ರಾಮ ಮಂದಿರದ ಮತ್ತೊಂದು ವಿಗ್ರಹ ಫೋಟೋ ಔಟ್
ಬಳಿ ಶಿಲೆಯ ರಾಮಲಲ್ಲಾನ ವಿಗ್ರಹ ಕೂಡ ಆಕರ್ಷಕವಾಗಿದೆ
ಶಿಲ್ಪಿ ಸತ್ಯನಾರಾಯಣ್ ಪಾಂಡೆ ಕೆತ್ತಿರುವ ಮೂರ್ತಿ
ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಕೃಷ್ಣ ಶಿಲೆಯಿಂದ ಕೆತ್ತಿರುವ ರಾಮಲಲ್ಲಾನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಇನ್ನೆರಡು ರಾಮಲಲ್ಲಾನ ವಿಗ್ರಹಗಳು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಪರ್ದಿಯಲ್ಲಿದ್ದು, ಅದರಲ್ಲಿ ರಾಜಸ್ಥಾನದ ಶಿಲ್ಪಿ ಸತ್ಯ ನಾರಾಯಣ ಪಾಂಡೆ ಕೆತ್ತಿದ ರಾಮಲಲ್ಲಾ ಮೂರ್ತಿ ಫೋಟೋ ಬಹಿರಂಗ ಆಗಿದೆ.
ಸತ್ಯ ನಾರಾಯಣ್ ಪಾಂಡೆ ಬಿಳಿ ಮಾರ್ಬಲ್ನಿಂದ ರಾಮಲಲ್ಲಾ ಮೂರ್ತಿ ಕೆತ್ತಿದ್ದು, ಕೈಯಲ್ಲಿ ಚಿನ್ನದ ಬಿಲ್ಲು, ಬಾಣದಿಂದ ಅಲಂಕರಿಸಲಾಗಿದೆ. ದೇವತೆಯ ಹಿಂದೆ ಕಾಮಾನಿನಂತೆ ಕಾಣುವ ರಚನೆಯಲ್ಲಿ ವಿಷ್ಣುವಿನ ವಿವಿಧ ಅವತಾರಗಳನ್ನು ಒಳಗೊಂಡಿದೆ. ದೇವತೆಯನ್ನು ಅಲಂಕರಿಸಿರುವ ಆಭರಣಗಳು ಮತ್ತು ಬಟ್ಟೆಗಳು ಅಮೃತ ಶಿಲೆಯಿಂದ ಕೆತ್ತಲಾಗಿದ್ದು, ವಿಗ್ರಹದಲ್ಲಿ ಕರಕುಶಲತೆ ಎದ್ದು ಕಾಣುತ್ತಿದೆ.
ಇದನ್ನು ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಗೌರವ ಪೂರ್ವಕವಾಗಿ, ಸನ್ಮಾನ ಪೂರ್ವಕವಾಗಿ ಮಂದಿರದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ರಾಮ ಮಂದರಿದ ಗರ್ಭಗುಡಿಯಲ್ಲಿ ಇಟ್ಟಿರುವ ಬಾಲರಾಮನ ವಿಗ್ರಹದ ಕೃಷ್ಣ ಶಿಲೆಯು ಸುಮಾರು 2.5 ಬಿಲಿಯನ್ ವರ್ಷಗಳ ಹಳೆಯದು ಎಂದು ಎನ್ಆರ್ಐಎಂ (National Institute of Rock Mechanics)ನ ಹೆಚ್.ಎಸ್. ವೆಂಕಟೇಶ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ