/newsfirstlive-kannada/media/post_attachments/wp-content/uploads/2025/04/Kota-Hospital-Operation.jpg)
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಅನ್ನೋ ಗಾದೆ ಮಾತನ್ನು ಕೇಳಿರ್ತೀರಿ, ಓದಿರ್ತೀರಿ. ಥೇಟ್ ಇದೇ ರೀತಿಯಲ್ಲೇ ರಾಜಸ್ಥಾನದ ವೈದ್ಯರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಗಾಯಗೊಂಡ ಮಗನಿಗೆ ಚಿಕಿತ್ಸೆ ಕೊಡಿಸಲು ಹೋದ ಅಪ್ಪನಿಗೆ ಆಪರೇಷನ್ ಮಾಡಿ ಕೂರಿಸಿದ್ದರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ರಾಜಸ್ಥಾನದ ವೈದ್ಯರನ್ನ ನೆಟ್ಟಿಗರು ಅಕ್ಷರಶಃ ರುಬ್ಬುತ್ತಿದ್ದಾರೆ.
ಆ್ಯಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ್ದ ಮಗನ ಜತೆ ಅಪ್ಪ ಇದ್ರು
ರಾಜಸ್ಥಾನದ ಕೋಟಾ ಜಿಲ್ಲಾಸ್ಪತ್ರೆಯ ವೈದ್ಯರು ಬಹುದೊಡ್ಡ ಎಡವಟ್ಟು ಮಾಡಿದ್ದಾರೆ. ಪಾರ್ಶ್ವವಾಯು ಪೀಡಿತರಾಗಿದ್ದ ಜಗದೀಶ್ ಆ್ಯಕ್ಸಿಡೆಂಟ್ನಿಂದ ಗಾಯಗೊಂಡಿದ್ದ ಮಗ ಮನೀಷ್ನೊಂದಿಗೆ ಆಸ್ಪತ್ರೆಗೆ ಹೋಗಿದ್ದರು. ಇದೇ ಶನಿವಾರ ಅಪ್ಪನೊಂದಿಗೆ ಮಗನಿಗೂ ಶಸ್ತ್ರ ಚಿಕಿತ್ಸೆ ಮಾಡಿ ಆಸ್ಪತ್ರೆ ಬೆಡ್ ಮೇಲೆ ಇಬ್ಬರನ್ನೂ ಮಲಗಿಸಿದ್ದಾರೆ ವೈದ್ಯರು. ಇದೇ ಮಹಾ ಪ್ರಮಾದದ ಬಗ್ಗೆ ಇದೀಗ ಜಾಲತಾಣದಲ್ಲಿ ಬಹುದೊಡ್ಡ ಚರ್ಚೆಯೇ ನಡೀತಿದೆ.
ಇದನ್ನೂ ಓದಿ: ಪ್ರಾಣಿಗಳೂ ಕನಸು ಕಾಣುತ್ತವೆ.. ನಿದ್ರೆಯಲ್ಲಿದ್ದಾಗ ಅವು ಏನನ್ನು ನೋಡುತ್ತವೆ..?
ಮಗನೊಂದಿಗೆ ಅಪ್ಪನಿಗೂ 5-6 ಸ್ಟಿಚ್ ಹಾಕಿರೋ ವೈದ್ಯರು
ಶುಕ್ರವಾರ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಮನೀಷ್ ಜೊತೆಯಲ್ಲಿ ಯಾರೂ ಇಲ್ಲದ ಕಾರಣ ಅಪ್ಪನೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಶನಿವಾರ ನಿಮಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಅಂತ ವೈದ್ಯರು ಹೇಳಿದ್ರು. ಇದೇ ಕಾರಣಕ್ಕೇ ಅಪ್ಪ ನೀವು ಆಪರೇಷನ್ ಥಿಯೇಟರ್ ಹೊರಗೆ ಕಾಯುತ್ತಾ ಇರಿ ಅಂತ ಹೇಳಿದ್ದೆ. ಆದರೇ, ನನ್ನ ಆಪರೇಷನ್ ಮುಗಿದ ಮೇಲೆ ನೋಡಿದರೇ, ನನ್ನ ಅಪ್ಪನಿಗೂ 5-6 ಸ್ಟಿಚ್ ಹಾಕಿರುವುದು ಗೊತ್ತಾಗಿದೆ ಎನ್ನುತ್ತಿದ್ದಾರೆ ಮನೀಷ್.
ಆಪರೇಷನ್ ಮಾಡಿದವರ ಹೆಸರು ಗೊತ್ತಿಲ್ಲ ಎಂದ ವೃದ್ಧ
ತನಗೆ ಆಪರೇಷನ್ ಮಾಡಿದ್ದು ಯಾರು ಅನ್ನೋದು ಗೊತ್ತಿಲ್ಲ ಎನ್ನುತ್ತಿರೋ ವೃದ್ಧ ಜಗದೀಶ್ ಅಶಕ್ತರಾಗಿ ಬೆಡ್ ಮೇಲೆ ಮಲಗಿದ್ದಾರೆ. ಈ ಪ್ರಮಾದದ ಬಗ್ಗೆ ಕೂಡಲೇ ಸಮಿತಿ ರಚಿಸಿ ತನಿಖೆ ಮಾಡುತ್ತೇವೆ ಅಂತ ಕೋಟಾ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾಕ್ಟರ್ ಸಂಗೀತ ಸಕ್ಸೆನಾ ಹೇಳಿಕೆ ನೀಡಿದ್ದಾರೆ. ಮೂವರು ಸದಸ್ಯರ ಸಮಿತಿ ರಚಿಸಿದ್ದು, ಆದಷ್ಟು ಬೇಗ ತನಿಖೆಯ ವರದಿ ತರಿಸಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ