14 ವರ್ಷ 32 ದಿನದ ಪೋರ.. ವೈಭವ್ ಸೂರ್ಯವಂಶಿ ಸ್ಟ್ರೈಕ್​ರೇಟ್​ ಎಷ್ಟಿತ್ತು..?

author-image
Ganesh
Updated On
6 ವರ್ಷದ ಪುಟ್ಟ ಪೋರ; ಅಂದು IPL ನೋಡಲು ಬಂದಿದ್ದ ವೈಭವ್ ಸೂರ್ಯವಂಶಿ ಫೋಟೋ ವೈರಲ್‌!
Advertisment
  • 14 ವರ್ಷದ ಬಾಲಕನ ಆರ್ಭಟಕ್ಕೆ ಗುಜರಾತ್​ ತತ್ತರ
  • ಜೈಪುರದಲ್ಲಿ ಲೆಜೆಂಡರಿ ಬೌಲರ್​ಗಳ ಬೆಂಡೆತ್ತಿದ ಬಾಲಕ
  • 7 ಬೌಂಡರಿ, 11 ಸಿಕ್ಸರ್​​ ಯುವ ಆಟಗಾರನ ಘರ್ಜನೆ

ವಯಸ್ಸು ಕೇವಲ 14 ವರ್ಷ, 32 ದಿನ ಮಾತ್ರ. ಮಾಡಿರೋ ಸಾಧನೆ ಜಗತ್ತೆ ತಿರುಗಿನೋಡುವಂತದ್ದು. ಜಗತ್ತಿನ ಯಾವೊಬ್ಬ ಕೂಡ ಇಂತಾ ಒಂದು ಇನ್ನಿಂಗ್ಸ್​ ಅನ್ನ ಕನಿಷ್ಟ ಕನಸಿನಲ್ಲೂ ಉಹಿಸಿರೋಕೆ ಸಾದ್ಯವಿಲ್ಲ. ಪಿಂಕ್​ ಸಿಟಿ ಜೈಪುರದಲ್ಲಿ ದಿಗ್ಗಜ ಬೌಲರ್​​ಗಳನ್ನ ಬೆಂಡೆತ್ತಿ ಸಿಕ್ಸರ್​​ ಸುರಿಮಳೆ ಸುರಿಸಿದ ಈ ಬಾಲಕ ಐಪಿಎಲ್​ನಲ್ಲಿ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟ.

ಜೈಪುರದಲ್ಲಿ ಮೊದಲು ಬ್ಯಾಟಿಂಗ್​ಗೆ ಬಂದ ಗುಜರಾತ್​​ಗೆ ಶುಭ್​ಮನ್​ ಗಿಲ್​, ಸಾಯಿ ಸುದರ್ಶನ್​ ಸಾಲಿಡ್​​ ಸ್ಟಾರ್ಟ್​ ನೀಡಿದ್ರು. ರಾಜಸ್ಥಾನ್​ ಬೌಲರ್​​ಗಳಿಗೆ ಸಖತ್​ ಕಾಟ ಕೊಟ್ಟ ಈ ಜೋಡಿ ಬೌಂಡರಿ, ಸಿಕ್ಸರ್​ಗಳಲ್ಲೇ ರನ್​ ಡೀಲ್​ ಮಾಡಿದ್ರು. 62 ಎಸೆತಗಳಲ್ಲಿ 93 ರನ್​ಗಳ ಜೊತೆಯಾಟವಾಡಿದ್ರು.

ಇದನ್ನೂ ಓದಿ: RCB ಓಪನರ್​ ಫಿಲ್​ ಸಾಲ್ಟ್​ಗೆ ಏನಾಗಿದೆ ಗೊತ್ತಾ.. ಚೆನ್ನೈ ವಿರುದ್ಧ ವಿಸ್ಫೋಟಕ ಬ್ಯಾಟರ್​ ಆಡ್ತಾರಾ?

publive-image

4 ಬೌಂಡರಿ, 1 ಸಿಕ್ಸರ್​ ಸಿಡಿಸಿದ ಸಾಯಿ ಸುದರ್ಶನ್​ 39 ರನ್​ಗಳಿಸಿ ಔಟಾದ್ರು. ಪಿಂಕ್​ ಸಿಟಿಯಲ್ಲಿ ಫೈನ್​ ಫಾರ್ನ್​ ಮುಂದುವರೆಸಿದ ಶುಭ್​ಮನ್​ ಗಿಲ್​ ಶೈನ್​ ಆದ್ರು. 5 ಬೌಂಡರಿ, 4 ಭರ್ಜರಿ ಸಿಡಿಸಿದ ಪ್ರಿನ್ಸ್​ ಶುಭ್​ಮನ್​ 84 ರನ್​​ ಚಚ್ಚಿದ್ರು. ಶತಕದಂಚಿನಲ್ಲಿ ಶುಭ್​ಮನ್​ ಎಡವಿದ್ರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಜೋಸ್​ ಬಟ್ಲರ್​​ ಬೊಂಬಾಟ್​ ಆಟವಾಡಿದ್ರು. 192ರ ಸ್ಟ್ರೈಕ್​​ರೇಟ್​​ನಲ್ಲಿ ಅಬ್ಬರಿಸಿದ ಬಟ್ಲರ್​​ 26 ಎಸೆತಗಳಲ್ಲಿ ಅಜೇಯ 50 ರನ್​ಗಳಿಸಿದ್ರು. ಅಂತಿಮ ಹಂತದಲ್ಲಿ ವಾಷಿಂಗ್ಟನ್​ ಸುಂದರ್​​, ರಾಹುಲ್​ ತೆವಾಟಿವಾ ಅಲ್ಪ ಕಾಣಿಕೆ ನೀಡಿದ್ರು. ಅಂತಿಮವಾಗಿ 20 ಓವರ್​​ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಗುಜರಾತ್​​ 209 ರನ್​ಗಳ ಬಿಗ್​ ಟಾರ್ಗೆಟ್​ ಸೆಟ್​ ಮಾಡ್ತು.

ಹೋಮ್​​ಗ್ರೌಂಡ್​​ನಲ್ಲಿ ಬಿಗ್​ ಟಾರ್ಗೆಟ್​​ ಬೆನ್ನತ್ತಲು ಬಂದ ರಾಜಸ್ಥಾನ್​ ಅಬ್ಬರದ ಆರಂಭ ಪಡೆದುಕೊಳ್ತು. ವೈಭವ್​ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್​ ಬೌಲರ್​ಗಳ ಬೆಂಡೆತ್ತಿದ್ರು. ಸೀನಿಯರ್​ ಬೌಲರ್​​ಗಳನ್ನ ಮನಬಂದಂತೆ ದಂಡಿಸಿದ ವೈಭವ್​ ಸೂರ್ಯವಂಶಿ ವಿಜೃಂಭಿಸಿದ್ರು. 14 ವರ್ಷದ ವೈಭವ್​ ಆರ್ಭಟ ಯಾವ ಮಟ್ಟಿಗಿತ್ತು ಅಂದ್ರೆ 37 ವರ್ಷದ ಅನುಭವಿ ಇಶಾಂತ್​ ಶರ್ಮಾ ಕೆರಳಿ ನಿಂತ ಈ ಬಾಲಕನ ಮುಂದೆ ಸರೆಂಡರ್​​ ಆಗಿ ಬಿಟ್ರು. ಇಶಾಂತ್​ ಎಸೆದ 4ನೇ ಓವರ್​​ನಲ್ಲಿ ವೈಭವ್​​ 28 ರನ್​ ಚಚ್ಚಿದ್ರು. ಕೇವಲ 17 ಎಸೆತಗಳಲ್ಲೇ ಹಾಫ್​ ಸೆಂಚುರಿ ಸಿಡಿಸಿದ್ರು.

ಇದನ್ನೂ  ಓದಿ: 6, 6, 6, 6; ಶುಭ್​ಮನ್ ಗಿಲ್, ಬಟ್ಲರ್ ಭರ್ಜರಿ ಬ್ಯಾಟಿಂಗ್​.. ರಾಜಸ್ಥಾನ್​ಗೆ ಬಿಗ್​​ ಟಾರ್ಗೆಟ್​

publive-image

ಇಷ್ಟಕ್ಕೆ ವೈಭವ್​ ಅಬ್ಬರ ನಿಲ್ಲಲಿಲ್ಲ.. ಕರಿಮ್​​ ಜನ್ನತ್​​ ಎಸೆದ 10ನೇ ಓವರ್​​ನಲ್ಲಿ 3 ಸಿಕ್ಸರ್​​, 3 ಬೌಂಡರಿ ಚಚ್ಚಿ 30 ರನ್​ ಕೊಳ್ಳೆ ಹೊಡೆದ್ರು. ರಶೀದ್​ ಖಾನ್​ ಎಸೆದ 11ನೇ ಓವರ್​ನ 2 ಎಸೆತವನ್ನ ಸಿಕ್ಸರ್​​ ಸಿಡಿಸಿ ಇತಿಹಾಸ ನಿರ್ಮಿಸಿದ್ರು. ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಐಪಿಎಲ್​ನಲ್ಲಿ ವೇಗದ ಶತಕ ಸಿಡಿಸಿದ ಭಾರತದ ಬ್ಯಾಟರ್​​ ಹೆಗ್ಗಳಿಕೆಗೆ ಪಾತ್ರರಾದ್ರು. 11 ಸಿಕ್ಸರ್​​, 7 ಬೌಂಡರಿ ಸಿಡಿಸಿದ ವೈಭವ್​​ ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್​ಗಳಿಸಿ ಔಟಾದ್ರು. ನಿನ್ನೆಯ ದಿನ ವೈಭವ್, 265.79 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ವಿಜೃಂಭಿಸಿದ ವೈಭವ್​​ ಹೋಮ್​​ಕ್ರೌಡ್​​ಗೆ ಸಖತ್​ ಟ್ರೀಟ್​​ ನೀಡಿದ್ರು. ವೈಭವ್​​ ಆಟಕ್ಕೆ ಜಂಟಲ್​ಮನ್​​ ಗೇಮ್​​ನ ರಿಯಲ್​ ಜಂಟಲ್​ಮನ್​ ದ್ರಾವಿಡ್​ ಕೂಡ ಸಲಾಂ ಎಂದ್ರು. ಗಾಯಗೊಂಡು ವೀಲ್​ ಚೇರ್​ನಲ್ಲಿ ಕುಳಿತಿದ್ದ ದ್ರಾವಿಡ್​ ಎದ್ದು ನಿಂತು ಅಭಿನಂದಿಸಿದ್ರು.

ನಿತೀಶ್​ ರಾಣಾ ಫ್ಲಾಪ್​ ಶೋ ನೀಡಿದ್ರೆ, ಯಶಸ್ವಿ ಜೈಸ್ವಾಲ್​ ಅದ್ಭುತ ಇನ್ನಿಂಗ್ಸ್​ ಕಟ್ಟಿದ್ರು. 9 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಜೈಸ್ವಾಲ್​ ಅಜೇಯ 70 ರನ್​ ಸಿಡಿಸಿದ್ರು. 15 ಎಸೆತಕ್ಕೆ 32 ರನ್​ಗಳಿಸಿದ ರಿಯಾನ್​ ಪರಾಗ್ ಫಿನಿಶಿಂಗ್​ ಟಚ್ ನೀಡಿದ್ರು. 15.5 ಓವರ್​​ಗಳಲ್ಲಿ ಕೇವಲ 2 ವಿಕೆಟ್​​ ಕಳೆದುಕೊಂಡು ರಾಜಸ್ಥಾನ ಗುರಿ ತಲುಪಿತು. 8 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಫ್​ ಕನಸನ್ನ ಜೀವಂತವಾಗಿರಿಕೊಳ್ತು.

ಇದನ್ನೂ ಓದಿ: 35 ಬಾಲ್​​ಗೆ ಸೆಂಚುರಿ ಹೊಡೆದ ವೈಭವ್ ಯಾರು? 14 ವರ್ಷದ ಈ ಪೋರನಿಗಾಗಿ ದ್ರಾವಿಡ್ ಪಟ್ಟು ಹಿಡಿದಿದ್ದರು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment