ಪಾಕ್ ಹುಡುಗಿಯ ಮದುವೆ ಆಗಲು ಅಟ್ಟಾರಿ ಗಡಿಗೆ ಬಂದ ರಾಜಸ್ಥಾನದ ಪ್ರೇಮಿ.. ಮುಂದೇನಾಯ್ತು..?

author-image
Veena Gangani
Updated On
ಪಾಕ್ ಹುಡುಗಿಯ ಮದುವೆ ಆಗಲು ಅಟ್ಟಾರಿ ಗಡಿಗೆ ಬಂದ ರಾಜಸ್ಥಾನದ ಪ್ರೇಮಿ.. ಮುಂದೇನಾಯ್ತು..?
Advertisment
  • ಆಕೆಯ ಜೊತೆಗೆ ಮದುವೆ ಆಗಲು ಸಜ್ಜಾಗಿದ್ದ ವರ
  • ವಧುವನ್ನು ಭೇಟಿಯಾಗೋ ತವಕದಲ್ಲಿದ್ದ ಮದುಮಗ
  • ದಿಢೀರ್​ ಅಂತ ಇಬ್ಬರ ಮದುವೆ ಕ್ಯಾನ್ಸಲ್​ ಆಗಿದ್ದೇಕೆ?

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಕೇವಲ ಹಿಂದೂಗಳನ್ನೇ ಟಾರ್ಗೆಟ್​ ಮಾಡಿ 26 ಅಮಾಯಕ ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆಗೈದ್ದರು ಪಾಕಿಸ್ತಾನಿ ಪಾಪಿಗಳು.

ಇದನ್ನೂ ಓದಿ:ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು ನಾಳೆಯೇ ಡೆಡ್​ಲೈನ್​; ಕರ್ನಾಟಕದಲ್ಲಿ ಎಷ್ಟು ಮಂದಿ ಇದ್ದಾರೆ..?

publive-image

ಆದ್ರೆ, ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ಖಂಡಿಸಿ ಭಾರತ ಸರ್ಕಾರ ಪಾಕಿಸ್ತಾನ ವಿರುದ್ಧ ಪ್ರತೀಕಾರದ ನಿರ್ಣಯಗಳನ್ನ ಕೈಗೊಂಡಿದೆ. ಭಾರತದಲ್ಲಿ ವಾಸವಾಗಿರೋ ಪಾಕಿಸ್ತಾನಿಗಳು ವಾಪಸ್​ ಹೋಗುವಂತೆ 48 ಗಂಟೆಗಳ ಕಾಲ ಗುಡುವು ಕೊಟ್ಟಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿ ಬಂದ್ ಮಾಡಲಾಗಿದೆ.

publive-image

ಗಡಿ ಬಂದ್​ ಮಾಡಿದ್ದರಿಂದ ರಾಜಸ್ಥಾನದ ವ್ಯಕ್ತಿಯೊಬ್ಬ ಮದುವೆಯೇ ಕ್ಯಾನ್ಸಲ್ ಆಗಿದೆ. ರಾಜಸ್ಥಾನದ ನಿವಾಸಿ ಶೈತಾನ್ ಸಿಂಗ್, ತನ್ನ ಪ್ರೇಯಸಿಯನ್ನು ಮದುವೆಯಾಗಲು ಈ ವಾರ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದ. ಹೀಗಾಗಿ ಮದುವೆಯ​ ಖುಷಿಯಲ್ಲಿದ್ದ ಶೈತಾನ್ ಸಿಂಗ್ ಆಘಾತವುಂಟಾಗಿದೆ. ಪಾಕಿಸ್ತಾನದ ಯುವತಿಯ ಜೊತೆ ಮದುವೆಯಾಗಲು ಅಟ್ಟಾರಿ ಗಡಿ ದಾಟಲು ಬರಾತ್​ನೊಂದಿಗೆ ಹೋಗಿದ್ದರು. ಆದರೆ, ಗಡಿಯನ್ನು ಬಂದ್ ಮಾಡಿರುವುದರಿಂದ ಅವರನ್ನು ವಾಪಾಸ್ ಮನೆಗೆ ಕಳುಹಿಸಲಾಗಿದೆ. ಇದರಿಂದ ಅವರ ಮದುವೆ ಮುರಿದುಬಿದ್ದಿದೆ.

publive-image

ಸದ್ಯ ಮದುವೆವನ್ನು ಮುಂದೂಡಿದ ಶೈತಾನ್ ಸಿಂಗ್ ಹೇಳಿದ್ದೇನು?

ಭಯೋತ್ಪಾದಕರು ಮಾಡಿದ್ದು ತಪ್ಪು, ಗಡಿ ಮುಚ್ಚಿರುವುದರಿಂದ ನಮಗೆ (ಪಾಕಿಸ್ತಾನಕ್ಕೆ) ಹೋಗಲು ಅವಕಾಶ ನೀಡುತ್ತಿಲ್ಲ. ಈಗ ಏನಾಗುತ್ತದೆ ಎಂದು ನೋಡೋಣ. ಕಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment