newsfirstkannada.com

ಬ್ಯಾಟ್​ನಿಂದಲೇ ಟೀಕೆಗಳಿಗೆ ಉತ್ತರಿಸಿದ ಕಿಂಗ್ ಕೊಹ್ಲಿ.. ವಿರಾಟ್​ ಸೆಂಚುರಿ ಬಾರಿಸದಿದ್ರೆ RCB ಗತಿ ಏನಾಗುತ್ತಿತ್ತು?

Share :

Published April 7, 2024 at 1:18pm

    ಸಾಲಿಡ್ ಓಪನಿಂಗ್ ನೀಡಿದ್ದ ಫಾಫ್ ಡುಪ್ಲೆಸ್ಸಿ ಹಾಗೂ ವಿರಾಟ್ ಕೊಹ್ಲಿ

    4 ಶತಕ ಸಿಡಿಸಿರುವ ಕೆ.ಎಲ್.ರಾಹುಲ್ 3ನೇ ಸ್ಥಾನ, ಫಸ್ಟ್ ಯಾರಿದ್ದಾರೆ?

    ಕೊಹ್ಲಿ ಅಬ್ಬರಿಸದಿದ್ರೆ ಆರ್​​​ಸಿಬಿ ಇನ್ನಷ್ಟು ಹೀನಾಯವಾಗಿ ಸೋಲುತ್ತಿತ್ತಾ?

ಜೈಪುರದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಲ್ಲ. ರಾಜಸ್ಥಾನ್ ರಾಯಲ್ಸ್​ನಂಥ ಬಲಿಷ್ಠ ಬೌಲಿಂಗ್​ ಮುಂದೆ ಕೊಹ್ಲಿ ಆಟ ನಡೆಯಲ್ಲ ಅನ್ನೋ ಮಾತುಗಳಿದ್ವು. ನಿನ್ನೆ ಆ ಟೀಕೆಗಳಿಗೆ ಕೊಹ್ಲಿ ಬ್ಯಾಟ್​ನಿಂದಲೇ ಉತ್ತರ ಕೊಟ್ರು. ಆರ್​ಆರ್​ ಬೌಲಿಂಗ್ ಲೈನ್​​ ಅಪ್​​​ ಅನ್ನೇ ಧೂಳಿಪಟ ಮಾಡಿದ್ರು. ಸವಾಯಿ ಮಾನ್ಸಿಂಗ್​ ಸ್ಟೇಡಿಯಂನಲ್ಲಿ ವಿರಾಟ್ ವೀರಾವೇಶ ಹೇಗಿತ್ತು.?

ಟಫ್ ಕಂಡೀಷನ್ಸ್​.. ಕ್ವಾಲಿಟಿ ಸ್ಪಿನ್ನರ್​ಗಳು.. ಡೆಡ್ಲಿ ಪೇಸರ್​ಗಳು.. ಆರ್​ಸಿಬಿ ಮುಂದೆ ಇದ್ದಿದ್ದು ಬಿಗ್ ಟಾರ್ಗೆಟ್​ ಸೆಟ್ ಮಾಡಬೇಕಾದ ಕಠಿಣ ಸವಾಲು​. ಈ ಟಫ್​ ಚಾಲೆಂಜ್​ನ ಈಸಿಯಾಗಿ ಡೀಲ್​ ಮಾಡಿದ್ದು ಕಿಂಗ್ ಕೊಹ್ಲಿ.

ಇದನ್ನೂ ಓದಿ: T20 ವಿಶ್ವಕಪ್​ ಗೆಲ್ಲಲು ಪಾಕ್​ ಪ್ಲೇಯರ್ಸ್​ ಕಠಿಣ ಫಿಟ್ನೆಸ್​ ಸೂತ್ರ.. ಆರ್ಮಿಯಂತೆ ಬೆಟ್ಟದಲ್ಲಿ ಕಲ್ಲು ಹೊತ್ತು ಟ್ರೈನಿಂಗ್

ಜೈಫುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ವಿರಾಟ್​ ಆಟ ನಡೆಯಲ್ಲ ಅಂತಾ ಪಂದ್ಯಕ್ಕೂ ಮುನ್ನ ಹೇಳಲಾಗ್ತಿತ್ತು. ಅಂಕಿಅಂಶಗಳ ಲೆಕ್ಕ ನೀಡಿ ಟೀಕೆ ಮಾಡಲಾಗಿತ್ತು. ಇದಕ್ಕೆಲ್ಲ ವಿರಾಟ್, ಬ್ಯಾಟ್​​ನಿಂದ ಉತ್ತರಿಸಿದ್ರು.

ಫಾಫ್ ಜೊತೆ ಕೊಹ್ಲಿ ಉತ್ತಮ ಅಡಿಪಾಯ.!

ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ವಿರಾಟ್​, ಫಾಫ್ ಡುಪ್ಲೆಸಿ ಉತ್ತಮ ಅಡಿಪಾಯ ಹಾಕಿದ್ರು. ಮೊದಲ ಇನ್ನಿಂಗ್ಸ್​ಗೆ 125 ರನ್​ಗಳ ಸಾಲಿಡ್ ಓಪನಿಂಗ್ ನೀಡಿದ್ರು. ಆದ್ರೆ, 44 ರನ್ ಗಳಿಸಿ ಬ್ಯಾಟ್ ಬೀಸ್ತಿದ್ದ ಫಾಫ್, ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಆದ್ರೆ, ಮತ್ತೊಂದಡೆ ಭರ್ಜರಿ ಬ್ಯಾಟಿಂಗ್​ ನಡೆಸ್ತಿದ್ದ ವಿರಾಟ್, ಕೇವಲ 39 ಎಸೆತದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದರು. ಈ ಮೂಲಕ ಐಪಿಎಲ್‌ನಲ್ಲಿ 7,500 ರನ್‌ ತಲುಪಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.

ಶತಕ ಸಿಡಿಸಿ ಮಿಂಚಿದ ವಿರಾಟ್​ ಕೊಹ್ಲಿ..!

ಅರ್ಧಶತಕದ ಬಳಿಕ ವಿರಾಟ್​, ಅಬ್ಬರ ಮತ್ತಷ್ಟು ಜೋರಾಯ್ತು. ರನ್​ ಗಳಿಕೆಗೆ ವೇಗ ನೀಡಿದ ಕೊಹ್ಲಿ, 67 ಎಸೆತದಲ್ಲಿ 9 ಬೌಂಡರಿ, 4 ಸಿಕ್ಸ್​ ಸಿಡಿಸಿದ್ರು. ಪಿಂಕ್​ ಸಿಟಿಯಲ್ಲಿ ಶತಕ ಪೂರೈಸಿ ಸಂಭ್ರಮಿಸಿದ್ರು. ಇದರೊಂದಿಗೆ ಪ್ರಸಕ್ತ ಐಪಿಎಲ್​ನಲ್ಲಿ ಚೊಚ್ಚಲ ಹಾಗೂ ಒಟ್ಟಾರೆ ಐಪಿಎಲ್​ನಲ್ಲಿ 8ನೇ ಶತಕ ದಾಖಲಿಸಿದ ಸಾಧನೆ ಮಾಡಿದ್ರು.

ವಿರಾಟ್​ ಕೊಹ್ಲಿ ಇನ್ನಿಂಗ್ಸ್​

ವೇಗಿಗಳ 39 ಎಸೆತಗಳನ್ನ ಎದುರಿಸಿದ ವಿರಾಟ್, 67 ರನ್ ಸಿಡಿಸಿದ್ರು. 171.79ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 11 ಬೌಂಡರಿ, 1 ಸಿಕ್ಸರ್​ ದಾಖಲಿಸಿದ್ರು. ಸ್ಪಿನ್ನರ್​ಗಳ 33 ಎಸೆತ ಎದುರಿಸಿದ ವಿರಾಟ್, 46 ರನ್ ಕಲೆ ಹಾಕಿದ್ರು. ಕೇವಲ 139.39ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಕೊಹ್ಲಿ, 1 ಬೌಂಡರಿ, 3 ಸಿಕ್ಸರ್ ದಾಖಲಿಸಲಷ್ಟೇ ಶಕ್ತವಾದ್ರು.

ಶತಕದೊಂದಿಗೆ ಹಲವು ದಾಖಲೆ ಬರೆದ ವಿರಾಟ್..!

ಈ ಶತಕದೊಂದಿಗೆ ವಿರಾಟ್​, ಐಪಿಎಲ್​ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ರು. ಗರಿಷ್ಠ ರನ್, ಗರಿಷ್ಠ ಶತಕ ಗಳಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾದ್ರು.

ಇದನ್ನೂ ಓದಿ: ತುಳಸಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು.. ಮನೆ ಅಂದವಷ್ಟೇ ಅಲ್ಲ, ಆರೋಗ್ಯಕ್ಕೂ ವೃಂದಾ ಬಹುಉಪಕಾರಿ

ಐಪಿಎಲ್​​ನಲ್ಲಿ​ ಕೊಹ್ಲಿ ಗರಿಷ್ಠ ಶತಕದ ದಾಖಲೆ

ಐಪಿಎಲ್​ನಲ್ಲಿ ವಿರಾಟ್​ 8 ಶತಕ ದಾಖಲಿಸಿ ಮೊದಲ ಸ್ಥಾನದಲ್ಲಿದ್ರೆ, 6 ಶತಕಗಳೊಂದಿಗೆ ಕ್ರಿಸ್​​ಗೇಲ್​​ ಹಾಗೂ ಜೋಸ್​ ಬಟ್ಲರ್​​ 2ನೇ ಸ್ಥಾನದಲ್ಲಿದ್ದಾರೆ. 4 ಶತಕ ಸಿಡಿಸಿರುವ ಕೆ.ಎಲ್.ರಾಹುಲ್ 3ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಶತಕ ಸಿಡಿಸಿ ದಾಖಲೆಗಳನ್ನ ದಮನ ಮಾಡಿದ್ರು ನಿಜ. ಆದ್ರೆ, ಇದೇ ಸೆಂಚುರಿ ಪೂರೈಸುವ ಹಂತದಲ್ಲಿ ಆಡಿದ ಸ್ಲೋ ಇನ್ನಿಂಗ್ಸ್​​ ತಂಡದ ಹಿನ್ನಡೆ ಕೂಡ ಆಯ್ತು. ಅದೇನೆ ಇರಲಿ. ಜೈಪುರದಲ್ಲಿ ವಿರಾಟ್​​ ಕೊಹ್ಲಿ ಅಬ್ಬರಿಸದೇ ಇದ್ದಿದ್ರೆ, ಆರ್​​​ಸಿಬಿ ಇನ್ನಷ್ಟು ಹೀನಾಯ ಸೋಲಿಗೆ ಶರಣಾಗ್ತಿತ್ತು ಅನ್ನೋದೂ ಅಷ್ಟೇ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬ್ಯಾಟ್​ನಿಂದಲೇ ಟೀಕೆಗಳಿಗೆ ಉತ್ತರಿಸಿದ ಕಿಂಗ್ ಕೊಹ್ಲಿ.. ವಿರಾಟ್​ ಸೆಂಚುರಿ ಬಾರಿಸದಿದ್ರೆ RCB ಗತಿ ಏನಾಗುತ್ತಿತ್ತು?

https://newsfirstlive.com/wp-content/uploads/2024/04/VIRAT_KOHLI-6.jpg

Load More