/newsfirstlive-kannada/media/post_attachments/wp-content/uploads/2025/03/CSK_Nitish_Rana.jpg)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 9 ವಿಕೆಟ್ಗೆ 182 ರನ್ಗಳ ಟಾರ್ಗೆಟ್ ನೀಡಿದೆ. ನಿತೀಶ್ ರಾಣ ಅವರ ಭರ್ಜರಿ ಹಾಫ್ಸೆಂಚುರಿ ನೆರವಿನಿಂದ ರಾಜಸ್ಥಾನ್ ದೊಡ್ಡ ಮೊತ್ತದ ಗುರಿಯನ್ನು ಚೆನ್ನೈಗೆ ನೀಡಿದೆ.
ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 11ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡು ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಫೀಲ್ಡಿಂಗ್ ಆಯ್ಕೆ ಮಾಡಿದರು. ಅದರಂತೆ ಮೊದಲ ಬ್ಯಾಟಿಂಗ್ಗೆ ಆಗಮಿಸಿದ ರಾಜಸ್ಥಾನ ಪರ ಓಪನರ್ ಯಶಸ್ವಿ ಜೈಶ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಆರಂಭವೇನು ಪಡೆಯಲಿಲ್ಲ. ಜೈಸ್ವಾಲ್ ಕೇವಲ 4 ರನ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರೆ ಸಂಜು ಕೂಡ 20 ರನ್ಗೆ ಆಟ ಮುಗಿಸಿದರು.
ಇದನ್ನೂ ಓದಿ: ಹೈದ್ರಾಬಾದ್ಗೆ ಭಾರೀ ಮುಖಭಂಗ.. ಡುಪ್ಲೆಸಿಸ್ ಅಬ್ಬರದ ಅರ್ಧಶತಕ, ಡೆಲ್ಲಿ ಕ್ಯಾಪಿಟಲ್ಸ್ಗೆ ಜಯ
ಜೈಶ್ವಾಲ್ ಔಟ್ ಆದ ಬಳಿಕ ಕ್ರೀಸ್ಗೆ ಆಗಮಿಸಿದ್ದ ನಿತೀಶ್ ರಾಣ, ಚೆನ್ನೈ ಬೌಲರ್ಗಳನ್ನ ಬೆಂಡೆತ್ತಿದರು. ರಿಯಾನ್ ಪರಾಗ್ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿದ ನಿತೀಶ್ ರಾಣ, ಕೇವಲ 21 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಇದರಲ್ಲಿ 7 ಬೌಂಡರಿ, 3 ಅತ್ಯುತ್ತಮವಾದ ಸಿಕ್ಸರ್ಗಳು ಸೇರಿದ್ದವು. ಅರ್ಧಶತಕದ ಬಳಿಕ ಬ್ಯಾಟಿಂಗ್ನಲ್ಲಿ ಆರ್ಭಟಿಸಿದ ರಾಣ, ಕೇವಲ 36 ಎಸೆತಗಳಲ್ಲಿ 10 ಫೋರ್, 5 ಬಿಗ್ ಸಿಕ್ಸರ್ನಿಂದ 81 ರನ್ಗಳನ್ನ ಗಳಿಸಿದರು. ಈ ವೇಳೆ ಧೋನಿ ಅವರ ಚಮತ್ಕಾರದಲ್ಲಿ ಸ್ಟಂಪ್ಔಟ್ ಆದರು.
ಕ್ಯಾಪ್ಟನ್ ರಿಯಾನ್ ಪರಾಗ್ 37, ಹೆಟ್ಮರ್ 19 ರನ್ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 182 ರನ್ಗಳ ಗುರಿಯನ್ನು ಚೆನ್ನೈಗೆ ನೀಡಿದೆ. ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ರಾಜಸ್ಥಾನ್ ಎರಡರಲ್ಲೂ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯ ಆರ್ಆರ್ಗೆ ತುಂಬಾ ಮುಖ್ಯವಾಗಿದೆ. ಚೆನ್ನೈ ಕೂಡ ಒಂದು ಪಂದ್ಯ ಮಾತ್ರ ಗೆದ್ದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ