/newsfirstlive-kannada/media/post_attachments/wp-content/uploads/2025/04/KL_RAHUL-1.jpg)
ತವರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಧಾರಣ ಮೊತ್ತದ ಟಾರ್ಗೆಟ್ ದಾಖಲು ಮಾಡಿದೆ. 20 ಓವರ್ಗಳನ್ನು ಆಡಿ 5 ವಿಕೆಟ್ ನಷ್ಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಟೀಮ್ಗೆ 189 ರನ್ಗಳ ಗುರಿ ನೀಡಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿ, ಡೆಲ್ಲಿ ತಂಡವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ತಂಡದ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಮೆಕ್ಗುರ್ಕ್ ಹಾಗೂ ಅಭಿಷೇಕ್ ಪೊರೆಲ್ ಉತ್ತಮ ಆರಂಭ ಪಡೆಯಲಿಲ್ಲ. ಕೇವಲ 9 ರನ್ಗೆ ಮೆಕ್ಗುರ್ಕ್ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಕನ್ನಡಿಗ ಕರುಣ್ ನಾಯರ್ ರನ್ ಔಟ್ ಆಗಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ.
ಇದನ್ನೂ ಓದಿ:IPL ಇತಿಹಾಸದಲ್ಲೇ ವಿಶೇಷ ದಾಖಲೆ.. ಕೆಕೆಆರ್ ಲೆಜೆಂಡ್ ರೆಕಾರ್ಡ್ ಸರಿಗಟ್ಟಿದ ಚಹಲ್
ಆದರೆ ಅಭಿಷೇಕ್ ಪೊರೆಲ್ ಮಾತ್ರ ಕ್ರೀಸ್ನಲ್ಲೇ ಇದ್ದರು. ಈ ವೇಳೆ ಪೊರೆಲ್ಗೆ ಜೊತೆಯಾದ ಕನ್ನಡಿಗ ಕೆ.ಎಲ್ ರಾಹುಲ್ ಅವರು ತಂಡದ ರನ್ಗಳನ್ನು ಸುಧಾರಣೆಗೆ ತಂದರು. ಕೆ.ಎಲ್ ರಾಹುಲ್ 32 ಎಸೆತಗಳಲ್ಲಿ 2 ಫೊರ್, 2 ಸಿಕ್ಸರ್ನಿಂದ 38 ರನ್ಗಳಿಸಿ ಬ್ಯಾಟ್ ಬೀಸುವಾಗ ಕ್ಯಾಚ್ ಕೊಟ್ಟು ಹೊರ ನಡೆದರು. ಇವರ ಬೆನ್ನಲ್ಲೇ ಅಭಿಷೇಕ್ ಪೊರೆಲ್ ಕೂಡ ಪೆವಿಲಿಯನ್ ಸೇರಿದರು.
ಅಭಿಷೇಕ್ ಪೊರೆಲ್ ಭರ್ಜರಿ ಬ್ಯಾಟಿಂಗ್ ಮಾಡಿ, 37 ಎಸೆತಗಳಲ್ಲಿ 5 ಫೊರ್, 1 ಸಿಕ್ಸರ್ನಿಂದ 49 ರನ್ಗಳನ್ನು ಬಾರಿಸಿದರು. ರಿಯಾನ್ ಪರಾಗ್ಗೆ ಕ್ಯಾಚ್ ಕೊಡುವ ಮೂಲಕ ಕೇವಲ 1 ರನ್ನಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ಕ್ಯಾಪ್ಟನ್ ಅಕ್ಷರ್ ಪಟೇಲ್ ಅವರು ಕೇವಲ 14 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ನಿಂದ 34 ರನ್ಗೆ ಔಟ್ ಆದರು. ಅಶುತೋಷ್ ಶರ್ಮಾ 15, ಸ್ಟಬ್ಸ್ ಅಜೇಯ 34 ರನ್ ಗಳಿಸಿ ತಂಡಕ್ಕೆ ನೆರವಾದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 189 ರನ್ಗಳ ಟಾರ್ಗೆಟ್ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ