/newsfirstlive-kannada/media/post_attachments/wp-content/uploads/2025/04/Markram.jpg)
2025ರ ಐಪಿಎಲ್​ ಟೂರ್ನಿಯೂ ಯಶಸ್ವಿಯಾಗಿ ಸಾಗುತ್ತಿದ್ದು ಎಲ್ಲ ಟೀಮ್​ಗಳು ಗೆಲುವನ್ನೇ ಗುರಿ ಮಾಡಿಕೊಂಡಿವೆ. ಆದರೆ ಪಂದ್ಯದಲ್ಲಿ ಕೆಲ ತಂಡಗಳು ಗೆಲ್ಲುವ ಹಂತಕ್ಕೆ ಹೋಗಿ ಮುಗ್ಗರಿಸಿ ಬೀಳುತ್ತಿವೆ. ಇದರಂತೆ ರಾಜಸ್ಥಾನ್ ರಾಯಲ್ಸ್​ ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ನಡುವೆ ನಡೆದ ಪಂದ್ಯ ಮ್ಯಾಚ್ ಫಿಕ್ಸಿಂಗ್ ಆಗಿತ್ತು ಎನ್ನುವ ಆರೋಪ ಕೇಳಿ ಬಂದಿದೆ.
ರಾಜಸ್ಥಾನ್​ ಕ್ರಿಕೆಟ್​ ಅಸೋಸಿಯೇಷನ್​ (ಆರ್​ಸಿಎ) ಸಂಚಾಲಕ ಜಯದೀಪ್​ ಬಿಹಾನಿ ಅವರು, ರಾಜಸ್ಥಾನ್ ರಾಯಲ್ಸ್​ ತಂಡದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಏಪ್ರಿಲ್​ 19 ರಂದು ಸಂಜೆ 7:30ಕ್ಕೆ ನಡೆದಿದ್ದ ಪಂದ್ಯದ ವೇಳೆ ಕೇವಲ 2 ರನ್​ಗಳಿಂದ ರಾಜಸ್ಥಾನ್ ತಂಡ, ಲಕ್ನೋ ವಿರುದ್ಧ ಹೀನಾಯವಾಗಿ ಸೋತಿತ್ತು. ಲಕ್ನೋ ನೀಡಿದ್ದ 180 ರನ್​ಗಳ ಟಾರ್ಗೆಟ್ ಅನ್ನು ಚೇಸ್ ಮಾಡುವಾಗ ಕೊನೆ ಓವರ್​ನಲ್ಲಿ 9 ರನ್​ಗಳು ಬೇಕಿದ್ದವು. ರಾಜಸ್ಥಾನ್​ ಕೈಯಲ್ಲಿ ಇನ್ನು 6 ವಿಕೆಟ್​ಗಳಿದ್ದವು. ಈ ವೇಳೆ ಕ್ರೀಸ್​ನಲ್ಲಿದ್ದ ಧೃವ್ ಜುರೆಲ್ ಹಾಗೂ ಶುಭಮ್ ದುಬೆ ಕೇವಲ 5 ರನ್​ಗಳಿಸಿದ್ದರಿಂದ ರಾಜಸ್ಥಾನ್ 2 ರನ್​ಗಳಿಂದ ಸೋಲೋಪ್ಪಿಕೊಂಡಿತು.
ಇದನ್ನೂ ಓದಿ: ಕಿಂಗ್ ಕೊಹ್ಲಿಯ ಬ್ಯಾಟ್ ಗಿಫ್ಟ್​ ಪಡೆದ ಆ ಯಂಗ್ ಪ್ಲೇಯರ್ ಯಾರು?
/newsfirstlive-kannada/media/post_attachments/wp-content/uploads/2025/04/SANJU_DRAVID.jpg)
ಈ ಕುರಿತು ಆರೋಪ ಮಾಡಿರುವ ಸಂಚಾಲಕ ಜಯದೀಪ್​ ಬಿಹಾನಿ ಅವರು, ಪಂದ್ಯದ ಫಲಿತಾಂಶವು ಪ್ರಶ್ನಾರ್ಹ ಆಗಿರಬಹುದು ಹಾಗೂ ಟ್ಯಾಂಪರಿಂಗ್ ಬಗ್ಗೆಯೂ ಸುಳಿವು ನೀಡುತ್ತದೆ. ಇದು ಮ್ಯಾಚ್ ಫಿಕ್ಸಿಂಗ್​ ಕುರಿತು ಅನುಮಾನವಿದೆ ಎಂದು ಹೇಳಿದ್ದರು. ಇದು ರಾಜಸ್ಥಾನ್​ ಕ್ರಿಕೆಟ್​ ಅಸೋಸಿಯೇಷನ್ ಹಾಗೂ ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿ ನಡುವೆ ಬಿರುಕು ಮೂಡಿಸಿದೆ. ಈ ಗಂಭೀರ ಆರೋಪವು ಐಪಿಎಲ್​ ಟೂರ್ನಿಯಲ್ಲಿ ಸದ್ಯಕ್ಕಂತೂ ಸಂಚಲನ ಮೂಡಿಸಿದೆ.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಯು, ಆರೋಪ ಮಾಡಿರುವ ಜಯದೀಪ್​ ಬಿಹಾನಿ ವಿರುದ್ಧ ದೂರು ನೀಡಿದೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಹಾಗೂ ಕ್ರೀಡಾ ಸಚಿವ ರಾಜವರ್ಧನ್​ ಸಿಂಗ್​ ರಾಥೋರ್​ ಅವರಿಗೆ ದೂರು ನೀಡಿದೆ. ದೂರು ನೀಡಿದ ಪತ್ರದಲ್ಲಿ ಆರ್‌ಸಿಎ ಸಂಚಾಲಕ ಜೈದೀಪ್ ಬಿಹಾನಿ ಅವರಿಂದ ಭವಿಷ್ಯದಲ್ಲಿ ಇಂತಹ ಹೇಳಿಕೆಗಳು ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬರೆಯಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us