RCB ಮುಂದೆ ಸಾಧಾರಣ ಮೊತ್ತದ ಟಾರ್ಗೆಟ್​.. ಚೇಸ್​ ಮಾಡಿ ಗೆಲುವು ಪಡೆಯುತ್ತಾ ರಜತ್ ಟೀಮ್?

author-image
Bheemappa
Updated On
RCB ಮುಂದೆ ಸಾಧಾರಣ ಮೊತ್ತದ ಟಾರ್ಗೆಟ್​.. ಚೇಸ್​ ಮಾಡಿ ಗೆಲುವು ಪಡೆಯುತ್ತಾ ರಜತ್ ಟೀಮ್?
Advertisment
  • ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ RR​ ಬ್ಯಾಟಿಂಗ್ ಹೇಗಿತ್ತು?
  • ನಾಲ್ಕು ವಿಕೆಟ್​ಗಳನ್ನ ಉರುಳಿಸಿದ ಬೆಂಗಳೂರು ತಂಡದ ಬೌಲರ್ಸ್
  • ಸೋಲನ್ನು ಮರೆಯಲು ರಾಜಸ್ಥಾನ್ ವಿರುದ್ಧ ಗೆಲುವು ಪಡೆಯುತ್ತಾ.?

ತಮ್ಮ ನೆಲದಲ್ಲಿಯೇ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಸಾಧಾರಣ ಮೊತ್ತದ ಗುರಿ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 174 ರನ್​ಗಳನ್ನು ಚೇಸ್ ಮಾಡಬೇಕಿದೆ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರು ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ರಾಜಸ್ಥಾನ್​ ರಾಯಲ್ಸ್​ ಆಟಗಾರರನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಆರ್​ಆರ್​ ಪರ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಒಳ್ಳೆಯ ಬ್ಯಾಟಿಂಗ್ ಮಾಡಲಿಲ್ಲ.​ ಕೇವಲ 15 ರನ್​ ಗಳಿಸಿದ್ದಾಗ ಸಂಜು ಸ್ಯಾಮ್ಸನ್ ಕ್ಯಾಚ್​ಗೆ ಬಲಿಯಾದರು.

ಇದನ್ನೂ ಓದಿ:4, 4, 4, 4, 4, 4, 4; RCBಗೆ ಟಕ್ಕರ್ ಕೊಟ್ಟ ಯಂಗ್ ಬ್ಯಾಟ್ಸ್​ಮನ್​.. ಜೈಸ್ವಾಲ್ ಭರ್ಜರಿ ಬ್ಯಾಟಿಂಗ್​

publive-image

ಬಳಿಕ ಕ್ರೀಸ್​ಗೆ ಬ್ಯಾಟ್​ ಹಿಡಿದು ಬಂದ ರಿಯಾನ್ ಪರಾಗ್ ಯಶಸ್ವಿ ಜೈಸ್ವಾಲ್​ಗೆ ಜೊತೆಯಾದರು. ಈ ಪಂದ್ಯದಲ್ಲಿ ಅಮೋಘವಾದ ಅರ್ಧಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​ ಆರ್​​ಸಿಬಿ ಬೌಲರ್​ಗಳಿಗೆ ಬೆವರಿಳಿಸಿದರು. ಕೇವಲ 35 ಎಸೆತದಲ್ಲಿ 1 ಸಿಕ್ಸರ್​ ಹಾಗೂ 7 ಭರ್ಜರಿ ಬೌಂಡರಿಗಳಿಂದ ಹಾಫ್​ಸೆಂಚುರಿ ಸಿಡಿಸಿದರು. ಒಟ್ಟು 47 ಎಸೆತ ಎದುರಿಸಿದ ಜೈಸ್ವಾಲ್​ 10 ಫೋರ್, 2 ಸಿಕ್ಸರ್​ನಿಂದ 75 ರನ್​ಗೆ ಜೋಶ್​ ಹ್ಯಾಜೆಲ್ವುಡ್​ ಬೌಲಿಂಗ್​ನಲ್ಲಿ ಎನ್​ಬಿಗೆ ವಿಕೆಟ್​ ಒಪ್ಪಿಸಿದರು.

ಆರ್​ಸಿಬಿ ಜೊತೆ ಹೆಟ್ಮರ್​ (9) ವಿಫಲ ಬ್ಯಾಟಿಂಗ್​ ಪ್ರದರ್ಶನ ಮಾಡಿದರು. ಧೃವ್ ಜುರೆಲ್ ಕೊಂಚ ತಂಡಕ್ಕಾಗಿ ಹೋರಾಟ ಮಾಡಿ ರನ್​ಗಳ ಕೊಳ್ಳೆ ಹೊಡೆದರು. 25 ಎಸೆತದಲ್ಲಿ 35 ರನ್​ಗಳಿಂದ ಅಜೇಯರಾಗಿ ಉಳಿದರು. ಇದರಿಂದ ರಾಜಸ್ಥಾನ ರಾಯಲ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 174 ರನ್​ಗಳ ಗುರಿಯನ್ನು ಆರ್​ಸಿಬಿಗೆ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment