ಸಂಜು ಸ್ಯಾಮ್ಸನ್​ಗೆ ಮಾಸ್ಟರ್​ ಸ್ಟ್ರೋಕ್​​; ರಾಜಸ್ಥಾನ್​​ ರಾಯಲ್ಸ್​ ಕ್ಯಾಪ್ಟನ್ಸಿಯಿಂದ ಔಟ್​​; ಏನಾಯ್ತು?

author-image
Ganesh Nachikethu
ರೋಹಿತ್​ ಬಳಿಕ ಸಂಜು ಸ್ಯಾಮ್ಸನ್​ ಟೀಮ್​ ಇಂಡಿಯಾದ ಕ್ಯಾಪ್ಟನ್.. ಏನಿದು ಟ್ವಿಸ್ಟ್​​?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ​​
  • ಸಂಜು ಸ್ಯಾಮ್ಸನ್​​ಗೆ ಬಿಗ್​ ಶಾಕ್​ ಕೊಟ್ಟ ರಾಜಸ್ಥಾನ್​ ರಾಯಲ್ಸ್​​ ಟೀಮ್​​​
  • ಕ್ಯಾಪ್ಟನ್ಸಿಯಿಂದಲೇ ಸಂಜು ಸ್ಯಾಮ್ಸನ್​ಗೆ ಕೊಕ್​​ ನೀಡಿದ್ಯಾ ರಾಜಸ್ಥಾನ್​​?

ಇತ್ತೀಚೆಗೆ ಹೈದರಾಬಾದ್​ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಭಾರತ-ಬಾಂಗ್ಲಾದೇಶ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್​ಗಳ ಹೊಳೆಯನ್ನೇ ಹರಿಸಿದ ಸಂಜು ಸ್ಯಾಮ್ಸನ್​ 40 ಎಸೆತಗಳಲ್ಲಿ ಶತಕ ಸಿಡಿಸಿದ್ರು.

ಇನ್ನು, 236.17 ಸ್ಟ್ರೈಕ್​ ರೇಟ್​ನೊಂದಿಗೆ ರನ್​ ಕಲೆ ಹಾಕಿದ ಸಂಜು ಸ್ಯಾಮ್ಸನ್​ 47 ಎಸೆತಗಳಲ್ಲಿ 111 ರನ್​ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 11 ಬೌಂಡರಿ, 8 ಸಿಕ್ಸರ್​ ಸಿಡಿಸಿದರು. ಒಂದು ಓವರ್​ನಲ್ಲಿ ಸತತ 4 ಬೌಂಡರಿ, ಇನ್ನೊಂದು ಓವರ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿದ್ದು ಇನ್ನಿಂಗ್ಸ್​ನ ಮತ್ತೊಂದು ಹೈಲೈಟ್​. ಇದರ ಮಧ್ಯೆ ಸ್ಯಾಮ್ಸನ್​ಗೆ ಒಂದು ಸುದ್ದಿ ಹೊರಬಿದ್ದಿದೆ.

publive-image

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಸೀಸನ್​ಗೆ ಇನ್ನೇನು ಕೇವಲ 5 ತಿಂಗಳು ಬಾಕಿ ಇದೆ. ವರ್ಷದ ಕೊನೆಗೆ ಐಪಿಎಲ್​​ ಮೆಗಾ ಆಕ್ಷನ್​ ನಡೆಯಲಿದೆ. ಈಗಾಗಲೇ ಬಿಸಿಸಿಐ ಎಲ್ಲಾ ಐಪಿಎಲ್​​ ತಂಡಗಳಿಗೂ 6 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಹೊತ್ತಲ್ಲೇ ಕ್ಯಾಪ್ಟನ್​​ ಸಂಜು ಸ್ಯಾಮ್ಸನ್​​ಗೆ ರಾಜಸ್ಥಾನ್​ ರಾಯಲ್ಸ್​​​ ಬಿಗ್​ ಶಾಕ್​ ನೀಡಿದೆ.

ರಾಜಸ್ಥಾನ್​ ರಾಯಲ್ಸ್​​ ಕ್ಯಾಪ್ಟನ್​ ಆಗಿ ಸಂಜು ಅದ್ಭುತ ಪ್ರದರ್ಶನ

ಸಂಜು ಸ್ಯಾಮ್ಸನ್​ ಅವರನ್ನು ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಆಗಿ 2021ರಲ್ಲಿ ನೇಮಕ ಮಾಡಲಾಯ್ತು. ಸಂಜು ಸ್ಯಾಮ್ಸನ್​​ ನಾಯಕತ್ವದಲ್ಲಿ ರಾಜಸ್ಥಾನ್​​ 2 ಬಾರಿ ಸೆಮಿ ಫೈನಲ್ಸ್​ ಮತ್ತು 1 ಬಾರಿ ಫೈನಲ್​ ತಲುಪಿದೆ. ಕಳೆದ ಸೀಸನ್​ನಲ್ಲೂ ಸಂಜು ರಾಜಸ್ಥಾನ್​​ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ್ರು. ಆದ್ರೂ ಸಂಜು ಸ್ಯಾಮ್ಸನ್​​ಗೆ ತಂಡದಿಂದ ಕೊಕ್​ ನೀಡಲು ರಾಜಸ್ಥಾನ್​ ಮುಂದಾಗಿದೆ.

ಸಂಜು ಬದಲಿಗೆ ಜೋಸ್​ ಬಟ್ಲರ್​ ಕ್ಯಾಪ್ಟನ್​​

ರಾಜಸ್ಥಾನ್​​ ರಾಯಲ್ಸ್​ ತಂಡದ ನೂತನ ಕ್ಯಾಪ್ಟನ್​ ಆಗಿ ಜೋಸ್​ ಬಟ್ಲರ್​ ನೇಮಕಗೊಳ್ಳಲಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್​​ಗೆ ಕ್ಯಾಪ್ಟನ್ಸಿಯಿಂದ ಕೊಕ್​ ನೀಡಲಾಗುತ್ತಿದೆ. ಇವರು ಮುಂದಿನ ಸೀಸನ್​ಗೆ ಬೇರೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment