ಮನೆ ಹಿತ್ತಲಲ್ಲಿ ಮಹಿಳೆಯ 6 ತುಂಡು ಕತ್ತರಿಸಿ ಹೂತಿಟ್ಟಿದ್ದ; ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ!

author-image
admin
Updated On
ಮನೆ ಹಿತ್ತಲಲ್ಲಿ ಮಹಿಳೆಯ 6 ತುಂಡು ಕತ್ತರಿಸಿ ಹೂತಿಟ್ಟಿದ್ದ; ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದ್ದೇ ರೋಚಕ!
Advertisment
  • ತುಂಡು, ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಘಟನೆ ಮಾಸುವ ಮುನ್ನ
  • ಮಹಿಳೆಯನ್ನು 6 ತುಂಡು ಮಾಡಿ ಕತ್ತರಿಸಿ ಹಿತ್ತಲಲ್ಲಿ ಹೂತಿಟ್ಟಿದ್ದು ಯಾಕೆ?
  • ಪೊಲೀಸರ ಅನುಮಾನ, ಮೊಬೈಲ್ ನೆಟ್‌ವರ್ಕ್‌ ಸುಳಿವು ಸುಳ್ಳಾಗಲಿಲ್ಲ!

ಜೈಪುರ: ಇತ್ತೀಚೆಗೆ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಮಹಿಳೆಯನ್ನು ತುಂಡು, ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೊಂದು ಅಂತಹದೇ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬೆಂದಿದೆ. ಜೋಧಪುರದಲ್ಲಿ ಮಹಿಳೆಯನ್ನ ತುಂಡು, ತುಂಡಾಗಿ ಕತ್ತರಿಸಿ ಮನೆಯ ಹಿತ್ತಲಲ್ಲಿ ಹೂತಿಟ್ಟ ಪಾಪಿ ತಲೆ ಮರೆಸಿಕೊಂಡಿದ್ದಾನೆ.

ಜೋಧಪುರದ ಅನಿತಾ ಚೌಧರಿ ಮೃತ ಮಹಿಳೆ. 50 ವರ್ಷದ ಅನಿತಾ ಚೌಧರಿ ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದರು. ಅನಿತಾ ಪತಿ ಪೊಲೀಸರಿಗೆ ನಾಪತ್ತೆಯಾಗಿದ್ದ ದೂರು ಸಲ್ಲಿಕೆ ಮಾಡಿದ್ದರು.

ಅನಿತಾ ಚೌಧರಿ ನಾಪತ್ತೆ ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಗುಲ್ ಮೊಹಮ್ಮದ್ ಎಂಬಾತನ ಮೇಲೆ ಅನುಮಾನ ಬಂದಿದೆ. ಈ ಅನುಮಾನ ನಿಜವಾಗಿದ್ದು, ಆರೋಪಿ ಮೊಹಮ್ಮದ್‌ 50 ವರ್ಷದ ಮಹಿಳೆಯ ಹ*ತ್ಯೆಗೈದು 6 ತುಂಡುಗಳಾಗಿ ಕತ್ತರಿಸಿ ಹೂತಿದ್ದು ಮೃತದೇಹವನ್ನು ಹೊರ ತೆಗೆಯಲಾಗಿದೆ.

ಇದನ್ನೂ ಓದಿ: 54 ವರ್ಷದ ಹಿಂದೆ ₹37 ಕದ್ದ ಕಳ್ಳ ವಾಪಸ್ ಕೊಟ್ಟಿದ್ದು ₹3,70,000; ಮಯ್ಯಳಗನ್ ಸಿನಿಮಾ ಮೀರಿಸಿದ ಸ್ಟೋರಿ ಇದು! 

ಸಾವಿನ ಸತ್ಯ ಬಯಲಾಗಿದ್ದು ಹೇಗೆ?
ಮಹಿಳೆಯ ನಾಪತ್ತೆ ಕೇಸ್ ತನಿಖೆ ನಡೆಸಿದ ಪೊಲೀಸರಿಗೆ ಅನಿತಾ ಚೌಧರಿಯ ಮೊಬೈಲ್ ನೆಟ್‌ವರ್ಕ್‌ ಕೊನೆಯ ಬಾರಿ ಗುಲ್ ಮೊಹಮ್ಮದ್ ಮನೆಯಲ್ಲೇ ಇದ್ದ ಮಾಹಿತಿ ಸಿಕ್ಕಿದೆ. ಕೂಡಲೇ ಆತನ ಮನೆಗೆ ಹೋಗಿ ಪರಿಶೀಲಿಸಿದಾಗ ಮೊಹಮ್ಮದ್ ನಾಪತ್ತೆ ಆಗಿದ್ದ. ಅನುಮಾನ ಮತ್ತಷ್ಟು ಹೆಚ್ಚಾಗಿ ಆತನ ಪತ್ನಿಯನ್ನು ವಿಚಾರಣೆ ನಡೆಸಿದಾಗ ಮನೆ ಹಿತ್ತಲಲ್ಲಿ ಶವ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.

ಅನಿತಾ ಚೌಧರಿ ಅವರು ಮೊಹಮ್ಮದ್‌ನನ್ನು ತನ್ನ ಸೋದರ ಎಂದೇ ನಂಬಿದ್ದರು. ಸೋದರನಂತೆ ಇದ್ದ ಮೊಹಮ್ಮದ್‌ನಿಂದಲೇ ಈಗ ಅನಿತಾ ಚೌಧರಿ ಕೊ*ಲೆಯಾಗಿದೆ ಎನ್ನಲಾಗಿದೆ. ಸದ್ಯ ಮೊಹಮ್ಮದ್ ಎಂಬಾತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅನಿತಾ ಚೌಧರಿ ಶವವನ್ನು ಜೋಧಪುರದ ಏಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment