/newsfirstlive-kannada/media/post_attachments/wp-content/uploads/2025/03/sanju_samson.jpg)
ಜೈಪುರದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ತೀವ್ರ ರೋಚಕತೆಗೆ ತಿರುಗಿದೆ. ಆರಂಭದಲ್ಲಿ ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಕಿಂಗ್ಸ್, 219 ರನ್ಗಳ ಬೃಹತ್ ಮೊತ್ತವನ್ನು ಕಲೆ ಹಾಕಿದೆ.
ಪಂಜಾಬ್ ಪರ ನೆಹಾಲ್ ವಧೇರಾ 37 ಬಾಲ್ನಲ್ಲಿ 70 ರನ್ಗಳಿಸಿ ಭರ್ಜರಿ ಕಾಣಿಕೆ ನೀಡಿದರು. ಐದು ಸಿಕ್ಸರ್ ಹಾಗೂ ಐದು ಬೌಂಡರಿ ಬಾರಿಸಿ, ವೀಕ್ಷಕರನ್ನು ರಂಜಿಸಿದರು. ಕ್ಯಾಪ್ಟನ್ ಅಯ್ಯರ್, ವಧೇರಾಗೆ ಉತ್ತಮ ಸಾಥಿಯಾದರು. 25 ಬಾಲ್ನಲ್ಲಿ 30 ರನ್ಗಳ ಕಾಣಿಕೆ ನೀಡಿದರು. ನಂತರ ಬಂದ ಶಶಾಂಕ್ ಸಿಂಗ್ ಮತ್ತು ಓಮರ್ಜಾಯ್ ಸಖತ್ ಆಟವಾಡಿದರು. ಶಶಾಂಕ್ 30 ಬಾಲ್ನಲ್ಲಿ 59 ರನ್ಗಳಿಸಿದ್ರೆ, ಒಮರ್ಜಾಯ್ 9 ಬಾಲ್ನಲ್ಲಿ 21 ರನ್ಗಳಿಸಿದರು. ಆ ಮೂಲಕ ಪಂಜಾಬ್ ಕಿಂಗ್ಸ್, 20 ಓವರ್ನಲ್ಲಿ ಐದು ವಿಕೆಟ್ ಕಳೆದುಕೊಂಡು 219 ರನ್ಗಳಿಸಿದೆ.
ಇದನ್ನೂ ಓದಿ: ನಿನ್ನೆಯ ಪಂದ್ಯ ರದ್ದು.. ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಆರ್ಸಿಬಿ..
ರಾಜಸ್ಥಾನ್ ರಾಯಲ್ಸ್ ಗೆಲ್ಲಲು 220 ರನ್ಗಳ ಅಗತ್ಯ ಇದೆ. ಪಂಜಾಬ್ ಕಿಂಗ್ಸ್ಗೆ ಉತ್ತರವಾಗಿ ರಾಜಸ್ಥಾನ್ ರಾಯಲ್ಸ್ ಅದ್ಭುತವಾಗಿ ಬ್ಯಾಟಿಂಗ್ ಮಾಡ್ತಿದೆ. ಕೇವಲ ಮೂರು ಓವರ್ ಮುಕ್ತಾಯದ ವೇಳೆಗೆ 50 ರನ್ಗಳ ಗಡಿ ದಾಟಿದೆ. ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡ್ತಿದ್ದಾರೆ.
ವಿಶೇಷ ಅಂದ್ರೆ ರಾಜಸ್ಥಾನ್ ರಾಯಲ್ಸ್ಗೆ ಸಂಜು ಸ್ಯಾಮ್ಸನ್ ಕ್ಯಾಪ್ಟನ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಯುತ್ತಿದ್ದ ಸಂಜು, ವೈಭವ್ ಸೂರ್ಯವಂಶಿಗಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಈ ಮೊದಲು ಸಂಜು ಅವರ ಅನುಪಸ್ಥಿತಿಯಲ್ಲಿ ವೈಭವ್ ಸ್ಥಾನ ಪಡೆದಿದ್ದರು. ಇದೀಗ ವೈಭವ್ಗಾಗಿ ಸಂಜು ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿದ್ದಾರೆ.
ಇದನ್ನೂ ಓದಿ: ಯೂಟ್ಯೂಬರ್ ಆಗುವ ಮೊದಲು ಜ್ಯೋತಿ ಮಲ್ಹೋತ್ರ ಹೇಗಿದ್ದಳು..? ಈಕೆ ಭಲೇ ಕಿಡಿಗೇಡಿ ಲೇಡಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್