/newsfirstlive-kannada/media/post_attachments/wp-content/uploads/2025/06/Dubai-shaike.jpg)
ಇವತ್ತು ಎಲ್ಲೆಡೆ ಬಕ್ರೀದ್ ಹಬ್ಬ. ಅದೇ ಸಂಭ್ರಮದಲ್ಲಿ ಮೇಕೆಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಪ್ರಪಂಚದಾದ್ಯಂತ ಮೇಕೆಗಳಿಗೆ ಭಾರೀ ಡಿಮ್ಯಾಂಡ್ ಇದೆ. ಉತ್ತಮ ತಳಿಯ ಮೇಕೆಗಳಿಗೆ ವಿಶೇಷ ಬೇಡಿಕೆಯಿದೆ. ಆದರೆ ದುಬೈ ಜನರು ರಾಜಸ್ಥಾನದ ಮೇಕೆಗಳನ್ನು ತುಂಬಾ ಇಷ್ಟಪಡುತ್ತಾರೆ. ದುಬೈನಲ್ಲಿ ಇಲ್ಲಿನ ಮೇಕೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಯಾಕೆ ಗೊತ್ತಾ..?
ದುಬೈನ ಶೇಖ್‌ಗೆ ರಾಜಸ್ಥಾನಿ ಮೇಕೆ ಅಂದ್ರೆ ಇಷ್ಟ..
ದುಬೈನ ಶೇಖ್‌ಗಳು ಆಡಂಬರ ಮತ್ತು ವೈಭವದ ಜೀವನಕ್ಕೆ ಹೆಸರುವಾಸಿ. ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಅವರಿಗೆ ಒಳ್ಳೆಯ ಮಾಂಸಾಹಾರ ತಿನ್ನಬೇಕು ಎನಿಸಿದಾಗ ಒಂಟೆಗಳು ಮತ್ತು ಮೇಕೆಗಳಿಗಾಗಿ ರಾಜಸ್ಥಾನವನ್ನು ನೆನಪಿಸಿಕೊಳ್ತಾರೆ. ಶೇಖ್‌ಗಳು ತಮ್ಮ ಕಾರ್ಯಕ್ರಮಗಳಿಗೆ ಹೆಚ್ಚಾಗಿ ರಾಜಸ್ಥಾನದಿಂದ ಒಂಟೆಗಳು ಮತ್ತು ಮೇಕೆಗಳನ್ನು ತರಿಸಿಕೊಳ್ಳುತ್ತಾರೆ. ಅವರಿಗೆ ರಾಜಸ್ಥಾನಿ ಮೇಕೆಗಳೆಂದರೆ ತುಂಬಾ ಇಷ್ಟ, ಅದಕ್ಕಾಗಿಯೇ ಪ್ರತಿ ವರ್ಷ ರಾಜಸ್ಥಾನದಿಂದ ದುಬೈಗೆ ಹೆಚ್ಚಿನ ಸಂಖ್ಯೆಯ ಮೇಕೆಗಳನ್ನು ಕಳುಹಿಸಲಾಗುತ್ತದೆ.. ಶೇಖ್‌ಗಳು ಲಕ್ಷ, ಲಕ್ಷ ರೂಪಾಯಿ ನೀಡಿ ಅಲ್ಲಿನ ಮೇಕೆಗಳನ್ನು ಖರೀದಿಸುತ್ತಾರೆ.
ರಾಜಸ್ಥಾನಿ ಮೇಕೆಗಳ ವಿಶೇಷತೆ..
ರಾಜಸ್ಥಾನಿ ಮೇಕೆಗಳು 7 ಅಡಿ ಎತ್ತರ ಹೊಂದಿರುತ್ತವೆ. ಅವುಗಳ ತೂಕ ಸರಾಸರಿ 120 ಕೆಜಿ ಮತ್ತು ಅವುಗಳ ಆಹಾರದಲ್ಲಿ ಗೋಡಂಬಿ, ಬಾದಾಮಿ ಮತ್ತು ಹಾಲು ಸೇರಿವೆ. ಒಂದು ಮೇಕೆಯ ಬೆಲೆ ಒಂದು ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ವರದಿಗಳ ಪ್ರಕಾರ, ಬಕ್ರೀದ್‌ಗೂ ಮುನ್ನ ರಾಜಸ್ಥಾನದಿಂದ ದುಬೈಗೆ 1000 ಕ್ಕೂ ಹೆಚ್ಚು ಮೇಕೆಗಳನ್ನು ಕಳುಹಿಸಲಾಗಿದೆ. ರಾಜಸ್ಥಾನದ ಅತಿದೊಡ್ಡ ಮೇಕೆ ಮಾರುಕಟ್ಟೆಯಾದ ಅಜ್ಮೀರ್‌ದಲ್ಲಿ 10 ಕ್ಕೂ ಹೆಚ್ಚು ತಳಿಗಳ ಮೇಕೆಗಳು ಲಭ್ಯವಿದೆ.
ಇದನ್ನೂ ಓದಿ: ಪಿರಿಯಡ್ಸ್ ಟೈಮ್ನಲ್ಲಿ ಅಪ್ಪಿತಪ್ಪಿಯೂ ಈ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ; ಗಂಭೀರ ಸಮಸ್ಯೆಗೆ ಕಾರಣವಾಗಬಹುದು!
ಇಲ್ಲಿನ ಮೇಕೆಗಳಿಗೆ ಹಸಿರು ಮೇವು, ಬಾರ್ಲಿ, ಲವಂಗ ಎಲೆಗಳು, 10 ಕೆಜಿ ಹಾಲು ಮತ್ತು ತಿನ್ನಲು ಗೋಡಂಬಿ ಮತ್ತು ಬಾದಾಮಿಗಳನ್ನು ನೀಡಲಾಗುತ್ತದೆ. ಇವುಗಳಿಗೆ ನೀಡುವ ಆಹಾರ ಪದ್ಧತಿಯೂ ಕೂಡ ಮೇಕೆಗಳ ಬೆಲೆಯನ್ನು ಹೆಚ್ಚಿಸಿದೆ. ವಿದೇಶಗಳಿಂದ ಮೇಕೆ ಪ್ರಿಯರು ಇಲ್ಲಿಗೆ ಬರುತ್ತಾರೆ. ವಿಶೇಷವಾಗಿ ವ್ಯಾಪಾರಿಗಳು ದುಬೈನಿಂದ ಬರುತ್ತಾರೆ. ಮೊದಲು ಹಡಗಿನ ಮೂಲಕ ಅಲ್ಲಿಗೆ ಕಳುಹಿಸಲಾಗುತ್ತಿತ್ತು. ಈಗ ವಿಮಾನದ ಮೂಲಕ ದುಬೈಗೆ ಸಾಗಿಸಲಾಗುತ್ತದೆ. ಜಾಫ್ರಿ, ಸಿರೋಹಿ, ವಿಲಾಯತಿ, ಗುಜ್ರಿ, ಮಾರ್ವಾರಿ, ಜಮ್ನಪರಿ, ಸೋಜಾತಿ, ನಾಗೌರಿ, ಬಾರ್ಬರಿ ಮೇಕೆಗಳು ರಾಜಸ್ಥಾನದಲ್ಲಿವೆ.
ಇದನ್ನೂ ಓದಿ: ಮಿಸ್ ವರ್ಲ್ಡ್ ಲೈಫ್ನಲ್ಲಿ ಪವಾಡ.. ಕ್ಯಾನ್ಸರ್ ಗೆದ್ದು ವಿಶ್ವ ಸುಂದರಿಯಾದ ಥೈಲ್ಯಾಂಡ್ ರಾಣಿ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ