newsfirstkannada.com

6 ಸಿಕ್ಸ್​​.. 3 ಫೋರ್​​.. 82 ರನ್​ ಚಚ್ಚಿದ ಸ್ಯಾಮ್ಸನ್; ಲಕ್ನೋಗೆ ರಾಜಸ್ಥಾನ್​​​ ಬಿಗ್​ ಟಾರ್ಗೆಟ್!​​

Share :

Published March 24, 2024 at 6:09pm

Update March 24, 2024 at 7:46pm

  ಲಕ್ನೋ ಸೂಪರ್​ ಜೈಂಟ್ಸ್​ಗೆ ಬಿಗ್​ ಟಾರ್ಗೆಟ್​ ಕೊಟ್ಟ ರಾಜಸ್ತಾನ್​​!

  ನಿಗದಿತ 20 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 193 ರನ್​ ಗಳಿಸಿದ ಆರ್​ಆರ್​

  ಸಂಜು ಸ್ಯಾಮ್ಸನ್​ ಏಕಾಂಗಿ ಹೋರಾಟ; ಲಕ್ನೋಗೆ ಬೃಹತ್​ ರನ್​​ ಗುರಿ

ಇಂದು ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡಕ್ಕೆ ರಾಜಸ್ತಾನ್​​ ರಾಯಲ್ಸ್​ ತಂಡ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ರಾಜಸ್ತಾನ್​ ರಾಯಲ್ಸ್​ ತಂಡದ ಪರ ಓಪನರ್​ ಆಗಿ ಬಂದ ಜೋಸ್​ ಬಟ್ಲರ್​ ಕೇವಲ 11, ಯಶಸ್ವಿ ಜೈಸ್ವಾಲ್​ 24 ರನ್​ ಗಳಿಸಿ ಔಟಾದ್ರು. ಬಳಿಕ ಕ್ರೀಸ್​ಗೆ ಬಂದ ಸಂಜು ಸ್ಯಾಮ್ಸನ್​ ಕೊನೆವರೆಗೂ ಕ್ರೀಸ್​ನಲ್ಲೇ ಇದ್ದು ಲಕ್ನೋ ಬೌಲರ್​ಗಳ ಬೆಂಡೆತ್ತಿದ್ರು.

ತಾನು ಆಡಿದ ಕೇವಲ 52 ಬಾಲ್​ನಲ್ಲಿ ಬರೋಬ್ಬರಿ 6 ಸಿಕ್ಸರ್​​, 3 ಫೋರ್​ ಸಮೇತ ಸ್ಯಾಮ್ಸನ್​ 82 ರನ್​ ಚಚ್ಚಿದ್ರು. ರಿಯಾನ್​ ಪರಾಗ್​ ಕೂಡ ಕೇವಲ 29 ಬಾಲ್​ನಲ್ಲಿ 3 ಸಿಕ್ಸರ್​​, 1 ಫೋರ್​ನೊಂದಿಗೆ 43 ರನ್​​ ಸಿಡಿಸಿದ್ರು. ಧೃವ್​ ಜುರೆಲ್​ 20 ರನ್​ ಪೇರಿಸಿದ್ರು.

ಇದನ್ನೂ ಓದಿ: RR vs LSG: ಟಾಸ್​​ ಗೆದ್ದ ಸ್ಯಾಮ್ಸನ್​ ಬ್ಯಾಟಿಂಗ್​​; ಶುಭಾರಂಭ ಮಾಡ್ತಾರಾ ಕನ್ನಡಿಗ ರಾಹುಲ್​?

ರಾಜಸ್ತಾನ್​​​ 4 ವಿಕೆಟ್​ ನಷ್ಟಕ್ಕೆ ನಿಗದಿತ 20 ಓವರ್​ಗಳಲ್ಲಿ 193 ರನ್​ ಗಳಿಸಿದೆ. ಈ ಮೂಲಕ ಲಕ್ನೋ ತಂಡಕ್ಕೆ 194 ರನ್​ ಬಿಗ್​ ಟಾರ್ಗೆಟ್​ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6 ಸಿಕ್ಸ್​​.. 3 ಫೋರ್​​.. 82 ರನ್​ ಚಚ್ಚಿದ ಸ್ಯಾಮ್ಸನ್; ಲಕ್ನೋಗೆ ರಾಜಸ್ಥಾನ್​​​ ಬಿಗ್​ ಟಾರ್ಗೆಟ್!​​

https://newsfirstlive.com/wp-content/uploads/2024/03/RR_LSG.jpg

Load More