/newsfirstlive-kannada/media/post_attachments/wp-content/uploads/2024/06/Riyaan-Parag.webp)
T20 ವಿಶ್ವಕಪ್​​ ಪಂದ್ಯಾಟಕ್ಕೆ ಚಾಲನೆ ಸಿಕ್ಕಿದೆ. ಭಾರತವು ಜೂನ್​ 5ರಂದು ಐರ್ಲೆಂಡ್​ ತಂಡವನ್ನು ಮೊದಲ ಬಾರಿ ಎದುರಿಸುತ್ತಿದೆ. ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳಂತೂ ವಿಶ್ವಕಪ್​ ಪಂದ್ಯಗಳನ್ನು ನೋಡಲು ಕಾತುರರಾಗಿದ್ದಾರೆ. ಹೀಗಿರುವಾಗ ರಾಜಸ್ಥಾನ್​ ರಾಯಲ್ಸ್​ ತಂಡದ ಆಲ್​ ರೌಂಡರ್​ ರಿಯಾನ್​ ಪರಾಗ್​ ಈ ಬಾರಿಯ ಟಿ20 ವಿಶ್ವಕಪ್​ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಟಿ20 ವಿಶ್ವಕಪ್​ ತಂಡವನ್ನು ಪ್ರಕಟಿಸುವ ಮೊದಲು ರಿಯಾನ್​ ಪರಾಗ್​ ಅವರ ಹೆಸರು ಚರ್ಚೆಗೆ ಬಂದಿತ್ತು. ಆದರೆ ತಂಡ ಪ್ರಕಟವಾದ ಬಳಿಕ ಅದರಲ್ಲಿ ರಿಯಾನ್​ ಪರಾಗ್​ಗೆ ಸ್ಥಾನ ಕೈತಪ್ಪಿತು. ಈ ವಿಚಾರವಾಗಿ ರಿಯಾಗ್​ ಪರಾಗ್​​ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ‘‘ನಾನು ಈ ಬಾರಿಯ ಟಿ20 ವಿಶ್ವಕಪ್​​ ಬಗ್ಗೆ ಚಿಂತಿಸುತ್ತಿದ್ದೆ’’ ಎಂದು ರಿಯಾನ್ ಹೇಳಿದ್ದಾರೆ.
?️"Nobody matches Virat's onfield aura". #RiyanParag#T20WorldCup#TeamIndia#BharatArmypic.twitter.com/xETkhN1Gok
— The Bharat Army (@thebharatarmy)
🗣️"Nobody matches Virat's onfield aura". #RiyanParag#T20WorldCup#TeamIndia#BharatArmypic.twitter.com/xETkhN1Gok
— The Bharat Army (@thebharatarmy) June 1, 2024
">June 1, 2024
‘‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ವಿಶ್ವಕಪ್​ ನೋಡಲು ಇಷ್ಟಪಡುವುದಿಲ್ಲ. ಕೊನೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾಣಲು ಪಂದ್ಯ ನೋಡುತ್ತೇನೆ ಮತ್ತು ಸಂತೋಷ ಪಡುತ್ತೇನೆ. ನಾನು ವಿಶ್ವಕಪ್​ ಆಡುವಾಗ ಅಗ್ರ ನಾಲ್ಕು ತಂಡ ಮತ್ತು ಅವೆಲ್ಲದರ ಬಗ್ಗೆ ಯೋಚನೆ ಮಾಡುತ್ತೇನೆ’’ ಎಂದು ರಾಜಸ್ಥಾನ್​ ರಾಯಲ್ಸ್​ ತಂಡದ ಆಲ್​ರೌಂಡರ್​ ಹೇಳಿದ್ದಾರೆ.
ಸದ್ಯ ರಿಯಾನ್​ ಪರಾಗ್​ ಸಂದರ್ಶನದಲ್ಲಿ ಆಡಿದ ಮಾತುಗಳು ವೈರಲ್​ ಆಗಿವೆ. ಅನೇಕರು ಅವರ ಮಾತುಗಳನ್ನು ಟ್ರೋಲ್​ ಮಾಡುತ್ತಿದ್ದಾರೆ.
ಈ ಬಾರಿಯ ಐಪಿಎಲ್​ನಲ್ಲಿ ರಿಯಾನ್​ ಪರಾಗ್​ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಅಸ್ಸಾಂ ಮೂಲದ ರಿಯಾನ್​ ಈ ಬಾರಿಯ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಜೊತೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಆಸೆ ಕೈಚೆಲ್ಲಿತು. ಹೀಗಾಗಿ ಮುಂದಿನ ಬಾರಿಯಾದರೂ ತಂಡ ಜೊತೆಯಾಗಲಿದ್ದೇನೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us