/newsfirstlive-kannada/media/post_attachments/wp-content/uploads/2025/05/Dravid-1.jpg)
ಐಪಿಎಲ್​ 18ನೇ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್​ ಗೆಲುವಿನೊಂದಿಗೆ ವಿದಾಯ ಹೇಳಿದೆ. ಕ್ರಿಕೆಟ್ ಜಗತ್ತಿಗೆ ವೈಭವ್ ಸೂರ್ಯವಂಶಿ ಅವರಂಥ ಅಮೂಲ್ಯ ಕೊಡುಗೆ, ಸವಿಸವಿ ನೆನಪಿನೊಂದಿಗೆ ಹಾಗೂ ಹೊಸ ಹೊಸ ಅನುಭವಗಳೊಂದಿಗೆ ಗುಡ್​ಬೈ ಹೇಳಿದೆ.
ಇಂದು ಚೆನ್ನೈ ಸೂಪರ್ ಕಿಂಗ್ಸ್​​ ತಂಡವನ್ನು ರಾಜಸ್ಥಾನ್ ರಾಯಲ್ಸ್ ಎದುರಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಸಿಎಸ್​​ಕೆ, 8 ವಿಕೆಟ್ ಕಳೆದುಕೊಂಡು 187 ರನ್​ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್ಸ್, 17.1 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಕಾಣ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ಆರ್​ಸಿಬಿ ಮುಂದಿನ ಮ್ಯಾಚ್​ ರದ್ದು.. ಮತ್ತೆ ಎಲ್ಲಿ ನಡೆಯುತ್ತೆ..?
/newsfirstlive-kannada/media/post_attachments/wp-content/uploads/2025/03/sanju_samson.jpg)
ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 36, ವೈಭವ್ ಸೂರ್ಯವಂಶಿ 57, ನಾಯಕ ಸಂಜು ಸ್ಯಾಮ್ಸನ್ 41 ರನ್​ಗಳಿಸಿದರು. ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್​, ಕೇವಲ 4 ಪಂದ್ಯ ಮಾತ್ರ ಗೆದ್ದುಕೊಂಡಿದೆ. 10 ಪಂದ್ಯಗಳಲ್ಲಿ ಸೋತಿರುವ ಆರ್​ಆರ್​, ಕೇವಲ 8 ಅಂಕದೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ಸಾಕಷ್ಟು ಪಂದ್ಯಗಳನ್ನ ಮುನ್ನಡೆಸಿದ ಅನುಭವ ಪಡೆದರು. ವಿಶೇಷವಾಗಿ ರಾಹುಲ್ ದ್ರಾವಿಡ್​ ಅವರು ವ್ಹೀಲ್​ ಚೇರ್​ನಲ್ಲಿ ಬಂದು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿರೋದು, ಇಡೀ ಕ್ರಿಕೆಟ್ ಲೋಕದ ಹೃದಯ ಗೆದ್ದಿದೆ.
ಇದನ್ನೂ ಓದಿ: ನಟ ದರ್ಶನ್ ಟೀ ಶರ್ಟ್ ಸಿಕ್ಕಾಪಟ್ಟೆ ದುಬಾರಿ; ಅದರ ರೇಟ್ ಎಷ್ಟು? ಪವಿತ್ರಾ ಗೌಡ ಕೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us