ಅಮ್ಮ ನೀನೇಕೆ ಎಷ್ಟು ಕ್ರೂರಿಯಾದೆ..? ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ..

author-image
Ganesh
Updated On
ಅಮ್ಮ ನೀನೇಕೆ ಎಷ್ಟು ಕ್ರೂರಿಯಾದೆ..? ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ..
Advertisment
  • ಇಬ್ಬರು ಮಕ್ಕಳ ಪಾಲಿಗೆ ಅಮ್ಮ ಆದಳು ಯಮ
  • ಮಕ್ಕಳ ಮುಗಿಸಿ, ತಾನೂ ಕಣ್ಮುಚ್ಚಿದ ಪಾಪಿ ಹೆಣ್ಣು
  • ಆಸ್ಪತ್ರೆಯಲ್ಲಿ ಮಕ್ಕಳ ಬಗ್ಗೆ ತಾಯಿ ಹೇಳಿದ ದೂರು ಏನು?

ರಾಜಸ್ಥಾನದ ಸಿರೋಹಿ ಜಿಲ್ಲೆಯಿಂದ ಹೃದಯ ವಿದ್ರಾವಕ ಸುದ್ದಿ ಹೊರಬಿದ್ದಿದೆ. ಹಡೆದ ತಾಯಿ ಒಬ್ಬಳು ಪೈಶಾಚಿಕ ಕೃತ್ಯ ನಡೆಸಿದ್ದು, ಮುದ್ದಾದ ಅವಳಿ ಮಕ್ಕಳಿಗೆ ಮದ್ದು ನೀಡಿದ್ದಾಳೆ. ಬಳಿಕ ತನ್ನ ಬದುಕಿಗೂ ಫುಲ್​ಸ್ಟಾಪ್ ಇಟ್ಟಿದ್ದಾಳೆ.

ಸಿರೋಹಿ ಜಿಲ್ಲೆಯ ಶಿವಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶಿವಗಂಜ್ ಪ್ರದೇಶದಲ್ಲಿ ಕ್ರೂರಿ ತಾಯಿ ರೇಖಾ ವಾಸವಿದ್ದಳು. ಈಕೆಗೆ ಕಳೆದ ಅವಳಿ ಗಂಡುಮಕ್ಕಳು ಜನಿಸಿದ್ದರು. ಮಕ್ಕಳಿಗೆ ಕೇವಲ 1.25 ವರ್ಷವಾಗಿತ್ತು. ವಾಸ್ತವಾಗಿ ಈಕೆಗೆ ಅವಳಿ ಮಕ್ಕಳು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಹಾಲಲ್ಲಿ ವಿಷ ಹಾಕಿ ಮಕ್ಕಳ ಕತೆ ಮುಗಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:450ಕ್ಕೂ ಹೆಚ್ಚು ರೈತರಿಗೆ ಕೋಟಿ ಕೋಟಿ ಹಣ ಪಂಗನಾಮ.. ವ್ಯಾಪಾರಿ ಮಾಡಿದ್ದೇನು?

publive-image

ತನಿಖೆ ವೇಳೆ ಗೊತ್ತಾಗಿದ್ದು ಏನು?

ಆರೋಪಿ ರೇಖಾಗೆ ಗಂಡ ಇದ್ದಾನೆ. ಆತನ ಹೆಸರು ಯೋಗೇಶ್. ಈಕೆ ತನ್ನ ತಾಯಿ ಜೊತೆ ವಾಸವಾಗಿದ್ದಳು. ತನ್ನ ಅವಳಿ ಮಕ್ಕಳಿಗೆ ಪೂರ್ವಾಂಶ್ ಮತ್ತು ಪೂರ್ವಿತ್ ಎಂದು ಹೆಸರಿಟ್ಟಿದ್ದಳು. ಪತಿ ಮಹಾರಾಷ್ಟ್ರದಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದಾರೆ. ಬುಧವಾರ ಮಧ್ಯಾಹ್ನ ರೇಖಾ ಇಬ್ಬರು ಪುತ್ರರಿಗೆ ವಿಷ ಕೊಟ್ಟಿದ್ದಾಳೆ. ಜೊತೆಗೆ ತಾನೂ ವಿಷ ಸೇವಿಸಿದ್ದಾಳೆ.

ಮುನ್ನ ರೇಖಾ ಹೇಳಿದ್ದೇನು?

ವಿಷ ಸೇವನೆ ಬಳಿಕ ರೇಖಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಪೊಲೀಸರು ಆಕೆಯಿಂದ ಹೇಳಿಕೆ ಪಡೆದುಕೊಂಡಿದ್ದಾಳೆ. ನನಗೆ ಅವಳಿ ಮಕ್ಕಳನ್ನು ಸಾಕಲು ತೊಂದರೆಯಾಗುತ್ತಿತ್ತು. ಅದಕ್ಕೆ ಅವರನ್ನು ಮುಗಿಸಲು ನಿರ್ಧರಿಸಿದೆ. ಪ್ಲಾನ್ ಕಾರ್ಯರೂಪಕ್ಕೆ ತರಲು ಮದ್ದು ತಯಾರಿಸಿಕೊಂಡು ಇದ್ದೆ. ನನ್ನ ಹೆತ್ತ ತಾಯಿಯನ್ನು ಮನೆಯಿಂದ ಆಚೆ ಕಳುಹಿಸಿ ಮಕ್ಕಳಿಗೆ ನೀಡಿದೆ. ನಂತರ ನಾನು ತೆಗೆದುಕೊಂಡೆ ಎಂದಿದ್ದಾಳೆ.

ಇದನ್ನೂ ಓದಿ:ಚಿನ್ನ ಮನೆಯಲ್ಲಿದ್ದರೆ ಚೆನ್ನಾ..! ದೇಶದಲ್ಲಿ ಗೋಲ್ಡ್ ಲೋನ್ ಭಾರೀ ಹೆಚ್ಚಳ; RBI ಕಳವಳ; ಹೇಳಿದ್ದೇನು?

publive-image

ಆಮೇಲೆ ಏನಾಯ್ತು..?

ಔಟ್ ಸೈಡ್ ಹೋಗಿದ್ದ ರೇಖಾ ತಾಯಿ ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದರಿಂದ ಗಾಬರಿಯಾದ ರೇಖಾ ತಾಯಿ, ತರಾತುರಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಅಷ್ಟರಲ್ಲೇ ಇಬ್ಬರು ಮಕ್ಕಳು ಉಸಿರು ನಿಲ್ಲಿಸಿದ್ದರು. ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯೂ ಇದೀಗ ಬದುಕಿನ ಜರ್ನಿ ಮುಗಿಸಿದ್ದಾಳೆ. ಮಕ್ಕಳು, ಪತ್ನಿಯನ್ನು ಕಳೆದುಕೊಂಡ ಯೋಗೇಶ್ ಕಂಗಾಲಾಗಿದ್ದಾನೆ.

ಇದನ್ನು ಓದಿ:BBK11: ಅಮ್ಮನ ಅದೊಂದು ಮಾತಿಗೆ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಅಷ್ಟಕ್ಕೂ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment