/newsfirstlive-kannada/media/post_attachments/wp-content/uploads/2025/05/PANJAB_RAJASTAN_BLACK_OUT.jpg)
ನವದೆಹಲಿ: ಕದನ ವಿರಾಮ ಘೋಷಣೆ ಆದರೂ ಪಾಪಿ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿ ತೋರಿಸಬಹುದು ಎಂದು ರಾಜಸ್ತಾನ, ಪಂಜಾಬ್ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಲ್ಯಾಕ್ ಔಟ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಭಾರತ ಹಾಗೂ ಪಾಕಿಸ್ತಾನದ ಗಡಿ ರಾಜ್ಯವಾಗಿರುವ ರಾಜಸ್ತಾನದಲ್ಲಿ ಭಾನುವಾರ ರಾತ್ರಿಯೂ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ರಾತ್ರಿ ಆಗುತ್ತಿದ್ದಂತೆ ರಾಜಸ್ಥಾನದ ಗಡಿ ಭಾಗಗಳಲ್ಲಿ ಬ್ಲಾಕ್ ಔಟ್ ಮಾಡಲಾಗುತ್ತಿದೆ. ಇನ್ನು ಬಾರ್ಮರ್‌ನಲ್ಲಿ ಭದ್ರತಾ ಪಡೆಗಳು ಎಚ್ಚರ ವಹಿಸಿದ್ದು, ಸಂಪೂರ್ಣ ವಿದ್ಯುತ್ ಕಡಿತದ ನಡುವೆ ಮುನ್ನೆಚ್ಚರಿಕೆ ಸೈರನ್‌ಗಳನ್ನ ಅಳವಡಿಕೆ ಮಾಡಲಾಗಿತ್ತು. ಸೈರನ್ ಶಬ್ಧ ಕೇಳುತ್ತಿದ್ದಂತೆ ಸ್ಥಳೀಯರು ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡರು.
ಇದನ್ನೂ ಓದಿ:ಕಾಶ್ಮೀರದ ವಿಷಯದಲ್ಲಿ 3ನೇಯವರ ಮಧ್ಯಸ್ಥಿಕೆ ಬೇಕಾಗಿಲ್ಲ; ಅಮೆರಿಕಗೆ ಪ್ರಧಾನಿ ಮೋದಿ ಸ್ಪಷ್ಟನೆ
ರಾಜಸ್ತಾನ ಮಾತ್ರವಲ್ಲದೇ ಪಂಜಾಬಿನ ಗಡಿ ಪ್ರದೇಶಗಳಲ್ಲೂ ರಾತ್ರಿ ಮುನ್ನೆಚ್ಚರಿಕೆ ಕ್ರಮವಾಗಿ ಬ್ಲ್ಯಾಕ್ ಔಟ್ ಮಾಡಲಾಗಿತ್ತು. ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಆದರೂ ಇದನ್ನು ಉಲ್ಲಂಘನೆ ಮಾಡಿದ್ದ ಪಾಕಿಸ್ತಾನ ವಿಫಲ ದಾಳಿ ಯತ್ನ ಮಾಡಿತ್ತು. ಇದಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಿದ್ದ ಭಾರತ ಸೇನೆ ಪಾಕ್ ಮೇಲೆ ಬಲವಾಗಿ ದಾಳಿ ಮಾಡಿತ್ತು.
ಕದನ ವಿರಾಮ ಘೋಷಣೆ ಮಾಡಿದ್ದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಒಪ್ಪಂದ ಉಲ್ಲಂಘಿಸಿ ದಾಳಿ ನಡೆಸಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ರಾತ್ರಿ ರಾಜಸ್ತಾನದ ಬಾಡ್ಮೇರ್ನಲ್ಲಿ ರಾತ್ರಿ 8:45ರಲ್ಲಿ ಬ್ಲ್ಯಾಕ್ ಔಟ್ ಮಾಡಲಾಗಿತ್ತು. ಜೈಸಲ್ಮೇರ್ನಲ್ಲಿ ರಾತ್ರಿ 7:30ರಿಂದ ಹಾಗೂ ಬಾಡಮೇರ್ನಲ್ಲಿ ರಾತ್ರಿ 8 ರಿಂದ ಕತ್ತಲು ಮಾತ್ರ ಇತ್ತು. ಪಂಜಾಬಿನ ಪಠಾಣ್ ಕೋಟ್ ಮತ್ತು ಹೋಶಿಯಾರ್ಪುರ್ದಲ್ಲಿಯೂ ರಾತ್ರಿ 9 ರಿಂದ ಕತ್ತಲು ಆವರಿಸಿತ್ತು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ