿ ಹೆತ್ತಮ್ಮ ಮತ್ತು ಆ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು ಅಲ್ವಾ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ