Advertisment

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹುಡುಗಿ ಜನ್ಮದಿನಾಂಕ ಕಡ್ಡಾಯ.. ಸರ್ಕಾರದ ಆದೇಶ! ಕಾರಣವೇನು?

author-image
Veena Gangani
Updated On
ಮುಹೂರ್ತಕ್ಕೆ ಸರಿಯಾಗಿ ಮದುವೆ ಬೇಡ ಎಂದ ಮದುಮಗಳು.. ವರ ಹಾಗೂ ಆತನ ತಂದೆ ಅರೆಸ್ಟ್; ಅಸಲಿಗೆ ಆಗಿದ್ದೇನು?
Advertisment
  • ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇದನ್ನೂ ಸೇರಿಸಲೇಬೇಕು!
  • ರಾಜ್ಯ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ
  • ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಿಂದ ಆದೇಶ

ಜೈಪುರ್: ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ವರರ ಹೆಸರು, ಮುಹೂರ್ತ, ದಿನಾಂಕ, ಮಂಟಪ, ಕುಟುಂಬಸ್ಥರ ಹೆಸರು, ವಿಳಾಸ, ಕುಲದೇವತಾ ಪ್ರಸನ್ನ, ಗುರು ಹಿರಿಯ ಆಶೀರ್ವಾದ ಹೀಗೆ ಸೇರಿದಂತೆ ಒಂದಷ್ಟು ಮಾಹಿತಿಗಳನ್ನು ಹಾಕುತ್ತಾರೆ.

Advertisment

ಇದನ್ನೂ ಓದಿ:19 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ವಿಮಾನ ನಿಲ್ದಾಣ; ಇಲ್ಲಿ ವಿಮಾಣವೂ ಇಲ್ಲ, ಪ್ರಯಾಣಿಕರು ಇಲ್ಲ!

publive-image

ಇನ್ನುಂದೆ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ವಧು ವರರ ಹೆಸರಿನ ಜೊತೆಗೆ ಡೇಟ್ ಆಫ್ ಬರ್ತ್ ಉಲ್ಲೇಖಿಸುವುದು ಕಡ್ಡಾಯವಾಗಿದೆ. ಹಾಗಂತ ಸುಮ್ಮನೆ ಒಂದು ಡೇಟ್ ಹಾಕಿ ಪ್ರಿಂಟ್ ಮಾಡಿದರೂ ಆಪಾಯ ಕಟ್ಟಿಟ್ಟ ಬುತ್ತಿ. ಹೌದು, ರಾಜಸ್ಥಾನ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದೆ. ವಿಶೇಷ ಅಂದರೆ ಈ ನಿಯಮ ಬಹುತೇಕ ಎಲ್ಲಾ ರಾಜ್ಯದಲ್ಲೂ ಜಾರಿಯಾಗುವ ಸಾಧ್ಯತೆ ಇದೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ಹಾಗೂ ವರರ ಜನ್ಮ ದಿನಾಂಕ ಕಡ್ಡಾಯವಾಗಿ ಹಾಕಬೇಕು. ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡುವ ಪ್ರೆಸ್‌ಗಳು ಸುಖಾ ಸುಮ್ಮನೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಉಲ್ಲೇಖಿಸುವಂತಿಲ್ಲ. ಯಾರು ಮದುವೆ ಆಮಂತ್ರ ಪತ್ರಿಕೆ ಪ್ರಿಂಟ್ ಮಾಡಿಸುತ್ತಾರೋ, ಅವರು ತಮ್ಮ ಡೇಟ್ ಆಫ್ ಬರ್ತ್ ದಾಖಲೆ ನೀಡಬೇಕು. ಈ ದಾಖಲೆ ಪರಿಶೀಲಿಸಿ ಪ್ರಿಂಟಿಂಗ್ ಪ್ರೆಸ್ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ನಮೂದಿಸಬೇಕು. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ.

Advertisment

publive-image

ಇದನ್ನೂ ಓದಿ: ಊಟವಾದ ಮೇಲೆ ಲವಂಗವನ್ನು ತಿನ್ನಬೇಕು ಏಕೆ? ಇಲ್ಲಿವೆ ಪ್ರಮುಖ 6 ಕಾರಣಗಳು

ರಾಜಸ್ಥಾನ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆನಂದ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಾಲ್ಯ ವಿವಾಹ ತಡೆಗಟ್ಟಲು ಈ ನಿಯಮ ಜಾರಿಗೆ ತರಲಾಗಿದೆ. ರಾಜಸ್ಥಾನದಲ್ಲಿ ಬಾಲ್ಯ ವಿವಾಹ ಪದ್ಧತಿ ಹೆಚ್ಚಾಗಿದೆ. ಹೀಗಾಗಿ ಬಾಲ್ಯ ವಿವಾಹದ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಲು ಪ್ರೆಸ್‌ಗೆ ಮಾಹಿತಿ ಬಂದರೆ ಪೊಲೀಸರಿಗೆ ತಿಳಿಸಬೇಕು. ಒಂದು ವೇಳೆ ಮಾಹಿತಿ ನೀಡಲು ಪ್ರಿಂಟಿಂಗ್ ಪ್ರೆಸ್ ವಿಫಲವಾದರೆ, ಅಥವಾ ಮುಚ್ಚಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಬಾಲ್ಯ ವಿವಾಹ ತಡೆಗಟ್ಟಲು ಹಲವು ಕ್ರಮಗಳನ್ನು ರಾಜಸ್ಥಾನ ಸರ್ಕಾರ ಕೈಗೊಂಡಿದೆ. ಆದರೂ ಬಾಲ್ಯವಿವಾಹ ನಡೆಯುತ್ತಲೇ ಇದೆ. ಹೀಗಾಗಿ ಹೊಸ ಆದೇಶ ಹೊರಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment