/newsfirstlive-kannada/media/post_attachments/wp-content/uploads/2025/04/NGO-BOUGHT-GIRLS.jpg)
ಮಾನವ ಕಳ್ಳ ಸಾಗಾಣಿಕೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಒಂದು ಆತಂಕಕ್ಕೆ ಕಾರಣವಾದರೆ. ಎನ್ಜಿಒ ಸೋಗಲ್ಲಿ ಇರುವವರೇ ಇಂತಹದನ್ನು ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ದೊಡ್ಡ ಆತಂಕ. ಹೌದು ರಾಜಸ್ಥಾನದಲ್ಲಿ ಇಂತಹ ಒಂದು ಖತರ್ನಾಕ್ ಎನ್ಜಿಒವನ ರಹಸ್ಯವನ್ನು ಬೇಧಿಸಿದ್ದಾರೆ ಪೊಲೀಸರು. ಈ ಎನ್ಜಿಒ ಸಂಸ್ಥೆಗೆ ಬಡವರ ಹೆಣ್ಣು ಮಕ್ಕಳೇ ಟಾರ್ಗೆಟ್. ಅವರಿಂದ ನಿಮ್ಮ ಮಗುವಿಗೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಅವರಿಂದ ಯುವತಿಯರು, ಬಾಲಕಿಯರನ್ನು ಬಿಡದೆ ಪಡೆದುಕೊಂಡು ಅವರನ್ನು ಲಕ್ಷಾಂತರ ರೂಪಾಯಿಗೆ ಮಾರುತ್ತಿದ್ದ ಎನ್ಜಿಒನ ಅಸಲಿ ರೂಪ ಈಗ ಹೊರಗೆ ಬಂದಿದೆ.
ರಾಜಸ್ಥಾನದ ರಾಜಧಾನಿ ಜೈಪುರನಿಂದ 30 ಕಿಲೋ ಮೀಟರ್ ದೂರದಲ್ಲಿರುವ ಬಸ್ಸಿ ಬಳಿಯಿರುವ ಸುಜನಾಪುರ ಎಂಬ ಗ್ರಾಮದಲ್ಲಿ, ಗಾಯಿತ್ರಿ ಸರ್ವ ಸಮಾಜ ಸೇವೆ ಎಂಬ ಒಂದು ಎನ್ಜಿಒವನ್ನು ಫಾರ್ಮ್ಹೌಸ್ನಲ್ಲಿ ನಡೆಸಲಾಗುತ್ತಿತ್ತು. ಈ ಒಂದು ಎನ್ಜಿಒ ಸಾಮೂಹಿಕ ವಿವಾಹ ಮಾಡಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ಹೇಳಿಕೊಂಡಿತ್ತು. ಆದರೆ ಬಡವರ ಮನೆಯ ಬಾಲಕಿಯರನ್ನು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ಈಗ ತಿಳಿದು ಬಂದಿದೆ.
ಇದನ್ನೂ ಓದಿ: 30 ವರ್ಷ, 3 ಮಕ್ಕಳು.. ಮತಾಂತರಗೊಂಡು PUC ವಿದ್ಯಾರ್ಥಿ ಜೊತೆ ಮದುವೆಯಾದ ಮಹಿಳೆ!
ಒಂದು ಗ್ಯಾಂಗ್ನ ಸದಸ್ಯರು ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರಪ್ರದೇಶದಿಂದ ಇಲ್ಲಿಗೆ ಬಂದಿರುವ ಬಡವರ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಅವರನ್ನು ಕರೆದುಕೊಂಡು ಬಂದು ಗಾಯಿತ್ರಿ ವಿಶ್ವಕರ್ಮಳಿಗೆ ಮಾರುತ್ತಿದ್ದರು. ಈಕೆ ಗಾಯಿತ್ರಿ ಸರ್ವ ಸೇವಾ ಸಮಾಜ ಫೌಂಡೇಷನ್ ಎನ್ಜಿಒನ ನಿರ್ದೇಶಕಿ. ಈಕೆ ಯಾರು ಮದುವೆಗಾಗಿ ಹೆಣ್ಣನ್ನು ಹುಡುಕುತ್ತಿರುತ್ತಾರೋ ಅಂತವರನ್ನು ಗುರುತಿಸಿ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಮಾರುತ್ತಿದ್ದರು ಎಂದು ಬಸ್ಸಿ ಪೊಲೀಸ್ ಠಾಣೆಯ ಉಸ್ತುವಾರಿ ಅಭಿಜಿತ್ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ:ಮುಂಬೈ 26/11 ದಾಳಿಯ ಮಾಸ್ಟರ್ ಮೈಂಡ್ ಗಡಿಪಾರು.. ಇಂದು ಮಧ್ಯಾಹ್ನ ಭಾರತಕ್ಕೆ ರಾಣಾ!
ಇನ್ನು ಹೀಗೆ ಖರೀದಿ ಮಾಡಲಾದ ಹೆಣ್ಣು ಮಕ್ಕಳ ದರವನ್ನು ಅವರ ಮೈಬಣ್ಣ, ಎತ್ತರ ಮತ್ತು ವಯಸ್ಸಿನ ಆಧಾರದ ಮೇಲೆ ನಿಗದಿಯಾಗುತ್ತಿತ್ತಂತೆ. ಎನ್ಜಿಒನ ನಿರ್ದೇಶಕಿ ಗಾಯಿತ್ರಿ ಅವರ ಫೇಕ್ ಆಧಾರ್ ಕಾರ್ಡ್ ತಯಾರಿಸಿ ಅವರ ವಯಸ್ಸನ್ನು 18ಕ್ಕೆ ಮಾರ್ಪಾಡು ಮಾಡುತ್ತಿದ್ದಳಂತೆ. ಇಂತಹ 1,500 ಮದುವೆಗಳನ್ನು ಆಕೆ ಮಾಡಿದ್ದಾಳೆ ಮತ್ತು ಆಕೆಯ ಮೇಲೆ ಈಗಾಗಲೇ 10 ಕೇಸ್ಗಳು ದಾಖಲಾಗಿದ್ದವು ಎಂದು ಹೇಳಲಾಗಿದೆ.
ಈ ಖತರ್ನಾಕ ಜಾಲ ಬಯಲಾಗಿದ್ದು ಹೇಗೆ?
ಕಳೆದ ಹಲವು ವರ್ಷಗಳಿಂದ ಗಾಯಿತ್ರಿಯ ಈ ದಂಧೆ ಜಾರಿಯಲ್ಲಿಯೇ ಇತ್ತು. ಆದ್ರೆ ಆಕೆಯ ಅಸಲಿ ಬಣ್ಣ ಆಚೆಗೆ ಬಂದಿದ್ದು 16 ವರ್ಷದ ಯುವತಿ ಈ ಒಂದು ಜಾಲದಿಂದ ತಪ್ಪಿಸಿಕೊಂಡು ಓಡಿ ಬಂದ ಮೇಲೆ ಬೆಳಕಿಗೆ ಬಂದಿದೆ. ಉತ್ತರಪ್ರದೇಶದ 16 ವರ್ಷದ ಬಾಲಕಿ, ಗಾಯಿತ್ರಿಯ ಫಾರ್ಮ್ಹೌಸ್ನಿಂದ ತಪ್ಪಿಸಿಕೊಂಡು ಬಂದು ಪೊಲೀಸರ ಎದುರು ಎಲ್ಲ ಸತ್ಯವನ್ನು ಹೇಳಿದ್ದಾಳೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಗಾಯಿತ್ರಿ ಫಾರ್ಮ್ಹೌಸ್ ಮೇಲೆ ದಾಳಿ ಮಾಡಿ ಆಕೆಯನ್ನು ಅರೆಸ್ಟ್ ಮಾಡಿದ್ದಾರೆ. ಅವಳ ಜೊತೆಗೆ ಹುನುಮಾನ್, ಭಗವಾನ್ ದಾಸ್ ಮತ್ತು ಮಹೇಂದ್ರ ಎಂಬ ಮೂವರನ್ನು ಕೂಡ ಅರೆಸ್ಟ್ ಮಾಡಲಾಗಿದೆ.
ಇನ್ನು ಗ್ರಾಮಸ್ಥರು ಹೇಳುವ ಪ್ರಕಾರ ನಮಗೆ ಈ ಎನ್ಜಿಒ ಬಗ್ಗೆ ಬಡಮಕ್ಕಳನ್ನು ಮದುವೆ ಮಾಡಿಸಿಕೊಡುವ ಒಂದು ಸಂಸ್ಥೆಯೆಂದು ಅಷ್ಟೇ ತಿಳಿದಿದ್ದೇವು. ಕಾರಣ ಆಕೆಯ ಫಾರ್ಮ್ಹೌಸ್ ಗ್ರಾಮದ ಕೊನೆಯ ತುದಿಯಲ್ಲಿದೆ. ನಾಲ್ಕು ತಿಂಗಳ ಹಿಂದೆಯೂ ಕೂಡ ಒಬ್ಬ ಬಾಲಕಿ ಅಲ್ಲಿಂದ ಓಡಿ ಬಂದಿದ್ದಳು. ನಮ್ಮ ಮುಂದೆ ಏನೇನೋ ಹೇಳಿದಳು. ಆದರೆ ನಮಗೆ ಆಕೆಯ ಭಾಷೆ ಅರ್ಥವಾಗದ ಕಾರಣ ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ