/newsfirstlive-kannada/media/post_attachments/wp-content/uploads/2024/12/JITESH-SHARMA.jpg)
ಐಪಿಎಲ್-2025ರಲ್ಲಿ ಟ್ರೋಫಿ ಗೆಲ್ಲಲು ಆರ್​ಸಿಬಿ ಬಲಿಷ್ಠ ತಂಡವನ್ನು ಕಟ್ಟಿದೆ. ವಿಶ್ವದ ಅಗ್ರ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಿದ್ದು, ಭಾರೀ ಕುತೂಹಲ ಮೂಡಿಸಿದೆ. ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಜೋಶ್ ಹೆಜಲ್‌ವುಡ್ ಮತ್ತು ಫಿಲ್ ಸಾಲ್ಟ್ ಸೇರಿದಂತೆ ವಿಶ್ವದ ಅನೇಕ ಟಾಪ್ ಕ್ರಿಕೆಟಿಗರಿದ್ದಾರೆ.
ಇದರ ಮಧ್ಯೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕೂಡ ಆರ್​​ಸಿಬಿಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದೆ. ಈ ಪಂದ್ಯಾವಳಿಯಲ್ಲಿ ಆರ್‌ಸಿಬಿಯ ಇಬ್ಬರು ಆಟಗಾರರು ವಿಧ್ವಂಸಕಕಾರಿ ರೀತಿಯಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ. ಇದರಿಂದ ಆರ್​​ಸಿಬಿಗೆ ನೂರಾನೆ ಬಲ ಸಿಕ್ಕಂತಾಗಿದೆ.
ರಜತ್ ಪಾಟಿದಾರ್
ಬೆಂಗಳೂರು ಫ್ರಾಂಚೈಸಿ 11 ಕೋಟಿಗೆ ರಜತ್ ಪಾಟಿದಾರ್​​​ ಅವರನ್ನು ಉಳಿಸಿಕೊಂಡಿದೆ. ಪಾಟಿದಾರ್ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶದ ಪರ ಆಡುತ್ತಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪ್ರಸಕ್ತ ಋತುವಿನಲ್ಲಿ 6 ಪಂದ್ಯಗಳನ್ನು ಆಡಿದ್ದಾರೆ. 6 ಪಂದ್ಯದಲ್ಲಿ 253 ರನ್ ಗಳಿಸಿದ್ದಾರೆ. ಅದರಲ್ಲಿ ಮೂರು ಅರ್ಧಶತಕ ಬಾರಿಸಿದ್ದಾರೆ. ಜೊತೆಗೆ ಅವರ ಸ್ಟ್ರೈಕ್​ ರೇಟ್ 177 ಆಗಿದೆ.
ಇತ್ತೀಚಿನ ಪಂದ್ಯದಲ್ಲಿ ರಜತ್, ಹೈದರಾಬಾದ್ ವಿರುದ್ಧ ಕೇವಲ 16 ಎಸೆತಗಳಲ್ಲಿ 36 ರನ್‌ಗಳಿಸಿದ್ದಾರೆ. ಛತ್ತೀಸ್‌ಗಢ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 3 ಸಿಕ್ಸರ್‌ಗಳು ಸೇರಿ 38 ರನ್ ಗಳಿಸಿದ್ದಾರೆ. ರಜತ್ ಜೊತೆಗೆ ಜಿತೇಶ್ ಶರ್ಮಾ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡ್ತಿದ್ದಾರೆ. ಜಿತೇಶ್ ಶರ್ಮಾ 229 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಇಬ್ಬರು ಯುವ ಆಟಗಾರರು ಫಾರ್ಮ್‌ನಲ್ಲಿರೋದ್ರಿಂದ ಆರ್​ಸಿಬಿಯ ಶಕ್ತಿ ದುಪ್ಪಟ್ಟು ಆಗಿದೆ. ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಅವರಂತಹ ಬಿರುಗಾಳಿಯ ಬ್ಯಾಟ್ಸ್‌ಮನ್‌ಗಳು ಕೂಡ ಆರ್​ಸಿಬಿಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us