/newsfirstlive-kannada/media/post_attachments/wp-content/uploads/2025/03/Rajath-Kishan-Reels-case-2.jpg)
ಬೆಂಗಳೂರು: ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ ರಜತ್, ವಿನಯ್ ಗೌಡಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ಇಂದು ಮತ್ತೆ ವಿಚಾರಣೆಗೆ ಕರೆದಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರು ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದಾರೆ.
ಮತ್ತೆ ಬಂಧನಕ್ಕೆ ಕಾರಣವೇನು?
ಆರೋಪಿ ವಿನಯ್ ಗೌಡ, ರಜತ್ ಕಿಶನ್ ಅವರನ್ನು ನಿನ್ನೆಯೇ ವಶಕ್ಕೆ ಪಡೆದು ಹೇಳಿಕೆಯನ್ನು ದಾಖಲು ಮಾಡಲಾಗಿತ್ತು. ಈ ವೇಳೆ ರೀಲ್ಸ್ ಮಾಡೋ ವೇಳೆ ಬಳಸಿದ್ದು ಎನ್ನಲಾದ ಲಾಂಗ್ ಅನ್ನು ಜಪ್ತಿ ಮಾಡಲಾಗಿತ್ತು. ಆದರೆ ಅದು ಬೇರೆ, ರೀಲ್ಸ್‌ನಲ್ಲಿ ಬಳಸಿದ ಲಾಂಗ್ ಬೇರೆಯದ್ದು ಅನ್ನೋ ಅನುಮಾನ ವ್ಯಕ್ತವಾಗಿತ್ತು.
ಪೊಲೀಸರ ಪ್ರಾಥಮಿಕ ತನಿಖೆ ವೇಳೆ ನಕಲಿ ಲಾಂಗ್ ನೀಡಿರೋದು ಬಯಲಾಗಿದೆ. ಆರೋಪಿಗಳು ಅಸಲಿ ಲಾಂಗ್ ಅಕ್ಷಯ್ ಸ್ಟುಡಿಯೋಸ್‌ನಲ್ಲಿ ಇದೆ ಎಂದಿದ್ದಾರೆ. ಹೀಗಾಗಿ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ತನಿಖೆಯಲ್ಲಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನದ ಹಿನ್ನೆಲೆಯಲ್ಲಿ ರಜತ್, ವಿನಯ್ ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ವಿನಯ್, ರಜತ್‌ಗೆ ‘ಲಾಂಗ್’ ಟ್ರಬಲ್.. ಯಡವಟ್ಟು ಆಗಿದ್ದು ಎಲ್ಲಿ? ಪೊಲೀಸರಿಂದ ಸ್ಥಳ ಮಹಜರು!
ಸ್ಥಳ ಮಹಜರು ಬಳಿಕ ಆರೋಪಿಗಳನ್ನು ಪೊಲೀಸರು ನೇರವಾಗಿ ಕೋರ್ಟ್‌ಗೆ ಹಾಜರುಪಡಿಸುತ್ತಾರೆ. ನ್ಯಾಯಾಲಯದಲ್ಲಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಕಸ್ಟಡಿಗೆ ಪಡೆದ ಮೇಲೆ ಪೊಲೀಸರು ಒರಿಜಿನಲ್ ಲಾಂಗ್ ಸೀಜ್ ಮಾಡಬೇಕು. ಒರಿಜಿನಲ್ ಲಾಂಗ್ ಸಿಕ್ಕರೆ ಅದನ್ನ ಸೀಜ್ ಮಾಡಿಕೊಂಡು ಕೋರ್ಟ್‌ಗೆ ಹಾಜರು ಮಾಡುತ್ತಾರೆ. ಒಂದು ವೇಳೆ ತುಕ್ಕು ಹಿಡಿದಿರುವ ಒರಿಜಿನಲ್ ಲಾಂಗ್ ಸಿಕ್ಕಿಲ್ಲ ಅಂದ್ರೆ ಬಂಧನದ ಬಳಿಕ ಬಿಗ್ ಬಾಸ್ ಸ್ಫರ್ಧಿಗಳಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗುತ್ತದೆ.
ಶರ್ಟ್ ಬಟನ್ ಹಾಕಿಸಿದ್ರಾ ಪೊಲೀಸರು?
ಪೊಲೀಸರು ವಿಚಾರಣೆಗೆ ಹಾಜರಾಗಲು ಸೂಚಿಸಿದ ಹಿನ್ನೆಲೆಯಲ್ಲಿ ವಿನಯ್, ರಜತ್ ಇಬ್ಬರು ಸ್ಟೇಷನ್‌ಗೆ ಬಂದಿದ್ದರು. ಠಾಣೆಗೆ ಬರುವ ವೇಳೆ ರಜತ್ ಶರ್ಟ್ ಗುಂಡಿ ಹಾಕದೇ ರಾಜಾರೋಷವಾಗಿ ಎಂಟ್ರಿ ಆಗಿದ್ದರು. ಆದರೆ ಪೊಲೀಸ್ ಠಾಣೆಯಿಂದ ಸ್ಥಳ ಮಹಜರು ಮಾಡಲು ಪೊಲೀಸ್ ಜಿಪ್‌ನಲ್ಲಿ ತೆರಳುವಾಗ ಓಪನ್ ಆಗಿದ್ದ ರಜತ್ ಶರ್ಟ್ ಬಟನ್ ಹಾಕಿದ್ದು ಕಂಡು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ