newsfirstkannada.com

ಸ್ಮೃತಿ ಮಂದಾನ ಟೀಂಗೆ ವಿಶ್ ಮಾಡುತ್ತಲೇ, ಕೊಹ್ಲಿ ಪಡೆಯ ಕಾಲೆಳೆದ ರಾಜಸ್ಥಾನ್ ರಾಯಲ್ಸ್..!

Share :

Published March 18, 2024 at 2:53pm

  WPL ಟ್ರೋಫಿಗೆ ಮುತ್ತಿಟ್ಟಿರುವ ಸ್ಮೃತಿ ಮಂದಾನ ಪಡೆ

  ಆರ್​ಸಿಬಿ ತಂಡಕ್ಕೆ ಶುಭಾಶಯ ಕೋರಿ ಗೇಲಿ ಮಾಡಿದ RR

  ಸತತ 16 ವರ್ಷಗಳಿಂದ ಕಪ್​​ಗಾಗಿ ಪ್ರಯತ್ನಿಸ್ತಿರುವ ಆರ್​​ಸಿಬಿ

ಸತತ 16 ವರ್ಷಗಳಿಂದ ಆರ್​ಸಿಬಿ ಅಭಿಮಾನಿಗಳು ಐಪಿಎಲ್ ಟ್ರೋಫಿಗಾಗಿ ಕಾದು ಕೂತಿದ್ದರು. ಅಂತೂ WPLನಲ್ಲಿ ಸ್ಮೃತಿ ಮಂದಾನ ಪಡೆ ಕೇವಲ ಎರಡನೇ ಪ್ರಯತ್ನದಲ್ಲೇ ಕಪ್​ ತಂದುಕೊಟ್ಟಿದೆ. ಸದ್ಯ ಆರ್​ಸಿಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆರ್​ಸಿಬಿ ಕಪ್ ಗೆದ್ದ ಬೆನ್ನಲ್ಲೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಇದೀಗ ರಾಜಸ್ಥಾನ್ ರಾಯಲ್ಸ್ ತಂಡ ಆರ್​​ಸಿಬಿಗೆ ಮಾಡಿದ ಶುಭಾಶಯವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಆರ್​ಸಿಬಿ ಮಹಿಳೆಯರ ತಂಡ ಕಪ್ ಗೆದ್ದಿರುವ ಖುಷಿಯಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್​ ತಂಡ ಆರ್​ಸಿಬಿ ಪುರುಷರ ತಂಡವನ್ನು ಕಾಲೆಳೆದು ಶುಭಾಶಯ ಕೋರಿದೆ.

ರಾಜಸ್ಥಾನ್ ರಾಯಲ್ಸ್​ ತಂಡದ ಟ್ವೀಟ್​ನಲ್ಲಿ ಏನಿದೆ..?

ಖ್ಯಾತ ಬಾಲಿವುಡ್​​ನ ದಿಲೀಪ್ ಜೋಶಿ ನಟನೆಗೆ ಸಂಬಂಧಿಸಿದ ಮೂರು ಫೋಟೋಗಳನ್ನು ಒಂದೇ ಫ್ರೇಮ್​​ನಲ್ಲಿ ಕೊಲಾಜ್ ಮಾಡಿರುವ ಭಾವ ಚಿತ್ರವನ್ನು ರಾಜಸ್ಥಾನ್ ರಾಯಲ್ಸ್​ ಹಂಚಿಕೊಂಡಿದೆ. ಮೊದಲ ಫೋಟೋದಲ್ಲಿ ವ್ಯಕ್ತಿಯೊಬ್ಬ (ದಿಲೀಪ್ ಜೋಶಿ) ಸಿಲಿಂಡರ್​​​ ಮನೆಗೆ ಹೊತ್ತುಕೊಂಡು ಬರಲು ಪ್ರಯಾಸ ಪಡುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಮಹಿಳೆಯೋರ್ವಳು ಸಿಲಿಂಡರ್​ ಅನ್ನು ಸೊಂಟದ ಮೇಲೆ ಇಟ್ಟುಕೊಂಡು ಸುಲಭವಾಗಿ ಅಡುಗೆ ಮನೆ ಪ್ರವೇಶ ಮಾಡುತ್ತಿದ್ದಾಳೆ. ಮೂರನೇಯ ಫೋಟೋ, ಮಹಿಳೆ ಸಿಲಿಂಡರ್ ಸೊಂಟದ ಮೇಲೆ ಇಟ್ಟುಕೊಂಡು ಹೋಗ್ತಿರೋದನ್ನು ನೋಡಿ ದಂಗಾಗಿರುವ ದೃಶ್ಯ ಅದಾಗಿದೆ. ಈ ಫೋಟೋ ಶೇರ್ ಮಾಡಿರುವ ರಾಜಸ್ಥಾನ್ ರಾಯಲ್ಸ್​ ಆರ್​ಸಿಬಿಗೆ ಕಂಗ್ರಾಟ್ಸ್​ ಹೇಳಿ ಟ್ಯಾಗ್ ಮಾಡಿದೆ. ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದ ಈ ಪೋಸ್ಟ್​ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಿಲಿಂಡರ್ ತರಲಾಗದೇ ಒದ್ದಾಡಿದ ವ್ಯಕ್ತಿಯನ್ನು ರಾಜಸ್ಥಾನ್ ರಾಯಲ್ಸ್​, ಆರ್​ಸಿಬಿ ಪುರುಷರ ತಂಡಕ್ಕೆ ಹೋಲಿಸಿದೆ. ಸೊಂಟದ ಮೇಲೆ ಸಿಲಿಂಡರ್ ಇಟ್ಟುಕೊಂಡ ಬಂದ ಮಹಿಳೆಯನ್ನು ಸ್ಮೃತಿ ಮಂದಾನ ಟೀಂಗೆ ಹೋಲಿಸಿ ವ್ಯಂಗ್ಯವಾಡಿದೆ. ದೇಶದಲ್ಲಿ ಐಪಿಎಲ್ ಶುರುವಾಗಾಗಿಂತ ಕಪ್​​ಗಾಗಿ ಹೋರಾಡುತ್ತ ಬಂದಿದೆ. ಮೂರು ಬಾರಿ ಫೈನಲ್ ಪ್ರವೇಶ ಮಾಡಿದ್ದರೂ ಕಪ್ ಗೆದ್ದಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸ್ಮೃತಿ ಮಂದಾನ ಟೀಂಗೆ ವಿಶ್ ಮಾಡುತ್ತಲೇ, ಕೊಹ್ಲಿ ಪಡೆಯ ಕಾಲೆಳೆದ ರಾಜಸ್ಥಾನ್ ರಾಯಲ್ಸ್..!

https://newsfirstlive.com/wp-content/uploads/2024/03/RCB-11-1.jpg

Load More