newsfirstkannada.com

ಭೀಕರ ಕಾರು ಆ್ಯಕ್ಸಿಡೆಂಟ್​; ಕಾಂಗ್ರೆಸ್​ನ ಮಾಜಿ ಸಂಸದನ ಹೆಂಡತಿ ಸ್ಥಳದಲ್ಲೇ ಸಾವು.. ಮಗ ಸೇರಿ ಮೂವರು ಗಂಭೀರ

Share :

Published January 31, 2024 at 8:25am

Update January 31, 2024 at 8:26am

  ಅತಿ ವೇಗವಾಗಿ ಬಂದು ರಸ್ತೆ ಬದಿಯಿದ್ದ ತಡೆಗೋಡೆಗೆ ಕಾರು ಡಿಕ್ಕಿ

  ಸ್ಥಳದಲ್ಲೇ ಸಾವನ್ನಪ್ಪಿರುವ ಕಾಂಗ್ರೆಸ್​ನ ಮಾಜಿ ಸಂಸದನ ಹೆಂಡತಿ

  ಕಾರು ಆ್ಯಕ್ಸಿಡೆಂಟ್​ನಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು

ಜೈಪುರ: ದೆಹಲ್ಲಿ-ಮುಂಬೈ ಹೆದ್ದಾರಿಯಲ್ಲಿ ಭೀಕರವಾದ ಕಾರು ಆ್ಯಕ್ಸಿಡೆಂಟ್​ ಸಂಭವಿಸಿ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಜಸೋಲ್ ಅವರ ಪತ್ನಿ ಚಿತ್ರಾ ಸಿಂಗ್ ಸಾವನ್ನಪ್ಪಿದ್ದಾರೆ. ಮನ್ವೇಂದ್ರ ಸಿಂಗ್, ಇವರ ಮಗ ಹಾಗೂ ಕಾರು ಡ್ರೈವರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

ಕೆಲಸದ ನಿಮಿತ್ತ ಮನ್ವೇಂದ್ರ ಸಿಂಗ್ ದಂಪತಿ ಹಾಗೂ ಮಗ ಕಾರಿನಲ್ಲಿ ದೆಹಲ್ಲಿ-ಮುಂಬೈ ಹೆದ್ದಾರಿ ಮೂಲಕ ಜೈಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಪಕ್ಕದಲ್ಲಿನ ಕಾಲುವೆಗೆ ನಿರ್ಮಿಸಲಾಗಿರುವ ತಡೆ ಗೋಡೆಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಒಳಗಿದ್ದ ಮಾಜಿ ಸಂಸದ ಮನ್ವೇಂದ್ರ ಸಿಂಗ್ ಪತ್ನಿ ಚಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಘಟನೆಯಲ್ಲಿ ಮಾಜಿ ಸಂಸದ ಮನ್ವೇಂದ್ರ ಸಿಂಗ್​ ಎದೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಇವರ ಮಗ ಹಾಗೂ ಕಾರು ಡ್ರೈವರ್​​ಗೂ ಗಂಭೀರವಾದ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಅಲ್ವಾರದ ಸೋಲಂಕಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರ ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿಯ ದಿವಂಗತ ಜಸ್ವಂತ್ ಸಿಂಗ್ ಅವರ ಮಗ ಆಗಿರುವ ಮನ್ವೇಂದ್ರ ಸಿಂಗ್ ಅವರು 2018ರಲ್ಲಿ ಕಾಂಗ್ರೆಸ್​​ಗೆ ಸೇರ್ಪಡೆಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಕಾರು ಆ್ಯಕ್ಸಿಡೆಂಟ್​; ಕಾಂಗ್ರೆಸ್​ನ ಮಾಜಿ ಸಂಸದನ ಹೆಂಡತಿ ಸ್ಥಳದಲ್ಲೇ ಸಾವು.. ಮಗ ಸೇರಿ ಮೂವರು ಗಂಭೀರ

https://newsfirstlive.com/wp-content/uploads/2024/01/RAJASTHAN_EX_MP.jpg

Load More