BBK11: ಮಾಜಿ ಗೆಳತಿ ಜೊತೆಗಿರೋ ಫೋಟೋ ವೈರಲ್​.. ಮಾತಿನಲ್ಲೇ ಟ್ರೋಲರ್ಸ್​ಗೆ ಬೆವರಿಳಿಸಿದ ರಜತ್​

author-image
Veena Gangani
Updated On
BBK11: ಮಾಜಿ ಗೆಳತಿ ಜೊತೆಗಿರೋ ಫೋಟೋ ವೈರಲ್​.. ಮಾತಿನಲ್ಲೇ ಟ್ರೋಲರ್ಸ್​ಗೆ ಬೆವರಿಳಿಸಿದ ರಜತ್​
Advertisment
  • ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್​
  • ಒಂದೇ ಮಾತಿನಲ್ಲೇ ಟ್ರೋಲರ್ಸ್​ಗೆ ಶಾಕ್​ ಕೊಟ್ಟ ರಜತ್
  • ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಗೆಳತಿಗೆ ಫೋಟೋ ವೈರಲ್

ಕನ್ನಡದ ಬಿಗ್​ಬಾಸ್ ಸೀಸನ್​ 11 ಗ್ರ್ಯಾಂಡ್​ ಆಗಿ ಅಂತ್ಯ ಕಂಡಿದೆ. 50 ದಿನ ಪೂರೈಸಿದ್ದ ಬಿಗ್‌ಬಾಸ್ ಮನೆಗೆ ಖಡಕ್​ ಆಗಿ ಕಾಲಿಟ್ಟಿದ್ದ ರಜತ್ ಟಾಪ್​ 2 ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಟಾಪ್​ 3 ಸ್ಥಾನಕ್ಕೆ ಬಂದಿದ್ದ ರಜತ್​ ಸದ್ಯ ವಿನ್ನಿಂಗ್​ ಮೂಡ್​ನಲ್ಲಿದ್ದಾರೆ.

ಇದನ್ನೂ ಓದಿ: BBK11 Grand Finale: ಬಿಗ್​ಬಾಸ್ ಸೀಸನ್ 11 ರೋಚಕ ರಿಸಲ್ಟ್‌.. ತ್ರಿವಿಕ್ರಮ್ ಸೋಲಿಗೆ ಅಸಲಿ ಕಾರಣವೇನು?

publive-image

ಆದ್ರೆ, ಇದರ ಮಧ್ಯೆ ರಜತ್​ ಬಿಗ್​ಬಾಸ್ ಮನೆಯಲ್ಲಿದ್ದಾಗ ​ಅವರ ಪತ್ನಿ ಅಕ್ಷತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೌದು, ಮಾಜಿ ಗೆಳತಿಯ ಜೊತೆಗಿದ್ದ ರಜತ್‌ ಫೋಟೋಗಳು ವೈರಲ್ ಆಗಿದ್ದು, ಹೀಗಾಗಿ ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಅಕ್ಷತಾ ಮೆಸೇಜ್ ಮಾಡಿದ್ರು. ಆದ್ರೆ, ಟ್ರೋಲ್​ ಪೇಜ್​ವೊಂದು ಫೋಟೋ ಡಿಲೀಟ್ ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. ಇದಾದ ಬಳಿಕ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ ಅಕ್ಷತಾ ಹಣ ಟ್ರಾನ್ಸ್‌ಫರ್ ಮಾಡಿದ್ರು. ಹಣ ಹಾಕಿದ ಬಳಿಕವೂ ಬೇರೆ ಟ್ರೋಲ್‌ ಪೇಜ್‌ನಲ್ಲಿ ಫೋಟೋ ವೈರಲ್ ಆಗಿದ್ದವು. ಆಗ ಪತ್ನಿ ಅಕ್ಷತಾ ಅವರು ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಪದೇ ಪದೇ ಫೋಟೋಗಳು ವೈರಲ್​ ಮಾಡ್ತಾ ಇದಿದ್ದರಿಂದ ಪಶ್ಟಿಮ ವಿಭಾಗದ ಠಾಣೆಗೆ ರಜತ್​ ಪತ್ನಿ ಅಕ್ಷತಾ ದೂರು ಕೊಟ್ಟಿದ್ದರು. ದೂರಿನ ಬಳಿಕ 10ಕ್ಕೂ ಹೆಚ್ಚು ಟ್ರೋಲ್ ಪೇಜ್‌ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು.

ಇದೀಗ ಬಿಗ್​ಬಾಸ್​ ಮನೆಯಿಂದ ರನ್ನರ್ ಅಪ್​ ಆಗಿ ಆಚೆ ಬಂದಿದ್ದ ರಜತ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ರಜತ್​, ಏನು ತೊಂದರೆ ಇಲ್ಲ, ಟ್ರೋಲ್​ ಆಗಲಿ ಬಿಡಿ, ಈಗ ನಾನು ಆಚೆ ಬಂದಿದ್ದೀನಿ ಅಲ್ವಾ ನೋಡಿಕೊಳ್ತೀನಿ ಎಂದು ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment