/newsfirstlive-kannada/media/post_attachments/wp-content/uploads/2024/12/KPL_15_LAC.jpg)
ವಂಚಕರು ತಮ್ಮ ಮಿಕಗಳಿಗೆ ನಯವಾಗಿಯೇ ಮಾತಾಡಿ ನಾಮ ಹಾಕುತ್ತಾರೆ. ಐಸ್ಕ್ರೀಂ ಮಾರೋಕೆ ಬಂದವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ಸ್ವ- ಸಹಾಯ ಗುಂಪಿನ ಮಹಿಳಾ ಸದಸ್ಯರ ಜೊತೆ ನೈಸ್ ಆಗಿ ಜೇನಿನಂತ ಮಾತುಗಳನ್ನ ಹೇಳಿ ಮೈಕ್ರೋ ಫೈನಾನ್ಸ್ ಗುಂಪಿನ ಸದಸ್ಯರ ತಲೆ ಕ್ಲೀನ್ ಆಗಿ ಸವರಿರೋ ಘಟನೆಗೆ ಕೊಪ್ಪಳ ಸಾಕ್ಷಿಯಾಗಿದೆ. ಐಸ್ ಕ್ರೀಂ ಮಾರಾಟ ಮಾಡುವ ದಂಪತಿ ಇಟ್ಟ ಐಸ್ಗೆ ಪಾಪ ಬೂದುಗುಂಪಾ ಗ್ರಾಮದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.
ಕಿಶನ್ ಸಿಂಗ್, ಸಪ್ನಾ ಸಿಂಗ್ ಇವರು ರಾಜಸ್ಥಾನ ಮೂಲದ ದಂಪತಿ. ಮನೆ ಹಾಗೂ ಅವರ ಐಸ್ ಕ್ರೀಂ ಬಂಡಿ ಇದೆ. ಇವ್ರ ಕ್ಯಾರೆಕ್ಟರ್ ಹೇಗೆ ಅಂದ್ರೆ.. ನೈಸಾಗಿಯೇ ಮಾತಾಡಿ ಐಸ್ ಕ್ರೀಮ್ ತಿನ್ನಿಸಿ, ಅಯ್ಯೋ ಅಮೌಂಟ್ ಏನು ಬೇಡ ಅಂತಾ ಬಿಲ್ಡಪ್ ಕೊಡೋದು. ಅವರ ಹೆಸರಲ್ಲಿ ಸಾಲ ಪಡೆದು ಪರಾರಿಯಾಗೋದು. ಇವ್ರು ಕಳೆದ 20 ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಬೂದಗುಂಪಾ ಗ್ರಾಮದಲ್ಲಿ ನೆಲೆಸಿದ್ದರು. ಈ ಐಸ್ ಕ್ರೀಮ್ ಜೋಡಿ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಕುಲ್ಫಿ ತಿನ್ನಿಸಿ ಎಸ್ಕೇಪ್ ಆಗಿದ್ದಾರೆ.
ಸ್ವ-ಸಹಾಯ ಗುಂಪಿನ ಮಹಿಳೆಯರ ಹೆಸರಲ್ಲಿ ಲಕ್ಷ ಲಕ್ಷ ಸಾಲ
ಕಿಶನ್ ಸಿಂಗ್ ಹಾಗೂ ಸಪ್ನಾ ಸಿಂಗ್ ವಿವಿಧ ಸ್ವಸಹಾಯ ಸಂಘ ಗುಂಪುಗಳಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ಹಣವನ್ನ ವಿವಿಧ ಮಹಿಳೆಯರ ಹೆಸರಲ್ಲಿ ಸಾಲ ಪಡೆದಿದ್ದಾರೆ. ಈ ದಂಪತಿಯನ್ನ ನಂಬಿ ಹಣ ಕೊಡಿಸಿದ ಮಹಿಳೆಯರು ಸದ್ಯ ಒಬ್ಬರನ್ನ ನೋಡುತ್ತ ಒಬ್ಬರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಸ್ವಸಹಾಯ ಗುಂಪಿನ ಒಬ್ಬೊಬ್ಬ ಮಹಿಳೆ ಏನಿಲ್ಲಂದ್ರೂ 1 ರಿಂದ 2 ಲಕ್ಷದವರೆಗೆ ಸಾಲ ಕೊಡಿಸಿದ್ದಾರಂತೆ. ಐಸ್ ಕ್ರೀಮ್ ಜೋಡಿ ತನ್ನಿಬ್ಬರ ಮಕ್ಕಳೊಂದಿಗೆ ರಾಜಸ್ಥಾನಕ್ಕೆ ಪರಾರಿಯಾಗಿದ್ದಾರಂತೆ.
ಇದನ್ನೂ ಓದಿ: 11 ಸಿಕ್ಸರ್, ಬೌಂಡರಿಗಳ ಸುರಿಮಳೆ! 28 ಬಾಲ್ನಲ್ಲಿ ಶತಕದ ‘ಅಭಿಷೇಕ’..! ಆದರೂ ಆ ದಾಖಲೆ ಮುರಿಯಲು ಆಗಲಿಲ್ಲ
ಕಳೆದ 1 ತಿಂಗಳಿಂದ ಮನೆಗೆ ಬೀಗ
ಸಂಜೀವಿ, ಕುವೆಂಪು, ಚೈತನ್ಯ, ಗ್ರಾಮೀಣ, ಐಡಿಎಫ್ಸಿ, ಅನ್ನಪೂರ್ಣೇಶ್ವರಿ ಮೈಕ್ರೋ ಫೈನಾನ್ಸ್ ಸ್ವಸಹಾಯ ಗುಂಪುಗಳಲ್ಲಿ, ಗುಂಪಿನ ಸದಸ್ಯ ಮಹಿಳೆಯರು ಹಣ ಕೊಡಿಸಿದ್ದಾರೆ. ಇದೀಗ ಹಣ ಮರು ಪಾವತಿಸದೆ ಕಳೆದ 1 ತಿಂಗಳಿಂದ ಮನೆಗೆ ಬೀಗ ಹಾಕಿ ನಾಪತ್ತೆ ಆಗಿದ್ದಾರೆ. ಹಾಗಾಗಿ ದಂಪತಿಯನ್ನ ಹುಡುಕಿಕೊಡಿ ಎಂದು ಮೋಸ ಹೋದ ಗುಂಪಿನ ಮಹಿಳೆಯರು ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐಸ್ ಕ್ರೀಂ ಮಾರುವ ದಂಪತಿಯ ನೈಸ್ ಮಾತುಗಳಿಗೆ ಮರಳಾಗಿ ಸ್ವಸಹಾಯ ಗುಂಪಿನಲ್ಲಿ ಹಣ ಕೊಡಿಸಿದ ಮಹಿಳೆಯರು ಕಂಗಾಲಾಗಿದ್ದಾರೆ. ನಾವು ಹಣ ಕಟ್ಟೋದ್ಹೇಗೆ ಅಂತಾ ಕಣ್ಣೀರಾಕ್ತಿರೋ ಇವ್ರನ್ನ ಆ ದೇವರೆ ಕಾಪಾಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ