/newsfirstlive-kannada/media/post_attachments/wp-content/uploads/2025/03/Rajath-Kishan-Reels-case-1.jpg)
ಬೆಂಗಳೂರು: ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ವಿನಯ್ ಗೌಡ, ರಜತ್‌ಗೆ ಸಂಕಷ್ಟ ಎದುರಾಗಿದೆ. ನಿನ್ನೆ ಆರೋಪಿಗಳಿಂದ ಲಾಂಗ್ ಜಪ್ತಿ ಮಾಡಿದ್ದ ಪೊಲೀಸರು ಇಂದು ಮತ್ತೆ ವಿನಯ್, ರಜತ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸಾಕ್ಷ್ಯ ನಾಶ ಮಾಡಿದ ಅನುಮಾನ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.
ಇಂದು ಪೊಲೀಸ್ ಠಾಣೆಗೆ ಹಾಜರಾದ ಆರೋಪಿ ವಿನಯ್, ರಜತ್ ಇಬ್ಬರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಕೆಲ ಹೊತ್ತು ವಿಚಾರಣೆ ನಡೆಸಿದ ಪೊಲೀಸರು ಸ್ಥಳ ಮಹಜರು ಮಾಡಲು ನಿರ್ಧಾರ ಮಾಡಿದರು.
/newsfirstlive-kannada/media/post_attachments/wp-content/uploads/2025/03/Vinay-Rajat-kishan-Reels-Case.jpg)
ವಿನಯ್, ರಜತ್ ರೀಲ್ಸ್ ಮಾಡಿದ ಅಕ್ಷಯ ಸ್ಟುಡಿಯೋಗೆ ಕರೆದೊಯ್ದ ಪೊಲೀಸರು, ಸ್ಥಳ ಮಹಜರು ಕೂಡ ಮಾಡಿದ್ದಾರೆ. ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಪೊಲೀಸರು ಆರೋಪಿಗಳ ಮುಂದೆಯೇ ಸ್ಥಳ ಮಹಜರು ಮಾಡಿದ್ದಾರೆ.
ಇದನ್ನೂ ಓದಿ: 3,900 ಚದರ ಕಿ.ಮೀ ಭೂಕಬಳಿಕೆಗೆ ಯತ್ನ.. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ನಿತ್ಯಾನಂದ! ಅಸಲಿಯತ್ತು ಏನು?
ರೀಲ್ಸ್ ಮಾಡಿದ ಜಾಗದಲ್ಲಿ ಆರೋಪಿಗಳ ಸ್ಥಳ ಮಹಜರು ಮಾಡಿದ ಬಳಿಕ ಪೊಲೀಸರು ತನಿಖೆ ಮುಂದುವರಿಸುತ್ತಾರೆ. ಮಹಜರು ನಂತರ ಪೊಲೀಸರಿಗೆ ಆರೋಪಿಗಳು ನೀಡಿದ ಹೇಳಿಕೆ ಹಾಗೂ ಜಪ್ತಿ ಮಾಡಿರುವ ಆಯುಧದ ಮೇಲೆ ಅನುಮಾನ ಬಂದ್ರೆ ಈ ಪ್ರಕರಣದಲ್ಲಿ ಸಾಕ್ಷನಾಶ ಸೆಕ್ಷನ್ ಹಾಕುವ ಸಾಧ್ಯತೆ ಇದೆ. ಸದ್ಯ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆದಿದ್ದು, ಪೊಲೀಸರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
/newsfirstlive-kannada/media/post_attachments/wp-content/uploads/2025/03/Rajath-Kishan-Reels-case.jpg)
ಮಹಜರ್‌ಗೂ ಮುನ್ನ ರಜತ್ ಹೇಳಿದ್ದೇನು?
ಪೊಲೀಸ್ ಠಾಣೆಗೆ ತೆರಳುವ ಮುನ್ನ ರಜತ್ ವಿಡಿಯೋ ಮಾಡಿದ್ದು, ಕೆಲ ಸ್ಪಷ್ಟನೆಯನ್ನು ನೀಡಿದ್ದಾರೆ. ನಾವು ಯಾವೂದೇ ದುರುದ್ದೇಶದಿಂದ ಲಾಂಗ್ ರೀಲ್ಸ್ ಮಾಡಿಲ್ಲ. ಪೊಲೀಸರನ್ನ ಮಿಸ್ ಗೈಡ್ ಮಾಡಿ ಸುಳ್ಳು ಹೇಳೋ ಅವಶ್ಯಕತೆ ಕೂಡ ಇರಲಿಲ್ಲ.
ನಿನ್ನೆ ನಾವು ಸ್ಟೇಷನ್‌ನಲ್ಲಿ ಇದ್ದ ಕಾರಣ ಸೆಟ್‌ನವರು ಬೇರೆ ಪ್ರಾಪರ್ಟಿ ಕೊಟ್ಟಿದ್ದಾರೆ. ಅದನ್ನು ನಾವು ಗಮನಿಸಿಲ್ಲ. ಅದು ತಪ್ಪಾಗಿದೆ ಅಂತ ಹೇಳ್ತಿದ್ದಾರೆ. ಇವಾಗ ಅದನ್ನ ತರಿಸಲಾಗುವುದು. ನಾವು ಇವಾಗ ಸ್ಟೇಷನ್‌ಗೆ ಹೋಗ್ತಿದ್ದೇವೆ. ಈ ವಿಚಾರವನ್ನು ಬೇರೆ ರೀತಿ ತೋರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us