newsfirstkannada.com

ಸೋತ್ರೂ ಹೃದಯ ಗೆದ್ದ ಆರ್​​ಸಿಬಿ.. ರೋಚಕ ಪಂದ್ಯ ಗೆದ್ದು ಕ್ವಾಲಿಫೈಯರ್​​ 2ಗೆ ಎಂಟ್ರಿ ಕೊಟ್ಟ ರಾಜಸ್ಥಾನ್

Share :

Published May 22, 2024 at 11:28pm

    ಇಂದು ರಾಜಸ್ಥಾನ್​​​ ರಾಯಲ್ಸ್​, ಬೆಂಗಳೂರು ಟೀಮ್​ ಮಧ್ಯೆ ರೋಚಕ ಪಂದ್ಯ

    ರೋಚಕ ಪಂದ್ಯದಲ್ಲಿ ರಾಜಸ್ಥಾನ್​ಗೆ ಸಾಧಾರಣ ಟಾರ್ಗೆಟ್​ ಕೊಟ್ಟ ಆರ್​​ಸಿಬಿ!

    ಆರ್​​ಸಿಬಿ ವಿರುದ್ಧ ಗೆದ್ದು ಕ್ವಾಲಿಫೈಯರ್​​ 2ಗೆ ಎಂಟ್ರಿ ಕೊಟ್ಟ ರಾಜಸ್ಥಾನ್​​ ಟೀಮ್​​​

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಗೆದ್ದು ಬೀಗಿದೆ. ಈ ಮೂಲಕ ಕ್ವಾಲಿಫೈಯರ್​​ 2ಕ್ಕೆ ಎಂಟ್ರಿ ಕೊಟ್ಟಿದೆ.

ಆರ್​​ಸಿಬಿ ನೀಡಿದ ಟಾರ್ಗೆಟ್​​ ಬೆನ್ನತ್ತಿದ ರಾಜಸ್ಥಾನ್​ ರಾಯಲ್ಸ್​ ಪರ ಜೈಸ್ವಾಲ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. 30 ಬಾಲ್​ನಲ್ಲಿ 8 ಫೋರ್​ನೊಂದಿಗೆ 45 ರನ್​​ ಚಚ್ಚಿದ್ರು. ಕ್ಯಾಡ್ಮೋರ್​​ 20, ಸ್ಯಾಮ್ಸನ್​ 17, ರಿಯಾನ್​ ಪರಾಗ್​​ 36, ಶಿಮ್ರಾನ್​ ಹೆಟ್ಮೇರ್​​ 26 ರನ್​ ಗಳಿಸಿದ್ರು. ರಾಜಸ್ಥಾನ್​​​ ರಾಯಲ್ಸ್​​ ಇನ್ನೂ ಒಂದು ಓವರ್​ ಬಾಕಿ ಇರುವಂತೆ 6 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿ ಗೆದ್ದು ಬೀಗಿದೆ.

ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಕೇವಲ 14 ಬಾಲ್​ನಲ್ಲಿ 17 ರನ್​ ಗಳಿಸಿ ಔಟಾದ್ರು. ಈ ಪೈಕಿ 1 ಸಿಕ್ಸರ್​​, 2 ಫೋರ್​ ಗಳಿಸಿದ್ರು. ಬೌಂಡರಿ ಬಾರಿಸಲು ಹೋಗಿ ಟ್ರೆಂಟ್​​ ಬೌಲ್ಟ್​ ಓವರ್​ನಲ್ಲಿ ಕ್ಯಾಚ್​ ನೀಡಿದ್ರು.

ಇವರ ಬಳಿಕ ಜವಾಬ್ದಾರಿಯುತವಾಗಿ ಬ್ಯಾಟ್​ ಬೀಸಿದ್ದ ವಿರಾಟ್​ ಕೊಹ್ಲಿ 24 ಬಾಲ್​ನಲ್ಲಿ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಚಹಾಲ್​ ಬೌಲಿಂಗ್​ನಲ್ಲಿ ಸಿಕ್ಸ್​ ಬಾರಿಸಲು ಹೋಗಿ ಕ್ಯಾಚ್​ ಕೊಟ್ಟರು. ಈ ಪೈಕಿ ಕೊಹ್ಲಿ 1 ಸಿಕ್ಸರ್​​, 3 ಫೋರ್​​ ಬಾರಿಸಿದ್ರು.

ಬಳಿಕ ಬಂದ ಕ್ಯಾಮೆರಾನ್​ ಗ್ರೀನ್​ 21 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 27 ರನ್​ ಸಿಡಿಸಿದ್ರು. ರಜತ್​ ಪಾಟಿದಾರ್​​ 22 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 34 ರನ್​ ಚಚ್ಚಿದ್ರು. ಮಹಿಪಾಲ್​ ಲೋಮ್ರೋರ್​​ 17 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 32 ರನ್​ ಬಾರಿಸಿದ್ರು. ದಿನೇಶ್​ ಕಾರ್ತಿಕ್​​ ಕೇವಲ 11 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್​ ಕಲೆ ಹಾಕಿತ್ತು.

ಇದನ್ನೂ ಓದಿ: ಕ್ರಿಕೆಟ್​ ಸಹವಾಸವೇ ಬೇಡ ಎಂದಿದ್ದ ಆಟಗಾರನನ್ನು ಆರ್​​ಸಿಬಿಗೆ ಕರೆ ತಂದ ಕೊಹ್ಲಿ.. ಯಾರು ಆ ಪ್ಲೇಯರ್​​?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೋತ್ರೂ ಹೃದಯ ಗೆದ್ದ ಆರ್​​ಸಿಬಿ.. ರೋಚಕ ಪಂದ್ಯ ಗೆದ್ದು ಕ್ವಾಲಿಫೈಯರ್​​ 2ಗೆ ಎಂಟ್ರಿ ಕೊಟ್ಟ ರಾಜಸ್ಥಾನ್

https://newsfirstlive.com/wp-content/uploads/2024/05/RCB_NEW.jpg

Load More