KKR vs RR ಈ ಎರಡರಲ್ಲೂ ಗೆಲುವು ಯಾರಿಗೆ, ಊಹಿಸುವುದೇ ಕಷ್ಟ.. ಯಾಕೆ ಗೊತ್ತಾ?

author-image
Bheemappa
Updated On
KKR vs RR ಈ ಎರಡರಲ್ಲೂ ಗೆಲುವು ಯಾರಿಗೆ, ಊಹಿಸುವುದೇ ಕಷ್ಟ.. ಯಾಕೆ ಗೊತ್ತಾ?
Advertisment
  • ರಾಜಸ್ಥಾನ- ಕೋಲ್ಕತ್ತಾ ಜಿದ್ದಿಗೆ ಬಿದ್ದರೇ ಸೋಲು ಒಪ್ಪುವುದು ಕಷ್ಟ
  • ಈ ಹಿಂದೆ ಆಡಿರುವ ಐಪಿಎಲ್​ ಪಂದ್ಯಗಳಲ್ಲಿ ಫಲಿತಾಂಶ ಏನಾಗಿದೆ?
  • ವಿಜಯಲಕ್ಷ್ಮಿ ಇದೇ ತಂಡಕ್ಕೆ ಒಲಿಯುತ್ತಾಳೆಂದು ಹೇಳಕ್ಕೆ ಆಗಲ್ಲ!

2025ರ ಐಪಿಎಲ್​ ಟೂರ್ನಿಯನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್​ ಸೋಲಿನಿಂದಲೇ ಆರಂಭಿಸಿವೆ. ಹಾಲಿ ಚಾಂಪಿಯನ್ ಆಗಿರುವ ಕೆಕೆಆರ್ ಟೀಮ್, ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹೀನಾಯವಾಗಿ ಸೋತಿದೆ. ಇದರ ಬೆನ್ನಲ್ಲೇ ಹೈದ್ರಾಬಾದ್ ಎದುರು ರಾಜಸ್ಥಾನ್ ಕೂಡ ದೊಡ್ಡ ಮುಖಭಂಗ ಅನುಭವಿಸಿತು. ಇದರಿಂದಾಗಿಯೇ ಇಂದಿನ ಪಂದ್ಯ ಈ ತಂಡಗಳಿಗೆ ಮುಖ್ಯವಾಗಿದೆ.

ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ 7:30ಕ್ಕೆ ಅಖಾಡಕ್ಕೆ ಇಳಿಯಲಿವೆ. ಗೆಲುವೊಂದೇ ಎರಡಕ್ಕೂ ಇಂಪಾರ್ಟೆಂಟ್​ ಆಗಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಇವರಿಗೆ ಗೆಲುವಿನ ಹುಡುಕಾಟದಲ್ಲಿವೆ. ಆದ್ರೆ ಇಂದಿನ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂದು ಊಹಿಸುವುದೇ ಕಷ್ಟ..ಕಷ್ಟ..

ಇದನ್ನೂ ಓದಿ: ಗ್ರೇಟ್ ಫಿನಿಶರ್ ಅಶುತೋಷ್ ಶರ್ಮಾಗೆ ಕ್ರಿಕೆಟ್ ಗಾಢ್​ ಫಾದರ್ ಯಾರು..?

publive-image

ರಾಜಸ್ಥಾನ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಈ ಎರಡು ಟೀಮ್​ಗಳು ಈ ವರೆಗೆ 30 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ತಲಾ 14 ಪಂದ್ಯಗಳನ್ನು ಗೆದ್ದು ಶಕ್ತಿ ಪ್ರದರ್ಶನ ಮಾಡಿವೆ. ಉಳಿದ ಎರಡು ಪಂದ್ಯಗಳು ಡ್ರಾ ಆಗಿದ್ದವು. ಹೀಗಾಗಿ ಇಂದಿನ ಪಂದ್ಯ ಯಾರು ಗೆಲ್ಲುತ್ತಾರೆ ಎನ್ನುವುದು ಊಹಿಸುವುದು ಅಸಾಧ್ಯ ಎಂದು ಹೇಳಬಹುದು.

ಪಿಚ್​ನಿಂದ ಏನನ್ನು ನಿರೀಕ್ಷೆಬಹುದು ಎಂದು ನೋಡುವುದಾದ್ರೆ, ಕಳೆದ ಬಾರಿ ನಡೆದ ಪಂದ್ಯದಲ್ಲಿ ಸೀಮರ್ಸ್​, ಸ್ಪಿನ್‌ಗಳ ವೇಗ ಬದಲಾವಣೆ ಆಗಿತ್ತು. ಇದು ಕೆಕೆಆರ್​ಗೆ ಹೆಚ್ಚಿನ ಸಹಾಯಕ ಎಂದು ಹೇಳಲಾಗುತ್ತಿದೆ. ಈ ಮೈದಾನದಲ್ಲಿ ಇದುವರೆಗೆ 3 ಐಪಿಎಲ್ ಪಂದ್ಯಗಳು ನಡೆದಿವೆ. ಈ ಮೂರು ಮ್ಯಾಚ್​​ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 2 ಬಾರಿ ಗೆಲುವು ಸಾಧಿಸಿವೆ. ಇದರಿಂದ ಇಲ್ಲಿ ಮೊದಲ ಬ್ಯಾಟಿಂಗ್​ ಮುಖ್ಯ ಎನ್ನುವುದು ಪ್ರೆಡಿಕ್ಟ್ ಮಾಡಬಹುದು ಅಷ್ಟೇ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment