/newsfirstlive-kannada/media/post_attachments/wp-content/uploads/2025/03/Vinay-Rajat-kishan-Arrest.jpg)
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರು ಕುಚಿಕು ಗೆಳೆಯರು. ಕಳೆದ 10 ವರ್ಷಗಳಿಂದ ಇವರಿಬ್ಬರ ಮಧ್ಯೆ ಸ್ನೇಹ ಸಂಬಂಧ ಚೆನ್ನಾಗಿತ್ತು. ಆದರೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಮೇಲೆ ಇವರಿಬ್ಬರ ಸ್ನೇಹಕ್ಕೆ ತುಕ್ಕು ಹಿಡಿದಿದೆ. ಇಬ್ಬರು ಈಗ ಬೇರೆ, ಬೇರೆಯಾಗಿದ್ದು, ವಿನಯ್ ಗೌಡ ಅವರ ಮೇಲೆ ರಜತ್ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ರೀಲ್ಸ್‌ಗಾಗಿ ಮಚ್ಚು ಹಿಡಿದ ತಪ್ಪಿಗೆ ಬಸವೇಶ್ವರನಗರ ಪೊಲೀಸರು ರಜತ್ ಹಾಗೂ ವಿನಯ್ ವಿರುದ್ಧ ಕೇಸ್ ಹಾಕಿ ಬಂಧಿಸಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರ ಬಿದ್ದ ಬಿಗ್ ಬಾಸ್ ಸ್ಪರ್ಧಿಗಳು ಇದೀಗ ನಾನೊಂದು ತೀರ, ನೀನೊಂದು ತೀರ ಆಗಿದ್ದಾರೆ. ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ರಜತ್ ಕಿಶನ್ ಅವರು ವಿನಯ್ ಫ್ರೆಂಡ್‌ಶಿಪ್‌ಗೆ ಗುಡ್ ಬೈ ಹೇಳಿದ್ದಾರೆ.
ಅಸಲಿಗೆ ಆಗಿದ್ದೇನು?
ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದ ಕೆಲವು ದಿನಗಳವರೆಗೂ ರಜತ್ ಹಾಗೂ ವಿನಯ್ ಸ್ನೇಹದಲ್ಲಿ ಸರಿಯಾಗಿಯೇ ಇತ್ತು. ಆದರೆ ವಿನಯ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ರೀಲ್ಸ್ ಘಟನೆಗೆ ಕ್ಷಮಾಪಣೆ ಕೇಳಿದ್ದರು. ತಮ್ಮ ಅಭಿಮಾನಿಗಳಿಗೆ ಈ ರೀತಿ ಯಾರು ಮಾಡಬೇಡಿ ಅನ್ನೋ ಮನವಿ ಮಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸಾರಿ ಕೇಳಿದ ವಿನಯ್ ಗೌಡ ಅವರು ಅಭಿಮಾನಿಗಳ ಪ್ರೀತಿಗೆ ತಲೆ ಬಾಗಿದ್ದರು. ತಮ್ಮ ಅಭಿಮಾನಿಗಳು ನೀವು ಒಳ್ಳೆಯವರು. ರಜತ್ ಅವರ ಜೊತೆ ನೀವು ಮಚ್ಚು ಹಿಡಿಯಬಾರದಿತ್ತು. ಅವರೊಂದಿಗೆ ರೀಲ್ಸ್ ಮಾಡಬೇಡಿ ಅನ್ನೋ ಕಾಮೆಂಟ್ ಹಾಕಿ ಮನವಿಯನ್ನು ಮಾಡಿದ್ದರು.
ಅಭಿಮಾನಿಗಳು ಪ್ರೀತಿಯಿಂದ ವಿನಯ್ ಅವರಿಗೆ ನೀವು ರಜತ್ ಜೊತೆ ರೀಲ್ಸ್ ಮಾಡಬೇಡಿ ಎಂದು ಮಾಡಿದ ಕಾಮೆಂಟ್‌ಗಳನ್ನ ವಿನಯ್ ಕೂಡ ಲೈಕ್ ಮಾಡಿದ್ದರು. ಇದೇ ರಜತ್ ಅವರಿಗೆ ವಿನಯ್ ಮೇಲೆ ಬೇಸರ ಆಗುವಂತೆ ಮಾಡಿದೆ. ಇದಾದ ಮೇಲೆ ಇಬ್ಬರು ಅಂತರ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ವಿನಯ್ ಗೌಡ ಕೈಯಲ್ಲಿ ಕೊಲೆ, ದರೋಡೆ ಮಾಡ್ಸಿಲ್ಲ; ಕುಚಿಕು ಸ್ನೇಹಿತರ ಮಧ್ಯೆ ಬಿರುಕು..!
ಮಚ್ಚು ಹಿಡಿದ ರೀಲ್ಸ್ ಘಟನೆಯ ಬಳಿಕ ರಜತ್ ಅವರಿಗೆ ವಿನಯ್ ಫೋನ್ ಮಾಡುತ್ತಿಲ್ಲವಂತೆ. ವಿನಯ್ ಜೊತೆ ಮನಃಸ್ತಾಪಗಳು ಆಗಿದೆ. ನಾನಂತು ಅವನನ್ನ ಬಿಟ್ಟು ಕೊಟ್ಟಿಲ್ಲ. ಮುಂದೆಯೂ ಬಿಟ್ಟು ಕೊಡೋದಿಲ್ಲ ಎಂದು ರಜತ್ ಅವರು ನ್ಯೂಸ್ ಫಸ್ಟ್ ಚಾನೆಲ್ ಮೂಲಕ ವಿನಯ್ ಗೌಡ ಅವರಿಗೆ ಕಿವಿಮಾತು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ