newsfirstkannada.com

3 ಟೆಸ್ಟ್​​, 6 ಇನ್ನಿಂಗ್ಸ್​​.. ​2 ಡಕೌಟ್​​.. ಗಳಿಸಿದ್ದು ಕೇವಲ 61 ರನ್​​.. ಏನಾಗಿದೆ RCB ಸ್ಟಾರ್​​ಗೆ?

Share :

Published February 26, 2024 at 4:36pm

    ಐಪಿಎಲ್​​ನಲ್ಲಿ ಮಿಂಚಿದ್ದ ಆರ್​​ಸಿಬಿ ಸ್ಟಾರ್​ ಬ್ಯಾಟರ್​ ರಜತ್​ ಪಾಟಿದಾರ್​​

    ಟೀಮ್​ ಇಂಡಿಯಾಗೆ ಡೆಬ್ಯೂಟ್​ ಮಾಡಿದ್ರೂ ಸರಿಯಾಗಿ ಆಡದ ರಜತ್​​

    ಮೂರು ಟೆಸ್ಟ್​ 6 ಇನ್ನಿಂಗ್ಸ್​ನಲ್ಲಿ ರಜತ್​ ಗಳಿಸಿದ್ದು 61 ಕೇವಲ ರನ್​ ಮಾತ್ರ

ಅದು 2022ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಎಲಿಮಿನೇಟರ್ ಪಂದ್ಯ. ಅಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಬ್ಬರಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಲಕ್ನೋ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್​​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಈ ಮೂಲಕ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಂಕಷ್ಟದಲ್ಲಿದ್ದ ತಂಡಕ್ಕೆ ರಜತ್ ಪಾಟಿದಾರ್ ಆಸರೆಯಾದರು. ಐಪಿಎಲ್ ಪ್ಲೇ ಆಫ್ ಪಂದ್ಯಗಳಲ್ಲಿ ಗರಿಷ್ಠ ರನ್ ಸಿಡಿಸಿದ ಅನ್‌ಕ್ಯಾಪ್ ಪ್ಲೇಯರ್ ಅನ್ನೋ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ. ಅಂದಿನಿಂದ ಕ್ರೀಡಾ ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ರಜತ್​ ಪಾಟಿದಾರ್​ಗೆ ಟೀಮ್​ ಇಂಡಿಯಾ ಪರ ಆಡಲು ಅವಕಾಶ ಸಿಕ್ಕಿತ್ತು.

ಅದ್ಯಾಕೋ ರಜತ್​ ಪಾಟಿದಾರ್​​ ತನ್ನ ಮೇಲೆ ಟೀಮ್​ ಇಂಡಿಯಾ ಇಟ್ಟಿದ್ದ ಭರವಸೆಯನ್ನು ಮಣ್ಣುಪಾಲು ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇವೆ. ಏಕದಿನ ಕ್ರಿಕೆಟ್​ನಲ್ಲಿ ಭರವಸೆ ಮೂಡಿಸಿದ್ದ ರಜತ್​ ತನಗೆ ಸಿಕ್ಕ ಅವಕಾಶದಲ್ಲಿ 3 ಟೆಸ್ಟ್​ಗಳಲ್ಲೂ ಫೇಲ್ಯೂರ್​ ಆಗಿದ್ದಾರೆ.

ಭಾರತಕ್ಕೆ ಕೈಕೊಟ್ಟ ಆರ್​​ಸಿಬಿ ಸ್ಟಾರ್​​ ಬ್ಯಾಟರ್​​!

ಹೌದು, ಇಂಗ್ಲೆಂಡ್​ ವಿರುದ್ಧ ಕಳೆದ 2 ಟೆಸ್ಟ್​ಗಳಲ್ಲಿ ರಜತ್​ ಪಾಟಿದಾರ್​​​ ಸ್ಕೋರ್​ ಹೀಗಿದೆ. ಮೊದಲ ಟೆಸ್ಟ್ 2 ಇನ್ನಿಂಗ್ಸ್​ಗಳಲ್ಲಿ 41 ರನ್​ ಮತ್ತು 2ನೇ ಟೆಸ್ಟ್​ ಎರಡು ಇನ್ನಿಂಗ್ಸ್​ಗಳಲ್ಲೂ ಕೇವಲ 5 ರನ್ ಮತ್ತು 3ನೇ ಟೆಸ್ಟ್​ 2 ಇನ್ನಿಂಗ್ಸ್​ನಲ್ಲೂ ಕೇವಲ 17 ರನ್​​ ಗಳಿಸಿ ಔಟಾಗಿದ್ದಾರೆ. ಈ ಪೈಕಿ 2 ಡಕೌಟ್​ ಕೂಡ ಇದೆ. ಹೀಗಾಗಿ ಆರ್​​ಸಿಬಿ ಸ್ಟಾರ್​ ಬ್ಯಾಟರ್​ ವಿರುದ್ಧ ಟೀಮ್​ ಇಂಡಿಯಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಟೆಸ್ಟ್​​, 6 ಇನ್ನಿಂಗ್ಸ್​​.. ​2 ಡಕೌಟ್​​.. ಗಳಿಸಿದ್ದು ಕೇವಲ 61 ರನ್​​.. ಏನಾಗಿದೆ RCB ಸ್ಟಾರ್​​ಗೆ?

https://newsfirstlive.com/wp-content/uploads/2024/01/Rajat-Patidar.jpg

Load More